For Quick Alerts
ALLOW NOTIFICATIONS  
For Daily Alerts

ಕ್ರೀಡಾ ಕ್ಷೇತ್ರದಲ್ಲಿ ರಷ್ಯಾಗೆ ಮತ್ತೊಂದು ಆಘಾತ: ರಷ್ಯಾ ಮತ್ತ ಬೆಲಾರಸ್ ಅಥ್ಲೀಟ್‌ಗಳನ್ನು ಅಮಾನತುಗೊಳಿಸಿದ ವಿಶ್ವ ಅಥ್ಲೆಟಿಕ್ಸ್

Russian and Belarussian athletes suspended by World Athletics

ಯುಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ ಹಾಗೂ ಅದರ ಮಿತ್ರ ರಾಷ್ಟ್ರ ಬೆಲಾರಸ್‌ಗೆ ಕ್ರೀಆ ಲೋಕದಲ್ಲಿ ಒಂದಾದರ ಒಂದರಂತೆ ಹಿನ್ನಡೆಯುಂಟಾಗುತ್ತಿದೆ. ಉಕ್ರೇನ್ ಆಕ್ರಮಣದ ಪರಿಣಾಮವಾಗಿ ರಷ್ಯಾ ಮತ್ತು ಬೆಲಾರಸ್ ಅಥ್ಲೀಟ್‌ಗಳನ್ನು ವಿಶ್ವ ಅಥ್ಲೆಟಿಕ್ಸ್ ಈವೆಂಟ್‌ಗಳಿಂದ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಮಂಗಳವಾರ ನಡೆದ ಕೌನ್ಸಿಲ್ ಸಭೆಯ ನಂತರ ಅಥ್ಲೆಟಿಕ್ಸ್ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಕೌನ್ಸಿಲ್ ಸಭೆಯ ಬಳಿಕ ಪ್ರಕಟಣೆಯ ಮೂಲಕ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ರಷ್ಯಾ ಮತ್ತು ಬೆಲಾರಸ್‌ನ ಎಲ್ಲಾ ಅಥ್ಲೀಟ್‌ಗಳು, ಬೆಂಬಲ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ವಿಶ್ವ ಅಥ್ಲೆಟಿಕ್ಸ್ ಸರಣಿಯ ಎಲ್ಲಾ ಸ್ಪರ್ಧೆಗಳಿಂದ ಹೊರಗಿಡಲಾಗುವುದು. ಈ ನಿರ್ಧಾರ ತಕ್ಷಣದಿಂದಲೇ ಜಾರಿಗೆ ಬರುತ್ತಿದೆ ಎಂದು ವಿಶ್ವ ಅಥ್ಲೆಟಿಕ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದ ಹಿನ್ನೆಲೆಯಲ್ಲಿ ಕ್ರೀಡಾ ಜಗತ್ತು ರಷ್ಯಾವನ್ನು ಬಹಿಷ್ಕರಿಸುತ್ತಿದೆ. ಇದೇ ಸಂದರ್ಭದಲ್ಲಿ ವಿಶ್ವ ಅಥ್ಲೆಟಿಕ್ಸ್ ಕೂಡ ಅದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದೆ. ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ರಷ್ಯಾ ಕ್ರೀಡಾಪಟುಗಳನ್ನು ಅಮಾನತುಗೊಳಿಸುವಂತೆ ಶಿಫಾರಸು ಮಾಡಿದ್ದರೆ, ಫಿಫಾ ಯುಇಎಫ್‌ಎ, ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ ಮತ್ತು ಸ್ಕೀಯಿಂಗ್ ಸಂಸ್ಥೆಗಳು ರಷ್ಯಾದ ಕ್ರೀಡಾಪಟುಗಳು ಮತ್ತು ತಂಡಗಳನ್ನು ಅಮಾನತುಗೊಳಿ ಈಗಾಗಲೇ ಆದೇಶ ಹೊರರಡಿಸಿದೆ.

ಮುಂದೆ ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಭಾಗವಾಗಿ ಓರೆಗಾನ್ 22, ವರ್ಲ್ಡ್ ಅಥ್ಲೆಟಿಕ್ಸ್ ಇಂಡೋರ್ ಚಾಂಪಿಯನ್‌ಶಿಪ್ಸ್ ಬೆಲ್‌ಗ್ರೇಡ್ 22, ಮತ್ತು ವರ್ಲ್ಡ್ ಅಥ್ಲೆಟಿಕ್ಸ್ ರೇಸ್ ವಾಕಿಂಗ್ ಟೀಮ್ ಚಾಂಪಿಯನ್‌ಶಿಪ್ ಮಸ್ಕತ್ 22, ಇದು ಶುಕ್ರವಾರ ಓಮನ್‌ನಲ್ಲಿ ಮಾರ್ಚ್ 4ರಿಂದ ಪ್ರಾರಂಭಗೊಳ್ಳುತ್ತಿದೆ.

ರಷ್ಯಾದ ಅಥ್ಲೆಟಿಕ್ಸ್ ಫೆಡರೇಶನ್ (RusAF) ಡೋಪಿಂಗ್ ಉಲ್ಲಂಘನೆಯ ಕಾರಣದಿಂದ 2015 ರಿಂದ ವಿಶ್ವ ಅಥ್ಲೆಟಿಕ್ಸ್‌ನಿಂದ ಅಮಾನತುಗೊಂಡಿದೆ. ಹೀಗಾಗಿ ಪ್ರಸ್ತುತ ವಿಶ್ವ ಅಥ್ಲೆಟಿಕ್ಸ್ ಈವೆಂಟ್‌ಗಳನ್ನು ಆಯೋಜಿಸಲು ಅಥವಾ ತಂಡಗಳನ್ನು ಅಂತರರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಿಗೆ ಕಳುಹಿಸಲು ರಷ್ಯಾ ಅಥ್ಲೆಟಿಕ್ಸ್ ಫೆಡರೇಶನ್ ಈಗಾಗಲೇ ಅರ್ಹತೆಯನ್ನು ಕಳೆದುಕೊಂಡಿದೆ.

Story first published: Wednesday, March 2, 2022, 9:24 [IST]
Other articles published on Mar 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+