For Quick Alerts
ALLOW NOTIFICATIONS  
For Daily Alerts

Rishabh Pant: ಯಾರ ಸಹಾಯವಿಲ್ಲದೆ ಮೆಟ್ಟಿಲು ಹತ್ತಿದ ರಿಷಭ್ ಪಂತ್; ಶೀಘ್ರದಲ್ಲೇ ಮೈದಾನಕ್ಕೆ ಎಂಟ್ರಿ?

ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು ಕಳೆದ 2022ರ ಡಿಸೆಂಬರ್ 30ರಂದು ಭೀಕರ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ತಮ್ಮ ಚೇತರಿಕೆಯ ಬಗ್ಗೆ ಪೋಸ್ಟ್ ಮಾಡಿ ಅಪ್ಡೇಟ್ ನೀಡಿದ್ದಾರೆ.

ರಿಷಭ್ ಪಂತ್ ಅವರ ಕಾರು ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ, ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಅದೃಷ್ಟವಶಾತ್ ಯುವ ಕ್ರಿಕೆಟಿಗನಿಗೆ ಯಾವುದೇ ಪ್ರಾಣಾಪಾಯವಾಗಿರಲಿಲ್ಲ. ಆದರೆ, ಬೆನ್ನು, ಕಾಲು, ಹಣೆಗೆ ತೀವ್ರ ಪೆಟ್ಟು ಬಿದ್ದು ರಕ್ತ ಸೋರುತ್ತಿತ್ತು. ಕೆಲ ದಾರಿಹೋಕರು ಕಾರಿನಿಂದ ರಿಷಭ್ ಪಂತ್‌ರನ್ನು ಹೊರತೆಗೆದಿದ್ದರು.

Rishabh Pant Climbed The Stairs Without Anyones Help

25 ವರ್ಷದ ರಿಷಭ್ ಪಂತ್ ಮೂರು ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಮತ್ತು ಈ ವರ್ಷದ ಉಳಿದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಗುಳಿಯಬೇಕಾಯಿತು. ಭಾರತದ ಮಿ. ಚಾಂಪಿಯನ್ ರಿಷಭ್ ಪಂತ್ ಬಹುಬೇಗ ಗುಣಮುಖರಾಗುತ್ತಿದ್ದಾರೆ.

ಇದಕ್ಕೆ ಅವರು ತಮ್ಮ ಚೇತರಿಕೆಯ ಬಗ್ಗೆ ನಿಯಮಿತವಾಗಿ ನವೀಕರಣ ನೀಡುತ್ತಿರುವುದೇ ಸಾಕ್ಷಿಯಾಗಿದೆ. ಈ ಬಾರಿ ರಿಷಭ್ ಪಂತ್ ಯಾರದೆ ಮತ್ತು ಯಾವುದೇ ಸಹಾಯವಿಲ್ಲದೆ ಮೆಟ್ಟಿಲುಗಳನ್ನು ಏರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಸರಳವಾದ ವಿಷಯಗಳು ಕೆಲವೊಮ್ಮೆ ಕಷ್ಟವಾಗಬಹುದು ಎಂದು ಬರೆದುಕೊಂಡಿದ್ದಾರೆ.

""ನಾಟ್ ಬ್ಯಾಡ್ ಯಾರ್ ರಿಷಭ್. ಸರಳವಾದ ವಿಷಯಗಳು ಕೆಲವೊಮ್ಮೆ ಕಷ್ಟವಾಗಬಹುದು'' ಎಂದು ರಿಷಭ್ ಪಂತ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಗಾಯದಿಂದ ಚೇತರಿಸಿಕೊಳ್ಳುವ ವೇಳೆ, 2023ರ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿರುವಾಗ ರಿಷಭ್ ಪಂತ್ ಅವರು ತಮ್ಮ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಂದ್ಯಗಳನ್ನು ವೀಕ್ಷಿಸಲು ಮೈದಾನಗಳಿಗೆ ಹೋಗುತ್ತಿದ್ದರು. ಅಷ್ಟೇ ಅಲ್ಲದೆ, ಇತ್ತೀಚೆಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಅಂಡರ್-16 ಕ್ರಿಕೆಟಿಗರೊಂದಿಗೆ ಮಾತುಕತೆ ನಡೆಸಿದರು.

ರಿಷಭ್ ಪಂತ್ ಅವರು ಆಟ ಮತ್ತು ಕ್ರಿಕೆಟ್ ವೃತ್ತಿಜೀವನದ ಕಠಿಣ ಪರಿಶ್ರಮದ ಬಗ್ಗೆ ಉದಯೋನ್ಮುಖ ಆಟಗಾರರೊಂದಿಗೆ ಚರ್ಚೆ ನಡೆಸಿದರು.

"ಬೆಂಗಳೂರಿನ ಎನ್‌ಸಿಎನಲ್ಲಿ ನಡೆದ 16 ವರ್ಷದೊಳಗಿನವರ ಉನ್ನತ ಪ್ರದರ್ಶನ ಶಿಬಿರದ ಭಾಗವಾಗಿರುವ ಯುವ ಆಟಗಾರರಿಗೆ ಕ್ರಿಕೆಟ್, ಜೀವನ, ಕಠಿಣ ಪರಿಶ್ರಮ ಮತ್ತು ಹೆಚ್ಚಿನದರ ಬಗ್ಗೆ ರಿಷಭ್ ಪಂತ್ ಅವರೊಂದಿಗೆ ಸಂವಹನ ನಡೆಸಲು ಅವಕಾಶವಾಯಿತು. ಅವರೊಂದಿಗೆ ಸಂವಹನ ನಡೆಸಲು ಸಮಯವನ್ನು ನೀಡಲು ರಿಷಭ್ ಪಂತ್ ಉದಾರತೆ ತೋರಿದರು," ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ತನ್ನ ಅಪಘಾತದ ನಂತರ, ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. ಪಂತ್ ಅವರ ಬಲ ಮೊಣಕಾಲಿನ ಅಸ್ಥಿರಜ್ಜು ಗಾಯವನ್ನು ಗುಣಪಡಿಸಲು ಮುಂಬೈನಲ್ಲಿ ಹೆಚ್ಚಿನ ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಅವರು ಈ ಹಿಂದೆ ರಿಷಭ್ ಪಂತ್ ಚೇತರಿಸಿಕೊಂಡ ಬಗ್ಗೆ ವಿವರಗಳನ್ನು ನೀಡಿದ್ದರು ಮತ್ತು ಎಡಗೈ ಬ್ಯಾಟರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಎರಡು ವರ್ಷಗಳವರೆಗೆ ತೆಗೆದುಕೊಳ್ಳಬಹುದು ಎಂದು ಹೇಳಿದ್ದರು.

Story first published: Wednesday, June 14, 2023, 20:36 [IST]
Other articles published on Jun 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+