ಹನುಮಂತನ ನಂತರ ಲಂಕೆ ಸುಟ್ಟಿದ್ದು ಯಾರು?
ಬೆಂಗಳೂರು, ನ. 14: ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾಗೆ 13 ರನ್ ಗೆಲುವು! ಮುಂದಿನ ಪಂದ್ಯವನ್ನು ಭಾರತದ ಯಾವ ಬ್ಯಾಟ್ಸ್ ಮನ್ ಗಳೂ ಆಡಬೇಕಿಲ್ಲ., ರೋಹಿತ್ ಒಬ್ಬರನ್ನೇ ಇಟ್ಟುಕೊಂಡರೆ ಸಾಕು! ಅನುಷ್ಕಾ ಶರ್ಮಾ ಕೇಳ್ತಿದ್ದಾಳಂತೆ, ನನಗೆ ರೋಹಿತ್ ಶರ್ಮಾ ಫೋನ್ ನಂಬರ್ ಕೊಡಿ, ನನ್ನ ಸರ್ ನೇಮ್ ಬದಲಾಯಿಸಬಾರದು ಅಂದುಕೊಂಡಿದ್ದೇನೆ!... ಈ ರೀತಿಯ ಅನೇಕ ಟ್ವೀಟ್ ಗಳು, ಫೇಸ್ ಬುಕ್ ಮೆಸೇಜ್ ಗಳು ಗುರುವಾರದಿಂದ ಹರಿದಾಡುತ್ತಿವೆ.
ರೋಹಿತ್ ಶರ್ಮ ಭರ್ಜರಿ ದ್ವಿಶತಕಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳ ಹೊಳೆ ಹರಿದಿದೆ. ಟ್ವೀಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ರೋಹಿತ್ ಶರ್ಮಾಗೆ ಅಭಿನಂದನೆಗಳ ಮಹಾಪೂರವೇ ಹರಿದಿದೆ. ಅದರೊಂದಿಗೆ ಕೆಲ ಹಾಸ್ಯ ಮಿಶ್ರಿತ ಟ್ವೀಟ್ ಗಳು ಗಮನ ಸೆಳೆದಿವೆ. ಅವುಗಳನ್ನೆಲ್ಲ ಕೂಡಿಸಿ ನೀಡುವ ಪ್ರಯತ್ನ ಇಲ್ಲಿದೆ.[ರೋಹಿತ್ ಶರ್ಮ ಭರ್ಜರಿ ದ್ವಿಶತಕ, ಲಂಕಾ ತತ್ತರ]

* ರೋಹಿತ್ ಶರ್ಮಾ ದ್ವಿಶತಕ ಬಾರಿಸಲು ಅಂಜಿಕ್ಯ ರಹಾನೆ ಮತ್ತು ವಿರಾಟ್ ಕೊಹ್ಲಿ ಕಾರಣ !
* ರೋಹಿತ್ ಶರ್ಮಾ ಕುಂಭಕರ್ಣನಿದ್ದಂತೆ ಒಮ್ಮೆ ಎದ್ದು ಬಂದು ಎಲ್ಲವನ್ನು ಮುಗಿಸಿ ಮತ್ತೆ ಹೋಗಿ ಮಲಗುತ್ತಾರೆ!
* ಭಗವಾನ್ ಶ್ರೀ ರಾಮನ ನಂತರ ಶ್ರೀಲಂಕಾ ವಿರುದ್ಧ ಹೋರಾಡಿ ಜಯಿಸಿದವ ರೋಹಿತ್ ಶರ್ಮಾ!
* ಹನುಮಂತನ ನಂತರ ಲಂಕೆ ಸುಟ್ಟಿದ್ದು ಯಾರೆಂದು ಹೊಸ ಪ್ರಶ್ನೆ ಸೇರಿಸಿಕೊಳ್ಳಬಹುದು
* ಕಳೆದ ಎರಡು ತಿಂಗಳ ಅಷ್ಟೂ ರನ್ ಗಳನ್ನು ಶರ್ಮಾ ಒಂದೇ ದಿನ ಹೊಡೆದು ಮುಗಿಸಿದ್ದಾರೆ.
* ರೋಹಿತ್ ಶರ್ಮಾ ದ್ವಿಶತಕ ಬಾರಿಸಿದ್ದು ಸಂತಸವೇ, ಆದರೆ ಮುಂದಿನ ವಿಶ್ವಕಪ್ ನಲ್ಲಿ ಆತನ ಆಟ ನೋಡಬೇಕಲ್ವಾ!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications