ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಜಿಲ್ಲಾ ಮಟ್ಟದ ನೆಟ್‍ಬಾಲ್ ಪಂದ್ಯಾಟ: ಜೈನ್, ಎಸ್ಡಿಎಂ ಚಾಂಪಿಯನ್ಸ್

By Mahesh

ಉಜಿರೆ(ದಕ್ಷಿಣ ಕನ್ನಡ), ಡಿ.5: ಇಲ್ಲಿನ ಎಸ್ಡಿಎಂ ಕಾಲೇಜಿನ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಎಸ್ ಡಿಎಂ ಕಾಲೇಜು ಉಜಿರೆ ಇದರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ನೆಟ್ಬಾಲ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಪದವಿ ಪೂರ್ವ ಕಾಲೇಜುಗಳ ಪುರುಷರ ಮತ್ತು ಮಹಿಳೆಯರ ಜಿಲ್ಲಾ ಮಟ್ಟದ ನೆಟ್‍ಬಾಲ್ ಪಂದ್ಯಾವಳಿಯಲ್ಲಿ ಜೈನ್ ಪದವಿ ಪೂರ್ವ ಕಾಲೇಜು ಮೂಡಬಿದಿರೆ ಮತ್ತು ಎಸ್ಡಿಎಂ ಕಾಲೇಜು ಉಜಿರೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

Pre University district level Netball Tournament

ಪುರುಷರ ಮತ್ತು ಮಹಿಳೆಯರ ವಿಭಾಗದ ರನ್ನರ್ಸ್ ಪ್ರಶಸ್ತಿಯನ್ನು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಎಡಪದವು ಮತ್ತು ಮೂಡಬಿದಿರೆಯ ಜೈನ್ ಪ.ಪೂ. ಕಾಲೇಜುಗಳು ಪಡೆದುಕೊಂಡಿವೆ.

Pre University district level Netball Tournament

ಪುರುಷರ ವಿಭಾಗಲ್ಲಿ ಮೂಡಬಿದಿರೆಯ ಜೈನ್ ಪದವಿ ಪೂರ್ವ ಕಾಲೇಜಿನ ಸುಜಿತ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರೆ, ಮಹಿಳಾ ವಿಭಾಗದಲ್ಲಿ ಉತ್ತಮ ಆಟಗಾರ್ತಿ ಪ್ರಶಸ್ತಿ ಉಜಿರೆ ಎಸ್ಡಿಎಮ್ ಕಾಲೇಜಿನ ಮೇಘನಾಗೆ ಲಭಿಸಿದೆ.
Pre University district level Netball Tournament

ಬೆಳ್ತಂಗಡಿಯ ಮುಖ್ಯ ಪೊಲೀಸ್ ಅಧಿಕಾರಿ ಪಿತಾಂಬರ್ ಹೆರಾಜೆ ಇವರಿಂದ ಉದ್ಘಾಟಿಸಲ್ಪಟ್ಟ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಎಸ್ ಡಿಎಂ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ. ದಿನೇಶ್ ಚೌಟ ವಹಿಸಿಕೊಂಡಿದ್ದರು.

Jain College

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಎಸ್ ಡಿಎಂ ಕ್ರೀಡಾಸಂಘದ ಕಾರ್ಯದರ್ಶಿ ಪ್ರೊ. ಬಾಲಭಾಸ್ಕರ್, ದೈಹಿಕ ಶಿಕ್ಷಣ ನಿರ್ದೇಶಕ ಎಚ್. ರಮೇಶ್, ಎಸ್ ಡಿಎಂ ಪ.ಪೂ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಂದೇಶ್ ಪೂಂಜ, ಸ್ವಾಮಿ ವಿವೇಕಾನಂದ ಕಾಲೇಜು ಎಡಪದವಿನ ತರಬೇತುದಾರ ಪ್ರೇಮ್‍ನಾಥ್ ಶೆಟ್ಟಿ ಮುಂತಾದವರು ಉಪಸ್ಥತರಿದ್ದರು. ಉಜಿರೆಯ ಎಸ್ ಡಿಎಂ ನ್ಯಾಚುರೋಪತಿ ಪ್ರಕೃತಿ ಚಿಕಿತ್ಸಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಧರ್ಮೇಂದ್ರ ಕಾರ್ಯಕ್ರಮ ನಿರೂಪಿಸಿದರು.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X