ಹುಡುಗಿಗೆ ಕಿರುಕುಳ ಆರೋಪ: ಬೆಂಗಳೂರು ಸಾಯ್ ಕಬಡ್ಡಿ ಕೋಚ್ ಆತ್ಮಹತ್ಯೆ

ಬೆಂಗಳೂರು, ಅಕ್ಟೋಬರ್ 16: ಕ್ರೀಡಾ ತರಬೇತಿ ಕೇಂದ್ರದಲ್ಲಿನ ಹುಡುಗಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪ ಎದುರಿಸಿದ್ದ 59ರ ಹರೆಯದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (SAI) ಕೇಂದ್ರದ ಕಬಡ್ಡಿ ಕೋಚ್ ರುದ್ರಪ್ಪ ವಿ ಹೊಸಮನಿ ಅವರು ಹೋಟೆಲ್ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
'ಬೆಂಗಳೂರಿನ ಸಾಯ್ ಕೇಂದ್ರದ ಹಿರಿಯ ತರಬೇತುದಾರರಾದ ರುದ್ರಪ್ಪ ವಿ ಹೊಸಮನಿ ಅವರು ಹರಿಹರದ ಹೋಟೆಲ್ ಒಂದರಲ್ಲಿ ನೇಣು ಬಿಗಿದುಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೇಲೆ ಹುಡುಗಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪವಿತ್ತು' ಎಂದು ಪೊಲೀಸ್ ಅಧಿಕಾರಿ ಆರ್ ಚೇತನ್ ತಿಳಿಸಿದ್ದಾರೆ.
ಅಕ್ಟೋಬರ್ 13ರಂದು ರುದ್ರಪ್ಪ ಅವರು ಹೋಟೆಲ್ ನಲ್ಲಿ ತಂಗಿದ್ದರು. ಆದರೆ ದೀರ್ಘ ಕಾಲದವರೆಗೂ ಅವರು ತನ್ನ ರೂಮಿನಿಂದ ಹೊರಬರುವುದು ಕಾಣಿಸಿರಲಿಲ್ಲ. ಹೀಗಾಗಿ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಬಾಗಿಲು ಮುರಿದು ರೂಮಿನ ಒಳ ಪ್ರವೇಶಿಸಿದ ಪೊಲೀಸರಿಗೆ ರುದ್ರಪ್ಪ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು.
ಅಕ್ಟೋಬರ್ 9ರಂದು ರುದ್ರಪ್ಪ ಅವರು ಸಾಯ್ ಕ್ರೀಡಾ ಕೇಂದ್ರದ ಡ್ರೆಸ್ಸಿಂಗ್ ರೂಮ್ ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಬಾಲಕಿಯ ಹೆತ್ತವರು ಆರೋಪಿಸಿದ್ದರು. ಬಾಲಕಿ ತಮ್ಮ ಬಳಿ ಈ ವಿಚಾರ ತಿಳಿಸಿದ ಬಳಿಕ ಹೆತ್ತವರು ಈ ವಿಚಾರವನ್ನು ಸಾಯ್ ಕೇಂದ್ರದ ಅಧಿಕಾರಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications