ವರ್ಲ್ಡ್ ರಸ್ಲಿಂಗ್ ನಲ್ಲಿ ಬೆನ್ನು ಬೆನ್ನಿಗೆ ಪದಕ ಗೆದ್ದ ಮೊದಲ ಭಾರತೀಯ ಸಜನ್

ನವದೆಹಲಿ, ಸೆಪ್ಟೆಂಬರ್ 19: ಸ್ಲೋವಾಕಿಯಾದ ಟ್ರ್ನಾವಾದಲ್ಲಿ ನಡೆದ ಜೂನಿಯರ್ ವರ್ಲ್ಡ್ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಸಜನ್ ಭನ್ವಾಲ್ ಅವರು ಪುರುಷರ 77 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಈ ಗೆಲುವಿನೊಂದಿಗೆ ಜೂನಿಯರ್ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆನ್ನು ಬೆನ್ನಿಗೆ ಭಾರತಕ್ಕೆ ಪದಕ ತಂದ ಮೊದಲ ಭಾರತೀಯ ಎಂಬ ಹಿರಿಮೆಗೂ ಸಜನ್ ಪಾತ್ರರಾಗಿದ್ದಾರೆ.
ಈ ವಿಭಾದಲ್ಲಿ ಚಿನ್ನದ ಪದಕ ರಷ್ಯಾದ ಇಸ್ಲಾಮ್ ಒಪಿವ್ ಅವರ ಪಾಲಾಯಿತು. 20ರ ಹರೆಯದ ಸೋನೀಪತ್ ಸಮೀಪದ ಹಳ್ಳಿಯ ಸಜನ್ ಅವರು ಎದುರಾಳಿ ವಿರುದ್ಧ ಉತ್ತಮ ಪ್ರದರ್ಶನ ತೋರಿದರಾದರೂ ಒಪಿವ್ ಅವರು ಟೆಕ್ನಿಕಲ್ ಸುಪೀರಿಯರ್ ವಿಭಾಗದಲ್ಲಿ 8-0 ಅಂತರದಲ್ಲಿ ಪಾಯಿಂಟ್ ಕದ್ದು ಚಿನ್ನ ತನ್ನದಾಗಿಸಿಕೊಂಡರು.
ಸಜನ್ ಅವರು ಜುಲೈ ತಿಂಗಳಲ್ಲಿ ನಡೆದಿದ್ದ ಏಷ್ಯಾ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಪದಕ ಗೆದ್ದಿದ್ದರು. 2017ರಲ್ಲಿ ಫಿನ್ ಲ್ಯಾಂಡ್ ನ ಟ್ಯಾಂಪಿಯರ್ ನಲ್ಲಿ ನಡೆದಿದ್ದ ವರ್ಲ್ಡ್ ಜೂನಿಯರ್ ಚಾಂಪಿಯನ್ ಶಿಪ್ ನಲ್ಲೂ ಭನ್ವಾಲ್ ಗೆ ಕಂಚಿನ ಪದಕ ಒಲಿದಿತ್ತು.
Story first published: Wednesday, September 19, 2018, 18:30 [IST]
Other articles published on Sep 19, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications