For Quick Alerts
ALLOW NOTIFICATIONS  
For Daily Alerts

IPL 2024ಗೂ ಮುನ್ನ ರಿಲಯನ್ಸ್, ವಾಲ್ಟ್ ಡಿಸ್ನಿ ಐತಿಹಾಸಿಕ ವಿಲೀನ ಒಪ್ಪಂದ; ಅಧ್ಯಕ್ಷರಾಗಿ ನೀತಾ ಅಂಬಾನಿ ನೇಮಕ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ವಯಾಕಾಮ್18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿ ಬುಧವಾರ, ಫೆಬ್ರವರಿ 28ರಂದು ಜಂಟಿ ಉದ್ಯಮಕ್ಕಾಗಿ ನಿರ್ಣಾಯಕ ವಿಲೀನ ಒಪ್ಪಂದಗಳಿಗೆ ಸಹಿ ಮಾಡಿರುವುದಾಗಿ ಘೋಷಣೆ ಮಾಡಿವೆ.

ಇದರೊಂದಿಗೆ ವಯಾಕಾಮ್ 18 ಮತ್ತು ಸ್ಟಾರ್ ಇಂಡಿಯಾ ಒಗ್ಗೂಡುತ್ತಿವೆ. ವಹಿವಾಟಿನ ಭಾಗವಾಗಿ ವಯಾಕಾಮ್ 18ಗೆ ಸೇರಿದ ಮಾಧ್ಯಮ ಸಂಸ್ಥೆಗಳು ಕೋರ್ಟ್ ಅನುಮೋದಿತ ವ್ಯವಸ್ಥೆಯ ಮೂಲಕವಾಗಿ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ವಿಲೀನಗೊಳ್ಳಲಿವೆ.

Reliance, Walt Disney Sign Historic Merger Deal Ahead of IPL 2024; Nita Ambani Appoint As Chairperson

ಈ ಬೆಳವಣಿಗೆ ಕಾರ್ಯತಂತ್ರದ ಭಾಗವಾಗಿ ರಿಲಯನ್ಸ್‌ನಿಂದ 11,500 ಕೋಟಿ ರೂಪಾಯಿ ಹೂಡಿಕೆ ಮಾಡುವುದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಹಣಕಾಸಿನ ನಂತರದ ಆಧಾರದಲ್ಲಿ ಈ ಜಂಟಿ ಉದ್ಯಮದ ವಹಿವಾಟಿನ ಮೌಲ್ಯ 70,352 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ವಿಲೀನದ ಕೆಲವು ಅಂಶಗಳನ್ನು ಬಿಟ್ಟು ಇಷ್ಟು ಮೌಲ್ಯ ಮಾಡಲಾಗಿದೆ.

ಈ ಜಂಟಿ ಉದ್ಯಮದ ಸಂಪೂರ್ಣ ವಹಿವಾಟು ಮುಗಿದ ನಂತರ, ರಿಲಯನ್ಸ್ ಇದನ್ನು ನಿಯಂತ್ರಿಸಲಿದೆ. ರಿಲಯನ್ಸ್ ಪಾಲು ಶೇ.16.34ರಷ್ಟು, ವಯಾಕಾಮ್ 18 ಪಾಲು ಶೇ.46.82 ಮತ್ತು ವಾಲ್ಟ್ ಡಿಸ್ನಿ ಪಾಲು ಶೇ.36.84ರಷ್ಟು ಇರುತ್ತದೆ. ಈ ಜಂಟಿ ಉದ್ಯಮಕ್ಕೆ ಡಿಸ್ನಿಯಿಂದ ಇನ್ನೂ ಕೆಲವು ಮಾಧ್ಯಮ ಆಸ್ತಿಗಳನ್ನು ಕೊಡುಗೆ ನೀಡಬಹುದಾಗಿದ್ದು, ಅದು ನಿಯಂತ್ರಕ ಹಾಗೂ ಥರ್ಡ್ ಪಾರ್ಟಿ ಅನುಮೋದನೆಗೆ ಒಳಪಟ್ಟಿದೆ.

ಈ ಜಂಟಿ ಉದ್ಯಮದ ಅಧ್ಯಕ್ಷರಾಗಿ ನೀತಾ ಅಂಬಾನಿ ಅವರು ಉಪಾಧ್ಯಕ್ಷರಾದ ಉದಯಶಂಕರ್ ಅವರ ಜತೆಗೆ ಜಂಟಿ ಉದ್ಯಮದ ಕಾರ್ಯತಂತ್ರ ಮಾರ್ಗದರ್ಶನ ಮಾಡಲಿದ್ದಾರೆ. ಈ ಜಂಟಿ ಉದ್ಯಮದ ಮೂಲಕ ಭಾರತದಾದ್ಯಂತ 75 ಕೋಟಿ ವೀಕ್ಷಕರು ಒಂದು ನೆಲೆಯಲ್ಲಿ ನಿಲ್ಲಲಿದ್ದಾರೆ. ವಿಶ್ವದಾದ್ಯಂತ ಇರುವ ಭಾರತೀಯರಿಗೆ ಇದು ಸೇವೆ ಒದಗಿಸಲಿದೆ.

Reliance, Walt Disney Sign Historic Merger Deal Ahead of IPL 2024; Nita Ambani Appoint As Chairperson

ಈ ಜಂಟಿ ಉದ್ಯಮದ ಮೂಲಕ ಭಾರತದಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಡಿಸ್ನಿ ಸಿನಿಮಾ ಪ್ರೊಡಕ್ಷನ್ಸ್‌ಗೆ ವಿತರಣೆ ಹಕ್ಕು ದೊರೆಯಲಿದೆ. 30 ಸಾವಿರಕ್ಕೂ ಹೆಚ್ಚು ಡಿಸ್ನಿ ಕಂಟೆಂಟ್ ಆಸ್ತಿಗಳಿಗೆ ಲೈಸೆನ್ಸ್ ದೊರೆಯಲಿದೆ.

ಈ ಜಂಟಿ ಉದ್ಯಮದ ಕುರಿತು ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ, ""ಇದು ಭಾರತೀಯ ಮನರಂಜನಾ ಉದ್ಯಮದಲ್ಲಿ ಹೊಸ ಯುಗದ ಆರಂಭ ಸೂಚಿಸುವ ಮಹತ್ವದ ಒಪ್ಪಂದವಾಗಿದೆ. ನಾವು ಯಾವಾಗಲೂ ಡಿಸ್ನಿಯನ್ನು ಜಾಗತಿಕವಾಗಿ ಅತ್ಯುತ್ತಮ ಮಾಧ್ಯಮ ಗುಂಪು ಎಂದು ಗೌರವಿಸುತ್ತೇವೆ''.

"ರಾಷ್ಟ್ರದಾದ್ಯಂತ ಪ್ರೇಕ್ಷಕರಿಗೆ ಕೈಗೆಟುಕುವ ಬೆಲೆಯಲ್ಲಿ ಅಮೋಘವಾದ ಕಂಟೆಂಟ್ ತಲುಪಿಸಲು ನಮ್ಮ ವ್ಯಾಪಕ ಸಂಪನ್ಮೂಲಗಳು, ಸೃಜನಶೀಲ ಸಾಮರ್ಥ್ಯ ಮತ್ತು ಮಾರುಕಟ್ಟೆ ಒಳನೋಟಗಳನ್ನು ಒಟ್ಟುಗೂಡಿಸಲು ಸಹಾಯ ಮಾಡುವ ಈ ಕಾರ್ಯತಂತ್ರದ ಜಂಟಿ ಉದ್ಯಮವನ್ನು ರೂಪಿಸಲು ನಾವು ಉತ್ಸುಕರಾಗಿದ್ದೇವೆ. ರಿಲಯನ್ಸ್ ಗುಂಪಿನ ಪ್ರಮುಖ ಪಾಲುದಾರರಾಗಿ ಡಿಸ್ನಿಯನ್ನು ನಾವು ಸ್ವಾಗತಿಸುತ್ತೇವೆ," ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ವಾಲ್ಟ್ ಡಿಸ್ನಿ ಕಂಪನಿಯ ಸಿಇಒ ಬಾಬ್ ಐಗರ್ ಮಾತನಾಡಿ, "ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮಾರುಕಟ್ಟೆಯಾಗಿದೆ ಮತ್ತು ಕಂಪನಿಗೆ ದೀರ್ಘಾವಧಿಯ ಮೌಲ್ಯವನ್ನು ಸೃಷ್ಟಿಸಲು ಈ ಜಂಟಿ ಉದ್ಯಮವು ಒದಗಿಸುವ ಅವಕಾಶಗಳಿಗಾಗಿ ನಾವು ಉತ್ಸುಕರಾಗಿದ್ದೇವೆ. ರಿಲಯನ್ಸ್ ಭಾರತೀಯ ಮಾರುಕಟ್ಟೆ ಮತ್ತು ಗ್ರಾಹಕರ ಬಗ್ಗೆ ಅಗಾಧ ತಿಳಿವಳಿಕೆಯನ್ನು ಹೊಂದಿದೆ. ನಾವು ಒಟ್ಟಾಗಿ ದೇಶದ ಪ್ರಮುಖ ಮಾಧ್ಯಮ ಕಂಪನಿಗಳಲ್ಲಿ ಒಂದನ್ನು ಸೃಷ್ಟಿಸುತ್ತೇವೆ. ಡಿಜಿಟಲ್ ಸೇವೆಗಳು, ಮನರಂಜನೆ ಮತ್ತು ಕ್ರೀಡಾ ಕಂಟೆಂಟ್‌ಗಳ ವಿಶಾಲವಾದ ವಿಭಾಗಗಳೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ನಮಗೆ ಅವಕಾಶ ಮಾಡಿಕೊಡುತ್ತದೆ," ಎಂದು ಹೇಳಿದ್ದಾರೆ.

ಬೋಧಿ ಟ್ರೀ ಸಿಸ್ಟಮ್ಸ್‌ನ ಸಹ-ಸಂಸ್ಥಾಪಕರಾದ ಉದಯ್ ಶಂಕರ್ ಮಾತನಾಡಿ, "ನಾವು ರಿಲಯನ್ಸ್‌ನೊಂದಿಗೆ ನಮ್ಮ ಸಂಬಂಧವನ್ನು ವರ್ಧಿಸಲು ಸಂತೋಷಿಸುತ್ತೇವೆ. ಅದಕ್ಕೆ ಈಗ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಜಾಗತಿಕ ನಾಯಕತ್ವ ಸ್ಥಾನದಲ್ಲಿ ಇರುವ ಡಿಸ್ನಿಯನ್ನು ಸೇರಿಸಿಕೊಳ್ಳುವ ವಿಶೇಷತೆ ಹೊಂದಿದ್ದೇವೆ. ನಮ್ಮ ಪ್ರೇಕ್ಷಕರು, ಜಾಹೀರಾತುದಾರರು ಮತ್ತು ಪಾಲುದಾರರಿಗೆ ಅಸಾಧಾರಣ ಮೌಲ್ಯವನ್ನು ತಲುಪಿಸಲು ನಾವೆಲ್ಲರೂ ಬದ್ಧರಾಗಿದ್ದೇವೆ. ಈ ಜಂಟಿ ಉದ್ಯಮವು ಭಾರತದಲ್ಲಿ ಮನರಂಜನೆಯ ಭವಿಷ್ಯವನ್ನು ರೂಪಿಸಲು ಮತ್ತು ಡಿಜಿಟಲ್ ಇಂಡಿಯಾವನ್ನು ಜಾಗತಿಕ ಮಾದರಿಯನ್ನಾಗಿ ಮಾಡುವ ಗೌರವಾನ್ವಿತ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ವೇಗಗೊಳಿಸಲು ಸಿದ್ಧವಾಗಿದೆ," ಎಂದಿದ್ದಾರೆ.

ವಹಿವಾಟು ನಿಯಂತ್ರಕ, ಷೇರುದಾರರು ಮತ್ತು ಇತರ ಸಾಮಾನ್ಯ ಅನುಮೋದನೆಗಳಿಗೆ ಈ ವಹಿವಾಟು ಒಳಪಟ್ಟಿರುತ್ತದೆ ಮತ್ತು ಕ್ಯಾಲೆಂಡರ್ ವರ್ಷ 2024ರ ಕೊನೆಯ ತ್ರೈಮಾಸಿಕದಲ್ಲಿ ಅಥವಾ ಕ್ಯಾಲೆಂಡರ್ ವರ್ಷ 2025ರ ಮೊದಲ ತ್ರೈಮಾಸಿಕದಲ್ಲಿ ಇದು ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Story first published: Thursday, February 29, 2024, 9:59 [IST]
Other articles published on Feb 29, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+