Paralympics 2024: 40 ವರ್ಷಗಳ ಬಳಿಕ ಶಾಟ್‌ಪುಟ್‌ನಲ್ಲಿ ಭಾರತಕ್ಕೆ ಪದಕ: ಸಚಿನ್‌ಗೆ ಬೆಳ್ಳಿ
ಭಾರತೀಯ ಪ್ಯಾರಾ ಅಥ್ಲೀಟ್‌ಗಳ ಅಬ್ಬರ ಪ್ಯಾರಿಸ್‌ನಲ್ಲಿ ಮುಂದುವರೆದಿದೆ. ಬುಧವಾರ ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶಕ್ಕೆ 21ನೇ ಪದಕ ಲಭಿಸಿದೆ. ಪುರುಷರ ಶಾಟ್ ಪುಟ್ ಎಫ್46 ವಿಭಾಗದಲ್ಲಿ ಭಾರತದ ಸಚಿನ್ ಖಿಲಾರಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
40 ವರ್ಷಗಳ ಬಳಿಕ ಶಾರ್ಟ್ ಪುಟ್ ವಿಭಾಗದಲ್ಲಿ ಪದಕ ಗೆದ್ದ, ಮೊದಲ ಭಾರತೀಯ ಪುರುಷ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಸಚಿನ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 1984ರಲ್ಲಿ ಭಾರತ ಪುರುಷರ ಶಾಟ್‌ಪುಟ್‌ನಲ್ಲಿ ಮೊದಲ ಪದಕ ಗೆದ್ದಿತ್ತು. ಸಚಿನ್ 6.32 ಮೀಟರ್ ಶಾರ್ಟ್ ಪುಟ್ ಎಸೆದು ಎರಡನೇ ಸ್ಥಾನ ಪಡೆದರು.

ಚಿನ್ನ ಯಾರಿಗೆ?
ಈ ವಿಭಾಗದ ಚಿನ್ನ ಕೆನಡಾದ ಗ್ರೆಗ್ ಸ್ಟೀವರ್ಟ್ ಪಾಲಾಯಿತು. ಕಂಚಿನ ಪದಕ ಕ್ರೊವೇಷಿಯಾದ ಲುಕಾ ಬಾಕೊವಿಕ್ ಪಡೆದರು. ಸಚಿನ್ ಈ ಹಿಂದೆ 2024 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದರು.
34 ವರ್ಷದ ಸಚಿನ್ ಖಿಲಾರಿ ತಮ್ಮ ಎರಡನೇ ಪ್ರಯತ್ನದಲ್ಲಿ ಅತ್ಯತ್ತುಮ ಪ್ರದರ್ಶನ ನೀಡಿ, 16.30 ಮೀಟರ್ ದೂರ ಎಸೆದು, ತಮ್ಮದೇ ಏಷ್ಯನ್ ದಾಖಲೆಯನ್ನು ಮುರಿದರು. ಅವರು ಮೇ 2024 ರಲ್ಲಿ ಜಪಾನ್‌ನಲ್ಲಿ ನಡೆದ ವಿಶ್ವ ಪ್ಯಾರಾ-ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು. ಪ್ರಸಕ್ತ ಕ್ರೀಡಾ ಕೂಟದಲ್ಲಿ ಪ್ಯಾರಾ ಅಥ್ಲೀಟ್‌ಗಳು ಪಡೆದ 11ನೇ ಪದಕ ಇದಾಗಿದೆ.
ಮೂರನೇ ಪದಕ
ಶಾಟ್ ಪುಟ್ ಕ್ರೀಡೆಯಲ್ಲಿ ಪದಕ ಗೆದ್ದ ಮೂರನೇ ಕ್ರೀಡಾ ಪಟು ಎಂಬ ಹಿರಿಮೆಗೆ ಸಚಿನ್ ಖಿಲಾರಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಅವರು 1984ರಲ್ಲಿ ಜೋಗಿಂದರ್ ಸಿಂಗ್ ಬೇಡಿ ಕಂಚಿನ ಸಾಧನೆ ಮಾಡಿದ್ದರು. ದೀಪಾ ಮಲಿಕ್ 2016ರ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ತಮ್ಮದಾಗಿಸಿಕೊಂಡಿದ್ದರು. ಈಗ ಸಚಿನ್ ಈ ಸಾಧನೆ ಮಾಡಿದ್ದಾರೆ.
ಎಫ್46 ಎಂದರೇನು?
F46 ವರ್ಗವು ತಮ್ಮ ಕೈಯಲ್ಲಿ ದೌರ್ಬಲ್ಯ, ಸ್ನಾಯುಗಳಲ್ಲಿ ಸಮಸ್ಯೆ ಅಥವಾ ಅವರ ಕೈಯಲ್ಲಿ ಚಲನೆಯ ಕೊರತೆ ಇರುವು ಕ್ರೀಡಾಪಟುಗಳು ಈ ವಿಭಾಗದಲ್ಲಿ ಸ್ಪರ್ಧಿಸುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications