Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌: ಜೋತ್ಸ್ನಾ, ಸೌರವ್‌ ಚಾಂಪಿಯನ್ಸ್‌

Saurav and Joshna are Asian Squash champions

ಹೊಸದಿಲ್ಲಿ, ಮೇ 06: ಭಾರತದ ಅನುಭವಿಗಳಾದ ಜೋತ್ಸ್ನಾ ಚಿನ್ನಪ್ಪ ಮತ್ತು ಸೌರವ್‌ ಘೋಷಾಲ್‌, ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಏಷ್ಯನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ.

ಏಷ್ಯಾ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ ಮತ್ತು ಮಹಿಳಾ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಕ್ಲೀನ್‌ ಸ್ವೀಪ್‌ ಮಾಡುವ ಅವಕಾಶ ಎರಡು ವರ್ಷಗಳ ಹಿಂದೆ ಚೆನೈನಲ್ಲಿ ಕೈತಪ್ಪಿತ್ತು. ಆದರೀಗ ಮಲೇಷ್ಯಾದಲ್ಲಿ ಎರಡೂ ವಿಭಾಗಗಳಲ್ಲಿ ಭಾರತೀಯರ ಪ್ರಾಬಲ್ಯ ಸಾಧ್ಯವಾಗಿದೆ.

ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮಿಂಚಿದ ಟೂರ್ನಿಯ 2ನೇ ಶ್ರೇಯಾಂಕಿತ ಆಟಗಾರ್ತಿ ಜೋತ್ಸ್ನಾ ಚಿನ್ನಪ್ಪ, 11-5, 8-11, 11-6, 11-6ರ ಗೇಮ್‌ಗಳಿಂದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಹಾಂಗ್‌ಕಾಂಗ್‌ನ ಆನೀ ಔ ಎದುರು ತಮ್ಮ ಪ್ರಶಸ್ತಿ ಕಾಯ್ದುಕೊಲ್ಳುವಲ್ಲಿ ಯಶಸ್ವಿಯಾದರು.

ಇದಾದ ಬಳಿಕ ಪುರುಷರ ಸಿಂಗಲ್ಸ್‌ ವಿಭಾಗದಲ್ಲೂ ಸಂಭ್ರಮ ಮುಗಿಲು ಮುಟ್ಟಿತ್ತು. ಟೂರ್ನಿಯ ಅಗ್ರ ಶ್ರೇಯಾಂಕಿತ ಆಟಗಾರ ಸೌರವ್‌ ಘೋಷಾಲ್‌ 11-9, 11-2, 11 -8 ಅಂತರದ ನೇರ ಗೇನಮ್‌ಗಳಿಂದ ನಾಲ್ಕನೇ ಶ್ರೇಯಾಂಕಿತ ಆಟಗಾರ ಹಾಂಗ್‌ಕಾಂಗ್‌ನವರೇ ಆದ ಲಿಯೊ ಔ ಚುನ್‌ ಮಿಂಗ್‌ ಎದುರು ಸುಲಭ ಜಯ ದಾಖಲಿಸಿ ಪ್ರಶಸ್ತಿ ಎತ್ತಿ ಹಿಡಿದರು. ಕಳೆದ ಬಾರಿಯೂ ಫೈನಲ್‌ ತಲುಪುವಲ್ಲಿ ಯಸಸ್ವಿಯಾಗಿದ್ದ ಸೌರವ್‌ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿದ್ದರು.

ಕಳೆದ ತಿಂಗಳು ನಡೆದ ಮಕಾವ್‌ ಓಪನ್‌ ಟೂರ್ನಿಯಲ್ಲಿ ಜೋತ್ಸ್ನಾ, ಆನೀ ಔ ಎದುರು ಮುಗ್ಗರಿಸಿದ್ದರು. ಆದರೆ, ಏಷ್ಯಾ ಅಂಗಣದಲ್ಲಿ ತಿರುಗೇಟು ನೀಡಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

Story first published: Sunday, May 5, 2019, 23:25 [IST]
Other articles published on May 5, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+