ಕುಸ್ತಿ ಫೈನಲ್‌ನಲ್ಲಿ ಸೋಲು: ಮನನೊಂದ ಕುಸ್ತಿಪಟು ರಿತಿಕಾ ಫೋಗಟ್ ಆತ್ಮಹತ್ಯೆ

ಭಾರತೀಯ ಕುಸ್ತಿ ಅಭಿಮಾನಿಗಳಿಗೆ ಗುರುವಾರ ಮುಂಜಾನೆಯೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಭರತ್‌ಪುರದಲ್ಲಿ ನಡೆದ ಕುಸ್ತಿ ಟೂರ್ನಮೆಂಟ್‌ನ ಫೈನಲ್ ಪಂದ್ಯದಲ್ಲಿ ಸೋತ ಹಿನ್ನೆಲೆಯಲ್ಲಿ ಮನನೊಂದು ರಿತಿಕಾ ಫೋಗಟ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಕುಸ್ತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಗೀತಾ ಫೋಬಟ್ ಹಾಗೂ ಬಬಿತಾ ಫೋಬಟ್ ಅವರ ಸೋದರ ಸಂಬಂಧಿಯಾಗಿದ್ದಾರೆ ರಿತಿತಾ ಫೋಬಟ್. ಕೇವಲ 17ರ ಹರೆಯದ ರಿತಿಕಾ ಫೋಗಟ್ ಕುಸ್ತಿಯಲ್ಲಿ ದೊಡ್ಡ ಹೆಸರು ಮಾಡುವ ಭರವಸೆಯನ್ನು ಮೂಡಿಸಿದ್ದರು. ರಾಜ್ಯಮಟ್ಟದ ಉಪ ಜೂನಿಯರ್, ಕಿರಿಯ ಮಹಿಳೆಯರು ಮತ್ತು ಪುರುಷರ ಕುಸ್ತಿ ಪಂದ್ಯಾವಳಿಗಳಲ್ಲಿ ರಿತಿಕಾ ಫೋಗಟ್ ಆಡುತ್ತಿದ್ದರು. ಆದರೆ ಮಿಂಚುವ ಮುನ್ನವೇ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಮಾರ್ಚ್ 14ರಂದು ನಡೆದ ಪಂದ್ಯಾವಳಿಯೊಂದರಲ್ಲಿ ರಿತಿಕಾ ಪೋಗಟ್ 1 ಅಂಕದಿಂದ ಸೋಲು ಕಂಡಿದ್ದರು ಎನ್ನಲಾಗಿದೆ. ಇದೇ ಆಘಾತದಿಂದ ನೊಂದು ರಿತಿಕಾ ಫೋಗಟ್ ಅತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಫೋಗಟ್ ಸೋದರಿಯರಾದ ಗೀತಾ ಹಾಗೂ ಬಬಿತಾ ಅವರ ತಂದೆ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮಹಾವೀರ್ ಸಿಂಗ್ ಫೋಗಟ್ ಅವರು ರಿತಿಕಾ ಫೋಗಟ್‌ಗೆ ತರಬೇತಿಯನ್ನು ನೀಡುತ್ತಿದ್ದರು. ಬುಧವಾರ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಮಹಾವೀರ್ ಸಿಂಗ್ ಫೋಗಟ್ ಕೂಡ ಹಾಜರಾಗಿದ್ದರು ಎಂದು ವರದಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications