Sara Tendulkar: ಸಾರಾ ತೆಂಡೂಲ್ಕರ್ ಮಾಡಿದ ಈ ಎಡವಟ್ಟಿಗೆ RCB ಅಭಿಮಾನಿಗಳು ಫುಲ್ ಖುಷ್!

ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಅತ್ಯಂತ ಜನಪ್ರಿಯ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಫಾಲೋವರ್ಸ್‌ಗಳನ್ನು ಹೊಂದಿದೆ. ಇದೀಗ ಆರ್‌ಸಿಬಿ ಗುಂಗು ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ಮಗಳನ್ನೂ ಬಿಟ್ಟಿಲ್ಲ ಎನ್ನುವುದು ದೊಡ್ಡ ಚರ್ಚೆಯ ವಿಷಯವಾಗಿದೆ.
ಕಳೆದ ಐದಿನೈದು ವರ್ಷಗಳಿಂದ ಪ್ರಶಸ್ತಿ ಗೆಲ್ಲದಿದ್ದರೂ, ಈ ತಂಡದ ಮೇಲಿರುವ ಅಭಿಮಾನ ಮತ್ತು ಅಭಿಮಾನಿಗಳ ಸಂಖ್ಯೆ ಯಾವತ್ತೂ ಕಡಿಮೆಯಾಗಿಲ್ಲ. ಪ್ರತಿ ಐಪಿಎಲ್ ಬಂದಾಗಲೂ, "ಈ ಸಲ ಕಪ್ ನಮ್ದೆ, ಈ ಸಲ ಕಪ್ ನಮ್ದೆ' ಎಂದು ಅಭಿಮಾನಿಗಳು ಕಜಪಿಸುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೆ, ಆರ್‌ಸಿಬಿ ವಿಶ್ವದ ಅತ್ಯಂತ ವಿಶ್ವಾಸಾರ್ಹ ಅಭಿಮಾನಿಗಳನ್ನು ಹೊಂದಿರುವ ತಂಡವೆನಿಸಿದೆ.
2023ರ 16ನೇ ಐಪಿಎಲ್ ಋತುವಿಗಾಗಿ ಎಲ್ಲರೂ ಎದುರು ನೋಡುತ್ತಿದ್ದು, ಮುಂಬರುವ ಎಪ್ರಿಲ್ ಆರಂಭದಲ್ಲಿ ಶ್ರೀಮಂತ ಕ್ರಿಕೆಟ್ ಲೀಗ್‌ಗೆ ಚಾಲನೆ ಸಿಗಲಿದೆ.
ಯಾಕೆ ಆರ್‌ಸಿಬಿ ಇಷ್ಟೆಲ್ಲ ಹೇಳುತ್ತಿದ್ದೇವೆ ಎಂದರೆ, ಇದೀಗ ಆರ್‌ಸಿಬಿ ಫ್ರಾಂಚೈಸ್ ಬಗ್ಗೆ ಭಾರತ ಕ್ರಿಕೆಟ್‌ನ ಮಾಜಿ ದಿಗ್ಗಜ ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ಅವರ ಒಂದು ಪೋಸ್ಟ್‌ನಿಂದಾಗಿ ಆರ್‌ಸಿಬಿ ಅಭಿಮಾನಿಗಳಿಗೆ ಹೆಚ್ಚಿನ ಖುಷಿ ನೀಡಿದೆ.

ಸಾರಾ ತೆಂಡೂಲ್ಕರ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ಶೀರ್ಷಿಕೆಯೊಂದಿಗೆ ನೋಟ್‌ಬುಕ್‌ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಅದರಲ್ಲಿ "ನಾನು ತಪ್ಪಾಗಿ, RBC ಬರೆಯಲು ಹೋಗಿ RCB ಎಂದು ಬರೆಯುತ್ತಿದ್ದೇನೆ' ಎಂದು ಸ್ಟೋರಿ ಪೋಸ್ಟ್ ಮಾಡಿದ್ದಾರೆ.
ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಸಾರಾ ತೆಂಡೂಲ್ಕರ್ ಆರ್‌ಸಿಬಿ ತಂಡದ ಅಧಿಕೃತ ಖಾತೆಯನ್ನು ಅನುಸರಿಸದ ಕಾರಣ, ಈ ಪೋಸ್ಟ್ ಅಭಿಮಾನಿಗಳಿಗೆ ಆಶ್ಚರ್ಯ ಹುಟ್ಟಿಸಿದೆ. ಏಕೆಂದರೆ, ಅವರ ತಂದೆ ಸಚಿನ್ ತೆಂಡೂಲ್ಕರ್ ಮತ್ತು ಸಹೋದರ ಅರ್ಜುನ್ ತೆಂಡೂಲ್ಕರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಮುಂಬೈ ಇಂಡಿಯನ್ಸ್ ಪರ ಮಾತ್ರ ಆಡಿದ್ದಾರೆ.
ಸಾರಾ ತೆಂಡೂಲ್ಕರ್ ಸಹ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಯಾಗಿದ್ದು, ಅನೇಕ ಸಂದರ್ಭಗಳಲ್ಲಿ ಫ್ರಾಂಚೈಸಿಯನ್ನು ಹುರಿದುಂಬಿಸಲು ಪ್ರೇಕ್ಷಕರ ಸ್ಟ್ಯಾಂಡ್‌ಗಳಲ್ಲಿ ಕಂಡಿದ್ದಾರೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ಫೈನಲ್ ಹಂತ ತಲುಪಿದೆ. ಚಾಂಪಿಯನ್ಸ್ ಲೀಗ್ 2011ರ ಫೈನಲ್‌ನಲ್ಲಿ ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿತ್ತು. ಆ ವೇಳೆ ಅಲ್ಲಿ ಹರ್ಭಜನ್ ಸಿಂಗ್ ನಾಯಕತ್ವದ ಮುಂಬೈ ತಂಡ ಡೇನಿಯಲ್ ವೆಟ್ಟೋರಿ ನಾಯಕತ್ವದ ಬೆಂಗಳೂರು ತಂಡವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿಯಿತು.
ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡೂ ತಂಡಗಳು 2023ರ ಮಹಿಳಾ ಪ್ರೀಮಿಯರ್ ಲೀಗ್‌ನ ಭಾಗವಾಗಲಿವೆ. ಇದೇ ಫೆಬ್ರವರಿ 13ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications