ಐಎಸ್‌ಎಸ್‌ಎಫ್ ವಿಶ್ವಕಪ್: ಭಾರತದ ಶೂಟರ್ ಜಿತು ರಾಯ್ ಗೆ ಕಂಚು
ನವದೆಹಲಿ, ಫೆಬ್ರವರಿ. 28 : ಇಲ್ಲಿ ನಡೆಯುತ್ತಿರುವ ಐಎಸ್ ಎಸ್‌ಎಫ್ ವಿಶ್ವಕಪ್ 10 ಮೀ ಶೂಟಿಂಗ್ ಏರ್ ಪಿಸ್ತೂಲ್ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಭಾರತ ಹೆಮ್ಮೆ ಶೂಟರ್ ಜಿತು ರಾಯ್ ಕಂಚಿಗೆ ಮುತ್ತಿಕ್ಕಿದ್ದಾರೆ.
ಮಂಗಳವಾರ ನಡೆದ 10 ಮೀ ಏರ್ ಪಿಸ್ತೂಲ್ ಸಿಂಗಲ್ಸ್ ವಿಭಾಗದಲ್ಲಿ 216.7 ಅಂಕಗಳನ್ನು ಕಲೆಹಾಕುವ ಮೂಲಕ ಜಿತು ಕಂಚು ಪದಕಕ್ಕೆ ಕೊರಳೊಡ್ಡಿದರು.
ಜಪಾನಿನ ಟೊಮೊಯುಕಿ ಮತ್ಸೂದ್ 240.1 ಅಂಕಗಳಿಸಿ ವಿಶ್ವ ದಾಖಲೆ ಮಾಡುವುದರೊಂದಿಗೆ ಚಿನ್ನಕ್ಕೆ ಮುತ್ತಿಟ್ಟರು. ಇನ್ನು ವಿಯೆಟ್ನಾಂನ ಕ್ಸುವಾನ್ ವಿನ್ಹ ಹಾಂಗ್ ಅವರು 236.6 ಅಂಕದೊಂದಿಗೆ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಜಯಿಸಿದರು.

ಸೋಮವಾರ ನಡೆದ ಇದೇ ಟೂರ್ನಿಯ 10 ಮೀ. ಮಿಕ್ಸೆಡ್ ಟೀಮ್ ಏರ್ ಪಿಸ್ತೂಲ್ ವಿಭಾಗದ ಫೈನಲ್ ನಲ್ಲಿ ಜಿತು ರಾಯ್ ಮತ್ತು ಹೀನಾ ಸಿಧು ಜೋಡಿ ಭಾರತಕ್ಕೆ ಬಂಗಾರದ ಪದಕ ತಂದುಕೊಟ್ಟಿದ್ದಾರೆ.
ಭಾರತೀಯ ಶೂಟರ್ ಅಂಕುರ್ ಮಿತ್ತಲ್ ಅವರು, ನವದೆಹಲಿಯಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಶೂಟಿಂಗ್ ಸಂಸ್ಥೆಯ ವಿಶ್ವಕಪ್ ಪಂದ್ಯಾವಳಿಯ ಪುರುಷರ ಡಬಲ್ ಟ್ರಾಪ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದಿದ್ದಾರೆ.
ಇದರಿಂದ ಭಾರತಕ್ಕೆ ಇದು ಮೂರನೇ ಪದಕ ಲಭಿಸಿದಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications