Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶೂಟರ್, ಮಗ ಜಸ್ಪಾಲ್ ರಾಣಾ ಕಳಕೊಂಡ ದುಃಖದಲ್ಲಿ ಅಮ್ಮನೂ ಸಾವು

Shyama Devi Rana Passes Away: ದಿವಂಗತ ಶೂಟಿಂಗ್ ತರಬೇತುದಾರ (ಕೋಚ್) ಜಸ್ಪಾಲ್ ರಾಣಾ ಅವರ ಕುಟುಂಬದಲ್ಲಿ ಮತ್ತೊಂದು ಅತ್ಯಂತ ದುಃಖದ ಘಟನೆ ನಡೆದಿದೆ. ಮಗ ಜಸ್ಪಾಲ್ ರಾಣಾ ನಿಧನದ ಆಘಾತದಿಂದ ಹೊರಬರಲು ಸಾಧ್ಯವಾಗದೆ ಅದೆ ದುಃಖದಲ್ಲಿ ಅವರ ತಾಯಿ ಶ್ಯಾಮಾ ದೇವಿ ರಾಣಾ ಸಹ ಮಂಗಳವಾರ (ಜೂನ್ 16) ಕೊನೆಯುಸಿರೆಳೆದಿದ್ದಾರೆ. ದೆಹಲಿಯ ಆಸ್ಪತ್ರೆಯೊಂದರಲ್ಲಿ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.

ಕುಟುಂಬದ ಮೂಲಗಳ ಪ್ರಕಾರ, ಶ್ಯಾಮಾ ದೇವಿ ರಾಣಾ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ಪುತ್ರ ಜಸ್ಪಾಲ್ ರಾಣಾ ಅವರ ನಿಧನದ ಬಳಿಕ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಈ ದುಃಖದ ಘಟನೆಯಿಂದ ಇಡೀ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

Shyama Devi Rana Passes Away at 78 After Son Jaspal Rana s Death In Delhi on June 16 Know details

ಜೂನ್ 12ರಂದು ಮಗ ನಿಧನ

ಜೂನ್ 12ರಂದು ಭಾರತೀಯ ಶೂಟಿಂಗ್ ತರಬೇತುದಾರ ಜಸ್ಪಾಲ್ ರಾಣಾ ಅವರು ನಿಧನರಾಗಿದ್ದರು. ಅವರ ನಿಧನದ ಸುದ್ದಿ ಕ್ರೀಡಾ ಜಗತ್ತಿನಲ್ಲಿ ತೀವ್ರ ಆಘಾತ ಮೂಡಿಸಿತ್ತು. ಜಸ್ಪಾಲ್ ರಾಣಾ ಅವರು ದೇಶದ ಅತ್ಯಂತ ಯಶಸ್ವಿ ಪಿಸ್ತೂಲ್ ಶೂಟರ್‌ಗಳಲ್ಲಿ ಒಬ್ಬರಾಗಿದ್ದು ಮತ್ತು ಅವರು ತಮ್ಮ ಕ್ರೀಡಾ ಜೀವನದಲ್ಲಿ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಾಧನೆಗಳನ್ನು ಮಾಡಿದ್ದರು.

ಆಸ್ಪತ್ರೆಯ ವೈದ್ಯರು ಹೇಳಿದ್ದೇನು?

ಆಸ್ಪತ್ರೆಯ ವೈದ್ಯರ ಪ್ರಕಾರ, ಜಸ್ಪಾಲ್ ರಾಣಾ ಅವರನ್ನು ಆಸ್ಪತ್ರೆಗೆ ಕರೆತರುವ ಸುಮಾರು 3 ದಿನಗಳ ಹಿಂದೆಯೇ ಅವರಿಗೆ ಹೃದಯಾಘಾತವಾಗಿತ್ತು. ಆ ಸಮಯದಲ್ಲಿ ಅವರು ಪ್ರಯಾಣದಲ್ಲಿದ್ದರು ಮತ್ತು ನಿರಂತರವಾಗಿ ಎದೆನೋವಿನ ಬಗ್ಗೆ ದೂರು ನೀಡುತ್ತಿದ್ದರು. ಆರಂಭಿಕ ದಿನಗಳಲ್ಲಿ ಈ ನೋವನ್ನು ಸಾಮಾನ್ಯ ತೊಂದರೆ ಎಂದು ಭಾವಿಸಿ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ತಪಾಸಣೆಯ ವೇಳೆ ಅವರ ಹೃದಯದ ಪ್ರಮುಖ ಅಪಧಮನಿಯೊಂದು ಸಂಪೂರ್ಣವಾಗಿ ಬ್ಲಾಕ್ ಆಗಿರುವುದು ಪತ್ತೆಯಾಯಿತು. ಇದರ ಪರಿಣಾಮವಾಗಿ ತೀವ್ರ ಹೃದಯಾಘಾತ ಸಂಭವಿಸಿತ್ತು. ಹೃದಯದ ಒಂದು ಭಾಗವು ಸಾಕಷ್ಟು ದುರ್ಬಲಗೊಂಡಿತ್ತು ಮತ್ತು ರಕ್ತ ಪಂಪ್ ಮಾಡುವ ಸಾಮರ್ಥ್ಯವೂ ತೀರಾ ಕಡಿಮೆಯಾಗಿತ್ತು. ಪರಿಸ್ಥಿತಿ ಸತತವಾಗಿ ಬಿಗಡಾಯಿಸಿದ ಕಾರಣ ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದರು.

Story first published: Tuesday, June 16, 2026, 14:05 [IST]
Other articles published on Jun 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+