Paralympics: ಕಂಚಿನ ಪದಕ ಗೆದ್ದ ರುಬಿನಾ ಫ್ರಾನ್ಸಿಸ್
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತದ ಶೂಟರ್‌ಗಳ ಪದಕದ ಬೇಟೆ ಮುಂದುವರೆದಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಪ್ಯಾರಾ ಶೂಟರ್ ರುಬಿನಾ ಫ್ರಾನ್ಸಿಸ್ ಕಂಚಿನ ಪದಕ ಗೆದ್ದಿದ್ದಾರೆ.
ಶನಿವಾರ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಎಸ್‌ಎಚ್ 1 ಈವೆಂಟ್‌ನ ಫೈನಲ್‌ನಲ್ಲಿ ರುಬಿನಾ ಫ್ರಾನ್ಸಿಸ್ ಸೊಗಸಾದ ಪ್ರದರ್ಶನ ನೀಡಿದರು. ಫೈನಲ್ ಪಂದ್ಯದಲ್ಲಿ ರುಬಿನಾ ಫ್ರಾನ್ಸಿಸ್ ಒಟ್ಟು 211.1 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಮೊನ್ನೆ ನಡೆದ ಅರ್ಹತಾ ಸುತ್ತಿನಲ್ಲಿ ಅವರು ಏಳನೇ ಸ್ಥಾನವನ್ನು ಪಡೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

ಈ ವಿಭಾಗದ ಚಿನ್ನದ ಪದಕವನ್ನು ಇರಾನ್‌ನ ಸಾರೆ ಜವನಮರಡಿ 236.8 ಅಂಕಗಳನ್ನು ಕಲೆ ಹಾಕಿದರು. ಬೆಳ್ಳಿಯನ್ನು ಟರ್ಕಿಯ ಐಸೆಲ್ ಓಜ್ಗನ್ ಪಾಲಾದರು.
ಇದಕ್ಕೂ ಮೊದಲು ಎರಡನೇ ದಿನವಾದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅವನಿ ಲೆಖರಾ ಮಹಿಳೆಯರ 10 ಮೀಟರ್ ಏರ್ ರೈಫಲ್ ಚಿನ್ನದ ಪದಕವನ್ನು ಪಡೆದರು. ಇವರು ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications