
ಹಣ ಗಳಿಕೆಗಾಗಿ ಈ ನಿರ್ಧಾರ
ಆರ್ಥಿಕ ಸಂಕಷ್ಟದಿಂದಾಗಿ ರೇಸಂಗ್ ಕ್ಷೇತ್ರದಲ್ಲಿ ಮುಂದುವರಿಯಲು ಸಾಧ್ಯವಾಗದೆ ನೀಲಿಚಿತ್ರಗಳತ್ತ ಮುಖಮಾಡಿದ್ದ ಆಸ್ಟ್ರೇಲಿಯಾದ ಮಹಿಳಾ ಸೂಪರ್ ಕಾರ್ ರೇಸರ್ ರೆನ್ನೀ ಗ್ರೇಸಿ ಉತ್ತಮ ಸಂಪಾದನೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಈ ಸಂಪಾದನೆಯಿಂದ ತನ್ನ ಆರ್ಥಿಕ ಸಂಕಷ್ಟದಿಂದ ಹೊರಬಂದಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಮತ್ತೆ ಸೂಪರ್ ಕಾರ್ ಡ್ರೈವರ್ ಆಗಿ ಕಣಕ್ಕಿಳಿಯಲು ಬಯಸಿದ್ದಾರೆ.

ಸಾಕಷ್ಟು ಹಣ ಸಂಪಾದಿಸಿದ್ದೇನೆ
ವಯಸ್ಕರ ಚಿತ್ರೋದ್ಯಮಕ್ಕೆ ಕಾಲಿಟ್ಟ ಕಾರಣದಿಂದಾಗಿ ಈಗ ಸಾಕಷ್ಟು ಸಂಪಾದನೆ ಮಾಡಿದ್ದೇನೆ ಎಂದಿರುವ 25 ವರ್ಷದ ರೆನ್ನೀ ಗ್ರೇಸಿ, ತಮ್ಮ ನೆಚ್ಚಿನ ಮೋಟಾರ್ಸ್ಪೋರ್ಟ್ಸ್ನಲ್ಲೇ ಮತ್ತೆ ತೊಡಗಿಸಿಕೊಳ್ಳುವ ಆರ್ಥಿಕ ಶಕ್ತಿಯನ್ನೂ ಪಡೆದುಕೊಂಡಿರುವುದಾಗಿ ಹೇಳಿದ್ದಾರೆ. ‘ನಾನು ಈಗ ಆರ್ಥಿಕವಾಗಿ ಬಲಿಷ್ಠಳಾಗಿದ್ದೇನೆ. ಹಣಕಾಸಿನ ವಿಚಾರವಾಗಿ ಯಾವುದೇ ಅಂಜಿಕೆಯಿಲ್ಲದೆ ರೇಸಿಂಗ್ನಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ರೇಸಿಂಗ್ ಕಾರುಗಳ ವೆಚ್ಚದ ಬಗ್ಗೆ ನಾನಿನ್ನು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಪ್ರಾಯೋಜಕರನ್ನು ನಂಬಿಕೊಂಡು ನಾನು ಸ್ಪರ್ಧೆಗಿಳಿಯಬೇಕಾದ ಚಿಂತೆಯೂ ಇಲ್ಲ' ಎಂದು ರಿನೀ ಗ್ರೇಸಿ ಹೇಳಿದ್ದಾರೆ.

ಹಣಗಳಿಕೆಗಾಗಿ ಈ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದ ರಿನೀ
ಹಣ ಗಳಿಕೆಗಾಗಿ ಈ ಉದ್ಯಮಕ್ಕೆ ಇಳಿದಿದ್ದೇನೆ ಎಂದು ರಿನೀ ನೇರವಾಗಿಯೇ ಹೇಳಿದ್ದರು. ನಾನು ಈವರೆಗೆ ತೆಗೆದುಕೊಂಡಿರುವ ನಿರ್ಧಾರಗಳಲ್ಲಿ ಇದು ಅತ್ಯುತ್ತಮ ನಿರ್ಧಾರವಿದು ಎಂದು ತಿಳಿಸಿದ್ದರು ಈ ಮೊದಲು ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಮೋಟಾರ್ ಸ್ಪೋರ್ಟ್ಸ್ ಬಗ್ಗೆ ಮಾತನಾಡುತ್ತಾ "ನನಗೆ ಬೇಕಾದ ಫಲಿತಾಂಶ ಪಡೆಯಲು ಸಾಧ್ಯವಾಗಲಿಲ್ಲ. ನನ್ನಿಂದಾಗುವ ಗರಿಷ್ಠ ಪ್ರಯತ್ನವನ್ನು ನಾನು ಮಾಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದರು.

ಕುಟುಂಬದ ಬೆಂಬಲವೂ ಇದೆ
"ಇದು ನನ್ನ ಇಡೀ ಜೀವನದಲ್ಲಿ ನಾನು ಮಾಡಿದ ಅತ್ಯುತ್ತಮ ಕೆಲಸವಾಗಿದೆ. ಇದು ಆರ್ಥಿಕವಾಗಿ ನಾನು ಹಿಂದೆಂದೂ ಕನಸು ಕಾಣದಂತಹ ಸ್ಥಿತಿಗೆ ತಂದಿದೆ. ಅದನ್ನು ನಿಜವಾಗಿಯೂ ಆನಂದಿಸುತ್ತೇನೆ. ಎಂದು ರಿನೀ ಗ್ರೇಸಿ ಪ್ರತಿಕ್ರಿಯಿಸಿದ್ದರು. ಇದಕ್ಕಾಗಿ ತನ್ನ ಈ ನಿರ್ಧಾರಕ್ಕೆ ಕುಟುಂಬದ ಬೆಂಬಲ ಸಂಪೂರ್ಣವಾಗಿ ಇದೆ ಎಂದೂ ತಿಳಿಸಿದ್ದರು.

ಚೆನ್ನಾಗಿ ಹಣಗಳಿಸುತ್ತಿದ್ದೇನೆ
ನಾನು ಅತ್ಯುತ್ತಮವಾಗಿ ಹಣವನ್ನು ಗಳಿಸುತ್ತಿದ್ದೇನೆ. ನಾನು ಈಗ ಇರುವಲ್ಲಿ ಆರಾಮಾಗಿದ್ದೇನೆ. ನನ್ನನ್ನು ಅವರು ಏನೆಂದು ಕರೆಯಲು ಬಯಸಿದರು ಅದರಲ್ಲಿ ನಾನು ಚೆನ್ನಾಗಿರುತ್ತೇನೆ ಎಂದು ವಿಶ್ವಾಸದಿಂದ ಹೇಳಿಕೆಯನ್ನು ನೀಡಿದ್ದರು. ಡೈಲಿ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಮೊದಲಿಗೆ ಬಹಿರಂಗಪಡಿಸಿದ್ದರು.

ಸಾಕಷ್ಟು ಸಂಶೋಧನೆ ನಡೆಸಿ ನಿರ್ಧಾರ
"ನಾನು ಈ ಉದ್ಯಮದೊಳಗೆ ಏನೂ ತಿಳಿದುಕೊಳ್ಳದೆ ಬಂದಿಲ್ಲ. ನಾನು ಇಲ್ಲಿಗೆ ಬರುವ ಮುನ್ನ ಸಾಕಷ್ಟು ಸಂಶೋಧನೆಯನ್ನು ನಡೆಸಿದ್ದೇನೆ. ಇದಲ್ಲಿ ಏನಿದೆ, ಏನೆಲ್ಲಾ ಒಳಗೊಂಡಿದ ಎಂದು ಎಲ್ಲವನ್ನೂ ಅರಿತುಕೊಂಡಿದ್ದೇನೆ. ನನಗೆ ಗೊತ್ತಿದೆ ಕೆಲ ವಿಷಯಗಳು ವಿವಾದಾತ್ಮಕವಾಗಿರುತ್ತದೆ. ಕೆಲ ವಿಷಯಗಳು ಸೋರಿಕೆಯಾಗುತ್ತದೆ. ನಾನು ಎಲ್ಲಾ ಸಂಶೋಧನೆ ಮಾಡಿ ಈ ಉದ್ಯಮಕ್ಕೆ ಬರುವ ನಿರ್ಧಾರವನ್ನು ತೆಗೆದುಕೊಂಡೆ" ಎಂದಿದ್ದಾರೆ.

ನೀಲಿ ಚಿತ್ರ ತೊರೆಯಲ್ಲ ಎಂದು ಸ್ಪಷ್ಟನೆ
ಇದೇ ಸಂದರ್ಭದಲ್ಲಿ ರೆನೀ ಗ್ರೀಸಿ ತಾನು ನೀಲಿ ಚಿತ್ರಗಳ ವೆಬ್‌ಸೈಟ್ ಜೊತೆಗಿನ ಒಪ್ಪಂದವನ್ನು ನಿಲ್ಲಿಸುತ್ತಿಲ್ಲ ಎಂಬೂದನ್ನೂ ಸ್ಪಷ್ಟಪಡಿಸಿದ್ದಾರೆ. ತಾನು ಅದನ್ನು ನಿಲ್ಲಿಸಲಾರೆ. ನಾನು ಅದರಿಂದ ಉತ್ತಮ ಆದಾಯ ಗಳಿಸುತ್ತಿದ್ದೇನೆ. ಅದರಿಂದಲೇ ನಾನು ರೇಸಿಂಗ್‌ಗೆ ಮರಳಲು ಸಾಧ್ಯವಾಗುತ್ತಿದೆ' ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications
