ಯೂಎಸ್ ಓಪನ್ ಗೆ ಪ್ರವೇಶ ಗಿಟ್ಟಿಸಿದ್ದಾರೆ ಗಾಲ್ಫರ್ ಶುಭಂಕರ್

ಕೊಲಂಬಿಯಾ, ಜೂ. 5: ಗಾಲ್ಫ್ ಕ್ಷೇತ್ರದಲ್ಲಿ ಭಾರತವನ್ನು ಪ್ರತಿನಿಧಿಸುತ್ತ ಗಮನ ಸೆಳೆಯುತ್ತಿರುವ ಗಾಲ್ಫರ್ ಶುಭಂಕರ್ ಶರ್ಮ ಅವರು ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಮುಂದಿನ ವಾರ ನ್ಯೂಯಾರ್ಕ್ ನ ಶಿನ್ನೆಕಾಕ್ ಹಿಲ್ಸ್ ನಲ್ಲಿ ನಡೆಯಲಿರುವ ಯೂಎಸ್ ಓಪನ್ ಚಾಂಪಿಯನ್ ಶಿಪ್ ಗೆ ಶುಭಂಕರ್ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಪ್ರತಿಷ್ಠಿತ ಪಂದ್ಯಕ್ಕಾಗಿ ಸ್ಮರ್ಣಾರ್ಥ ಟೂರ್ನಮೆಂಟ್ ಮೂಲಕ ಅರ್ಹತಾ ಸ್ಪರ್ಧೆ ನಡೆಸಲಾಯಿತು. ಈ ಸಂದರ್ಭ ಬ್ರೂಕ್ ಸೈಡ್ ಗಾಲ್ಫ ಆಂಡ್ ಕಂಟ್ರಿ ಕ್ಲಬ್ ಮತ್ತು ದ ಲೇಕ್ಸ್ ಗಾಲ್ಫ್ ಆಂಡ್ ಕಂಟ್ರಿ ಕ್ಲಬ್ ನಡುವಿನ ಸ್ಪರ್ಧೆಯಲ್ಲಿ ಬ್ರೂಕ್ ಸೈಡ್ ಕ್ಲಬ್ ಪರ ಶುಭಂಕರ್ 69-68ರ ಅಪೂರ್ವ ಪ್ರದರ್ಶನ ನೀಡಿದರು.
21ರ ಹರೆಯದ ಶರ್ಮ ಮುಂದಿನ ಹಂತದ ಸ್ಪರ್ಧೆಗೆ ಪ್ರವೇಶಗಿಟ್ಟಿಸಿಕೊಂಡಿದ್ದರೆ, ಭಾರತೀಯ ಇನ್ನಿಬ್ಬರು ಗಾಲ್ಫರ್ ಗಳಾದ ಶಿವ ಕಪೂರ್ ಮತ್ತು ಅರ್ಜುನ್ ಅತ್ವಾಲ್ ವಿಫಲರಾಗಿದ್ದಾರೆ.
ಮುಂದಿನ ಸ್ಪರ್ಧೆಗೆ ಆಯ್ಕೆಯಾಗಿರುವ ಬಗ್ಗೆ ಖುಷಿ ವ್ಯಕ್ತಪಡಿಸುತ್ತ ಶುಭಂಕರ್, 'ನನ್ನ ಪಾಲಿಗಿದು ಅಪೂರ್ವ ದಿನ. ಸ್ಪರ್ಧೆಯೇನು ಸುಲಭವಿರಲಿಲ್ಲ. ಬ್ರೂಕರ್ ಸೈಡ್ ಪರ ಆಡಿ ಗೆದ್ದಿರುವುದಕ್ಕಾಗಿ ಖುಷಿಯಾಗಿದೆ' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications