ಪ್ರಿಯತಮ ಕದಿಯನ್ ರನ್ನು ವರಿಸಿದ ಕುಸ್ತಿಪಟು ಸಾಕ್ಷಿ
ನವದೆಹಲಿ, ಏಪ್ರಿಲ್ 03: ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಹೆಮ್ಮೆಯ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಪ್ರಿಯತಮ ಸತ್ಯವ್ರತ್ ಕದಿಯನ್ ಅವರನ್ನು ವರಿಸಿದ್ದಾರೆ. 24 ವರ್ಷದ ಸಾಕ್ಷಿ ಮಲಿಕ್ ಭಾವಿ ಪತಿ ಸತ್ಯವ್ರತ್ ಅವರಿಗಿಂತ 2 ವರ್ಷ ದೊಡ್ಡವರಾಗಿದ್ದಾರೆ.
22 ರ ಹರೆಯದ ಸತ್ಯವ್ರತ್, 2010 ರ ಯೂತ್ ಒಲಿಂಪಿಕ್ಸ್ ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ಕುಸ್ತಿ ತರಬೇತಿಯಲ್ಲಿ ಸಾಕ್ಷಿ ಹಾಗೂ ಸತ್ಯವ್ರತ್ ಪರಸ್ಪರ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. 2016ರಲ್ಲಿ ರೋಹ್ಟಕ್ ನಲ್ಲಿ ಇಬ್ಬರ ನಿಶ್ಚಿತಾರ್ಥ ನೆರವೇರಿತ್ತು.
ಸಾಕ್ಷಿ ಅವರು ರಿಯೋ ಒಲಿಂಪಿಕ್ಸ್ 2016ರ 58 ಕೆಜಿ ವಿಭಾಗದ ಕುಸ್ತಿ (ಫ್ರೀಸ್ಟೈಲ್)ಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ರಾತ್ರೋರಾತ್ರಿ ಮನೆಮಾತಾದರು. ಇಂಥದ್ದೊಂದು ಸಾಧನೆ ಮಾಡಿದ ಪ್ರಥಮ ಮಹಿಳಾ ಕ್ರೀಡಾಪಟು ಎನಿಸಿಕೊಂಡರು.

ಕದಿಯನ್ ಜತೆ ಸಾಕ್ಷಿ
ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು ತಮ್ಮ ಪ್ರಿಯಕರ ಕದಿಯನ್ ಸತ್ಯಾವಾನ್ ಅವರನ್ನು ಭಾನುವಾರದಂದು ಸಂಪ್ರದಾಯಬದ್ಧವಾಗಿ ವರಿಸಿದರು.

ನಿಶ್ಚಿತಾರ್ಥ ಮಹೋತ್ಸವ
ಕುಸ್ತಿಪಟು ಸಾಕ್ಷಿ ಮಲಿಕ್ ಹಾಗೂ ಸತ್ಯವ್ರತ ಕದಿಯನ್ ಅವರ ವಿವಾಹ ನಿಶ್ಚಿತಾರ್ಥ ಮಹೋತ್ಸವವು ಅಕ್ಟೋಬರ್ 16, 2016ರಂದು ರೋಹ್ಟಕ್ ನ ನಿವಾಸದಲ್ಲಿ ಆಪ್ತೇಷ್ಟರ ಸಮ್ಮುಖದಲ್ಲಿ ನೆರವೇರಿತ್ತು.
ಮದ್ವೆ ಬಂದಿರಲಿಲ್ಲ ಸೆಹ್ವಾಗ್
ಐಪಿಎಲ್ ಕ್ಯಾಂಪಿನಲ್ಲಿ ನಿರತನಾಗಿರುವುದರಿಂದ ನಿಮ್ಮ ಮದುವೆಗೆ ಬರಲಾಗಲಿಲ್ಲ. ನಿಮ್ಮಬ್ಬರಿಗೂ ಶುಭ ಹಾರೈಕೆ. ಮನೆಯಲ್ಲಿ ಕುಸ್ತಿ ಆಡಬೇಡಿ ಎಂದು ಮಾಜಿ ಕ್ರಿಕೆಟರ್ ಸೆಹ್ವಾಗ್ ಅವರು ಟ್ವೀಟ್ ಮಾಡಿದ್ದಾರೆ
ಸಾಕ್ಷಿಗೆ ದೀಪಾರಿಂದ ವಿಷಸ್
ಕುಸ್ತಿಪಟು ಸಾಕ್ಷಿ ಮಲಿಕ್ ಅವರಿಗೆ ಶುಭ ಹಾರೈಸಿದ ಒಲಿಂಪಿಯನ್ ಜಿಮ್ನಾಸ್ಟ್ ದೀಪಾ ಕರ್ಮಾಕರ್.
ಸಾಕ್ಷಿಗೆ ಸೈನಾರಿಂದ ಶುಭಹಾರೈಕೆ
ಕುಸ್ತಿಪಟು ಸಾಕ್ಷಿ ಮಲಿಕ್ ಅವರ ಮದುವೆಗೆ ಒಲಿಂಪಿಯನ್ ಸುಶೀಲ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು, ಕ್ರೀಡಾಪಟುಗಳು ಆಗಮಿಸಿದ್ದರು. ಉಳಿದಂತೆ ವಿವಿಧ ಕ್ಷೇತ್ರದ ಗಣ್ಯರು ಟ್ವೀಟ್ ಮಾಡಿ ಶುಭಹಾರೈಸಿದ್ದಾರೆ. ಬಾಡ್ಮಿಂಟನ್ ತಾರೆ ಸೈನಾ ಅವರ ಶುಭ ಹಾರೈಕೆ ಇಲ್ಲಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications