For Quick Alerts
ALLOW NOTIFICATIONS  
For Daily Alerts

IPL 2024: ತನ್ನ ಪೋಷಕರಿಗಾಗಿ ಮನೆ ಖರೀದಿಸಲು ಮುಂದಾದ ಅನ್‌ಕ್ಯಾಪ್ಡ್ ಭಾರತೀಯ ತಾರೆ

ಇತ್ತೀಚಿಗೆ 2024ರ ಐಪಿಎಲ್‌ಗಾಗಿ ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಶುಭಂ ದುಬೆ ಅವರನ್ನು 5.60 ಕೋಟಿ ರೂಪಾಯಿಗಳಿಗೆ ಖರೀದಿಸಿತು.

ಇಷ್ಟು ದೊಡ್ಡ ಮೊತ್ತವು ಯುವ ಕ್ರಿಕೆಟಿಗ ಶುಭಂ ದುಬೆ ಅವರ ಜೀವನವನ್ನೇ ಬದಲಿಸಿದೆ ಮತ್ತು ಉತ್ತಮ ತಿರುವನ್ನು ಪಡೆದುಕೊಂಡಿತು. ಬಡತನದ ಕುಟುಂಬದಲ್ಲಿ ಬೆಳೆದ ವಿದರ್ಭದ ಆಟಗಾರನ ಜೀವನದಲ್ಲಿ ಬದಲಾವಣೆಯ ಗಾಳಿ ಬೀಸಿದಂತಾಯಿತು.

Shubham Dubey Plans to Buy a New House for Parents from Rajasthan Royals IPL Auction Money in 2024

ಇತ್ತೀಚಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 185ರ ಸ್ಟ್ರೈಕ್ ರೇಟ್‌ನೊಂದಿಗೆ ಪ್ರಭಾವಿ ಪ್ರದರ್ಶನ ನೀಡಿದ, ಆಕ್ರಮಣಕಾರಿ ಮಧ್ಯಮ ಕ್ರಮಾಂಕದ ಬ್ಯಾಟರ್ ಶುಭಂ ದುಬೆ ಅವರ ತಂದೆ ಅವರಿಗಾಗಿ ಕ್ರಿಕೆಟ್ ಕಿಟ್ ಖರೀದಿಸಲು ಪಾನ್ ಮಾರಾಟದಂತಹ ಸಣ್ಣ ಕೆಲಸಗಳನ್ನು ಮಾಡುವುದನ್ನು ನೋಡಿದ್ದರು. ಆದರೆ, ಅವರ ಕುಟುಂಬದ ಹೋರಾಟವು ಇದೀಗ ಅರ್ಥವಾಗುವಂತೆ ಸಂತೋಷಪಟ್ಟರು.

"ನನ್ನ ಕುಟುಂಬಕ್ಕೆ ಕ್ರಿಕೆಟ್ ಕಿಟ್ ಖರೀದಿಸಲು ಸಾಧ್ಯವಾಗಲಿಲ್ಲ. ಆದರೂ, ನನ್ನ ತಂದೆ ನನಗೆ ಒಂದನ್ನು ಖರೀದಿಸಿ ಕೊಟ್ಟರು. ನಮ್ಮ ಆರ್ಥಿಕ ಪರಿಸ್ಥಿತಿ ಕಷ್ಟದ ಹೊರತಾಗಿಯೂ ಅವರು ನನ್ನನ್ನು ಬೇರೆಯದನ್ನು ಮಾಡಲು ಒತ್ತಾಯಿಸಲಿಲ್ಲ".

"ನನ್ನ ತಂದೆ ಸಾಧಾರಣ ವ್ಯಕ್ತಿಯಾಗಿದ್ದು, ಕುಟುಂಬವನ್ನು ಪೋಷಿಸಲು ಸಣ್ಣ ಸಣ್ಣ ಕೆಲಸಗಳನ್ನು ಮಾಡಿದರು. ಪಾನ್ ಸ್ಟಾಲ್ ಅನ್ನು ನಿರ್ವಹಿಸುವುದರಿಂದ ಹಿಡಿದು ಹೋಟೆಲ್ ಮ್ಯಾನೇಜರ್ ಆಗಿ ಕೆಲಸ, ರಿಯಲ್ ಎಸ್ಟೇಟ್‌ ಪ್ರವೇಶಿಸುವವರೆಗೆ ಶ್ರಮಿಸಿದರು," ಎಂದು ಶುಭಂ ದುಬೆ ಹೇಳಿರುವುದನ್ನು ರಾಜಸ್ಥಾನ್ ರಾಯಲ್ಸ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಈಗ, ಶುಭಂ ದುಬೆ ಅವರು ತಮ್ಮ ಕುಟುಂಬಕ್ಕಾಗಿ ಹೊಸ ಮನೆ ಖರೀದಿಸಲು ಬಯಸಿದ್ದಾರೆ. "ನನ್ನ ಕುಟುಂಬದಲ್ಲಿ ನನ್ನ ದೊಡ್ಡ ಬೆಂಬಲಿಗರನ್ನು ನಾನು ಕಂಡುಕೊಂಡಿದ್ದೇನೆ. ನನ್ನ ಅವಳಿ ಸಹೋದರನ ಒತ್ತಡವು ನನ್ನ ಮೇಲೆ ಪರಿಣಾಮ ಬೀರಲು ಬಿಡದೆ ಆರ್ಥಿಕವಾಗಿ ಮನೆಯನ್ನು ನೋಡಿಕೊಂಡರು. ನನ್ನ ಪೋಷಕರು ನನ್ನ ಬೆನ್ನ ಹಿಂದೆಯೇ ಬೆಂಬಲಕ್ಕಿದ್ದರು".

ನಾನು ಗಾಯಗೊಂಡಾಗ ಮತ್ತು ಸ್ವಲ್ಪ ಸಮಯದವರೆಗೆ ಕ್ರಿಕೆಟ್‌ನಿಂದ ಹೊರಗುಳಿದಾಗ, ಕುಟುಂಬದವರು ನನ್ನನ್ನು ಸಕಾರಾತ್ಮಕ ಮನಸ್ಥಿತಿಯಲ್ಲಿ ಇರಿಸಿದರು ಎಂದು ಶುಭಂ ದುಬೆ ತಿಳಿಸಿದರು.

"ನಾನು ಅವರಿಗೆ ಅರ್ಹವಾದ ಸೌಕರ್ಯ ಮತ್ತು ಸಂತೋಷವನ್ನು ನೀಡಲು ಬಯಸುತ್ತೇನೆ. ಹೀಗಾಗಿ, ನಾನು ಮೊದಲು ಕುಟುಂಬಕ್ಕಾಗಿ ಮನೆ ಖರೀದಿಸಲು ಬಯಸುತ್ತೇನೆ," ಎಂದು ಶುಭಂ ದುಬೆ ಹೇಳಿದ್ದಾರೆ.

ವಿದರ್ಭ ತಂಡದ ನಾಯಕ ಫೈಜ್ ಫಜಲ್ ಅವರನ್ನು ಭೇಟಿ ಮಾಡಿದ್ದು, ಅವರಿಗೆ ಉನ್ನತ ಮಟ್ಟದ ಕ್ರಿಕೆಟ್‌ಗೆ ಹೆಚ್ಚು ಅಗತ್ಯವಿರುವ ಆರಂಭಿಕ ಅವಕಾಶವನ್ನು ನೀಡಿದೆ ಎಂದಿದ್ದಾರೆ.

"ನನ್ನ ಚಿಕ್ಕಪ್ಪನ ಸ್ನೇಹಿತರೊಬ್ಬರು ನಾನು ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಪ್ರತಿಭಾವಂತ ಚಿಕ್ಕ ಮಕ್ಕಳಿಗೆ ತರಬೇತಿ ನೀಡುವ 'ಅಡ್ವೊಕೇಟ್ 11'ಗೆ ದಾಖಲಾಗಬೇಕೆಂದು ಸಲಹೆ ನೀಡಿದರು. ನಾನು ಫಜಲ್ ಅವರನ್ನು ಮೊದಲು ನೋಡಿದ್ದು ಅಲ್ಲಿಯೇ. ಅವರ ವ್ಯಕ್ತಿತ್ವ, ಅವರು ನಡೆಸಿದ ಆತ್ಮವಿಶ್ವಾಸ ಮತ್ತು ಎಲ್ಲರೂ ಅವರನ್ನು ತುಂಬಾ ಗೌರವದಿಂದ ನಡೆಸಿಕೊಂಡ ರೀತಿ, ನಾನು ಕೂಡ ಆ ಮಟ್ಟವನ್ನು ತಲುಪಲು ಬಯಸುತ್ತೇನೆ ಎಂದು ಭಾವಿಸಿದೆ," ಎಂದು ಶುಭಂ ದುಬೆ ತಿಳಿಸಿದರು.

ವಿದರ್ಭ ತಂಡದ ನಾಯಕ ಫೈಜ್ ಫಜಲ್ ಕೂಡ ಎಡಗೈ ಬ್ಯಾಟರ್. ಆದ್ದರಿಂದ, ನಾನು ಆತನೊಂದಿಗೆ ಇನ್ನಷ್ಟು ಆತ್ಮೀಯತೆ ಹೊಂದಬಲ್ಲೆ ಎಂದು ಶುಭಂ ದುಬೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯುವ ಬ್ಯಾಟರ್ ಶುಭಂ ದುಬೆ ಇದೀಗ ಶ್ರೀಲಂಕಾದ ಮಾಜಿ ಬ್ಯಾಟ್ಸ್‌ಮನ್, ರಾಜಸ್ಥಾನ್ ರಾಯಲ್ಸ್ ಕ್ರಿಕೆಟ್ ನಿರ್ದೇಶಕ ಮತ್ತು ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ಅವರನ್ನು ಭೇಟಿಯಾಗಲು ಬಯಸಿದ್ದಾರೆ.

"ನಾನು ಸಂಗಾ ಸರ್ ಅವರ ನಿವೃತ್ತಿಯವರೆಗೂ ಅವರ ಪ್ರಯಾಣವನ್ನು ಅನುಸರಿಸಿದ್ದೇನೆ ಮತ್ತು ಅವರು ಕ್ರಿಕೆಟ್ ಲೋಕದಲ್ಲಿ ಗೌರವಾನ್ವಿತ ಆಟಗಾರನಾಗಿದ್ದಾರೆ. ಅವರು ಕೂಡ ನನ್ನಂತೆಯೇ ಎಡಗೈ ಬ್ಯಾಟರ್. ಆದ್ದರಿಂದ, ಆತನ ಸುತ್ತಲೂ ಇರುವುದು ಖಂಡಿತವಾಗಿಯೂ ನನಗೆ ಕಲಿಕೆಯ ಅನುಭವವಾಗಿರುತ್ತದೆ," ಎಂದು ರಾಜಸ್ಥಾನ್ ರಾಯಲ್ಸ್ ಯುವ ಬ್ಯಾಟರ್ ಶುಭಂ ದುಬೆ ಹೇಳಿದರು.

Story first published: Thursday, December 28, 2023, 17:45 [IST]
Other articles published on Dec 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+