10 ಮೀ. ಏರ್ ಪಿಸ್ತೂಲ್ ರ್ಯಾಂಕಿಂಗ್: ಶಹಜರ್ ರಿಜ್ವಿ ವಿಶ್ವ ನಂ. 1

ನವದೆಹಲಿ, ಮೇ 1: ಭಾರತದ ಪ್ರತಿಭಾನ್ವಿತ ಶೂಟರ್ ಶಹಜರ್ ರಿಜ್ವಿ ಅವರು ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ ರ್ಯಾಂಕಿಂಗ್ ನಲ್ಲಿ ನಂ. 1 ಸ್ಥಾನಕ್ಕೇರಿದ್ದಾರೆ. ಕೊರಿಯಾದ ಚಾಂಗ್ವಾನ್ ನಲ್ಲಿ ನಡೆದ ಐಎಸ್‌ಎಸ್‌ಎಫ್ ಶೂಟಿಂಗ್ ವರ್ಲ್ಡ್ ಕಪ್ ನ 10 ಮೀ. ಏರ್ ಪಿಸ್ತೂಲ್ ನಲ್ಲಿ ರಿಜ್ವಿ ಬೆಳ್ಳಿ ಗೆದ್ದ ಸಾಧನೆ ಮೆರೆದ ಬಳಿಕ ನಂ. 1 ಸ್ಥಾನಕ್ಕೇರಿ ಗಮನ ಸೆಳೆದಿದ್ದಾರೆ.
ರಿಜ್ವಿ ಒಟ್ಟು 1654 ರೇಟಿಂಗ್ ಪಾಯಿಂಟ್ ಗಳಿಸಿದ್ದರೆ, ರಷ್ಯಾದ ಆರ್ಟೆಮ್ ಚೆರ್ನೌಸೊವ್ 1046, ಜಪಾನಿನ ಟೊಮೊಯಿಕಿ ಮಾತ್ಸುಡಾ ಅವರು 803 ಅಂಕ ಸಂಪಾದಿಸಿದ್ದಾರೆ.
ಟಾಟ್ ಟೆನ್ ರ್ಯಾಂಕಿಂಗ್ ನಲ್ಲಿ ಭಾರತದ ಇನ್ನೂ ಕೆಲವು ಶೂಟರ್ ಗಳು ಸ್ಥಾನ ಗಳಿಸಿದ್ದು, ಜಿತು ರೈ 6ನೇ, ಓಂ ಪ್ರಕಾಶ್ ಮಿಥರ್ವಾಲ್ ಮಂಗಳವಾರ ಪ್ರಕಟಿಸಲಾದ ಪಟ್ಟಿಯಲ್ಲಿ 12ನೇ ಸ್ಥಾನ ಪಡದುಕೊಂಡಿದ್ದಾರೆ.
ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ವನಿತಾ ಶೂಟರ್ ಮನು ಭಾಕರ್ 10 ಮೀ. ಏರ್ ಪಿಸ್ತೂಲ್ ರ್ಯಾಂಕಿಂಗ್ ನಲ್ಲಿ 4ನೇ ಸ್ಥಾನ ಗಳಿಸಿದ್ದಾರೆ.
Story first published: Tuesday, May 8, 2018, 15:50 [IST]
Other articles published on May 8, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications