ಆರ್‌ಎಫ್‌ವೈಎಸ್ ರಾಷ್ಟ್ರೀಯ ಅಥ್ಲೆಟಿಕ್ಸ್: ಮೊದಲ ದಿನ ಚೈನ್ನೈ ಪಾರಮ್ಯ

ಮುಂಬೈ, ನವೆಂಬರ್ 14: ರಿಲಯನ್ಸ್ ಫೌಂಡೇಷನ್ ಯೂತ್ ಸ್ಪೋರ್ಟ್ಸ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮೊದಲ ದಿನದಲ್ಲಿ ಪಟಿಯಾಲದ ಮನ್ವೀರ್ ಕೌರ್ ಹಾಗೂ ಹೈದರಾಬಾದ್‌ನ ಅಮ್ಲಾನ್ ಬಾರ್ಗೊಹೆನ್ ಅವರು ಕಾಲೇಜು ವಿಭಾಗದ ವನಿತೆ ಹಾಗೂ ಪುರುಷರ ವಿಭಾಗದ 100 ಮೀ. ಓಟದಲ್ಲಿ ಚಿನ್ನದ ಪದಕದ ಸಾಧನೆ ಮಾಡಿದರು.
ಮುಂಬೈಯ ಕಾಂದಿವಲಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್‌ಎಫ್ವೈಎಸ್‌ನ ಮೊದಲ ದಿನದಲ್ಲಿ ಪಟಿಯಾಲದ ನ್ಯಾಷನಲ್ ದೈಹಿಕ ಶಿಕ್ಷಣ ಕಾಲೇಜಿನ ವಿದ್ಯಾರ್ಥಿನಿ ಮನ್ವೀರ್ ಕೌರ್ 12:13 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ನಗರ ಹಂತದ ಸ್ಪರ್ಧೆಯಲ್ಲಿ ಮನ್ವೀರ್ ಕೌರ್ 12:26 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು.
ಹೈದರಾಬಾದ್‌ನ ಅವಿನಾಶ್ ಕಾಲೇಜ್ ಆಫ್ ಕಾಮರ್ಸ್ ಸಂಸ್ಥೆಯ ಅಮ್ಲಾನ್ 10:84 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಪುರುಷರ ವಿಭಾಗದಲ್ಲಿ ಬಂಗಾರದ ಪದಕ ಚಾಚಿಕೊಂಡರು. ನಗರ ಹಂತದ ಸ್ಪರ್ಧೆಯಲ್ಲಿ ಅಮ್ಲಾನ್ 10:88 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು.
ಮೊದಲ ದಿನದಲ್ಲಿ ಚೆನ್ನೈನ ವಿದ್ಯಾರ್ಥಿಗಳು ಪ್ರಭುತ್ವ ಸಾಧಿಸಿರುವುದು ವಿಶೇಷವೆನಿಸಿತು. ಚೆನ್ನೈ ತಂಡದ ಅಥ್ಲೀಟ್ ಗಳು 6 ಚಿನ್ನ, 5 ಬೆಳ್ಳಿ ಹಾಗೂ 5 ಕಂಚಿನ ಪದಕ ಗೆದ್ದರು. ಬೆಂಗಳೂರು ಅಥ್ಲೀಟ್‌ಗಳಿಂದ ಸಾಕಷ್ಟು ಉತ್ತಮ ಸಾಧನೆಯ ನಿರೀಕ್ಷೆ ಇದ್ದಿತ್ತು. ಆದರೆ ಬೆಂಗಳೂರಿನ ಅಥ್ಲೀಟ್‌ಗಳು ಕೇವಲ 3 ಚಿನ್ನ, 3 ಬೆಳ್ಳಿ ಗೆದ್ದರು. ಲಖನೌ ಅಥ್ಲೀಟ್‌ಗಳು ಅಚ್ಚರಿಯ ರೀತಿಯಲ್ಲಿ 3 ಚಿನ್ನ ಹಾಗೂ 3 ಬೆಳ್ಳಿಯ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications