Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಅಕ್ಕಾ ನಿನ್‌ ಹುಡುಗ ಹೆಂಗೀರಬೇಕು?' ಫ್ಯಾನ್ಸ್ ಪ್ರಶ್ನೆಗೆ ನಾಚಿ ನೀರಾದ ಸ್ಮೃತಿ ಮಂಧಾನ! ಉತ್ತರವೇನು ಗೊತ್ತೇ?

ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಸದ್ದು ಮಾಡುತ್ತಿರುವ ಅತ್ಯಂತ ಸುಂದರ ಆಟಗಾರ್ತಿಯರಲ್ಲಿ ಒಬ್ಬರು ಎನ್ನಬಹುದು. ತನ್ನ ಮುದ್ದಾದ ನಗುವಿನಿಂದಲೇ ಕೋಟ್ಯಂತರ ಹುಡುಗರ ಹೃದಯವನ್ನು ಕದ್ದಿದ್ದಾಳೆ.

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿನ ಅದ್ಭುತ ಪ್ರದರ್ಶನಕ್ಕೆ 2017ರಲ್ಲಿ ಸ್ಮೃತಿ ಮಂಧಾನ ಮೊದಲ ಬಾರಿಗೆ ಹೆಡ್‌ಲೈನ್ ಆದರು ಮತ್ತು ಅಂದಿನಿಂದ ಅಭಿಮಾನಿಗಳ ನೆಚ್ಚಿನ ಆಟಗಾರ್ತಿಯರಾಗಿದ್ದಾರೆ.

ಸ್ಮೃತಿ ಮಂಧಾನ ಈ ತಿಂಗಳು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಎರಡು ಟೆಸ್ಟ್ ಪಂದ್ಯಗಳ ಗೆಲುವುಗಳಲ್ಲಿ ದೊಡ್ಡ ಪಾತ್ರವನ್ನು ವಹಿಸಿದ ಅತ್ಯುತ್ತಮ ಬ್ಯಾಟರ್ ಆದರು. ಸ್ಮೃತಿ ಮಂಧಾನ ಸದ್ಯ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿಯಾಗಿದ್ದಾರೆ ಮತ್ತು ಸಂಭಾವ್ಯ ಭವಿಷ್ಯದ ನಾಯಕಿ.

Smriti Mandhana Shyly Answered the Question About the Qualities of Her Future Husband

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಹಿಂದಿಯ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ 'ಕೌನ್ ಬನೇಗಾ ಕರೋಡ್‌ಪತಿ' (ಕೆಬಿಸಿ)ಯ 'ಹಾಟ್ ಸೀಟ್' ಮೇಲೆ ಸ್ಮೃತಿ ಮಂಧಾನ ಕುಳಿತಿದ್ದರು. ಈ ವೇಳೆ ಕಠಿಣವಾದ ಪ್ರಶ್ನೆಯನ್ನು ಎದುರಿಸಬೇಕಾಗಿತ್ತು ಆದರೆ 'ಕಂಪ್ಯೂಟರ್‌ಜಿ' ಇಂದ ಅಲ್ಲ.

ಈ ಪ್ರಶ್ನೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಯುವ ಅಭಿಮಾನಿಯಿಂದ ಬಂತು ಮತ್ತು ಇದು ಸ್ಮೃತಿ ಮಂಧಾನರ ಭಾವಿ ಪತಿಯ ಕುರಿತಾದ ಪ್ರಶ್ನೆಯಾಗಿತ್ತು. ಈ ಅಭಿಮಾನಿ ಸ್ಮೃತಿ ಮಂಧಾನ ಅವರ ಪ್ರಕಾರ, ಒಳ್ಳೆಯ ಹುಡುಗ ಅಥವಾ ಆದರ್ಶ ಪತಿ ಯಾರು ಮತ್ತು ಅವರಲ್ಲಿ ಯಾವ ಗುಣಗಳನ್ನು ಹುಡುಕುತ್ತಿದ್ದೀರಾ? ಎಂದು ಕೇಳಲಾಯಿತು.

ಭಾರತ ಪುರುಷರ ತಂಡದ ವಿಕೆಟ್‌ಕೀಪರ್ ಮತ್ತು ಬ್ಯಾಟರ್ ಇಶಾನ್ ಕಿಶನ್ ಕೂಡ ಇದೇ ವೇಳೆ ಹಾಟ್ ಸೀಟ್ ಕುಳಿತು ಸ್ಮೃತಿ ಮಂಧಾನಗೆ ಸಾಥ್ ನೀಡಿದರು.

ಸ್ಮೃತಿ ಮಂಧಾನಗೆ ಈ ಪ್ರಶ್ನೆಯನ್ನು ಕೇಳಿದಾಗ ಇಶಾನ್ ಕಿಶನ್ ತನ್ನ ನಗುವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನಿರೂಪಕ ಅಮಿತಾಬ್ ಬಚ್ಚನ್ ಕೂಡ ಹಠಾತ್ ಪ್ರಶ್ನೆಯಿಂದ ಆಶ್ಚರ್ಯಗೊಂಡರು ಮತ್ತು ವಿಸ್ಮಯಕಾರಿಯಾಗಿ ಅಭಿಮಾನಿಯತ್ತ ನೋಡಿದರು.

ಸ್ಮೃತಿ ಮಂಧಾನ, ಮೊದಲನೆಯದಾಗಿ ಈ ಪ್ರಶ್ನೆಗೆ ನಾಚಿ ನೀರಾದಳು ಮತ್ತು ಅವಳು ತಕ್ಕ ಉತ್ತರವನ್ನು ನೀಡುವರೆಗೂ ನಗುತ್ತಲೇ ಇದ್ದಳು. ತನ್ನ ಕ್ರಿಕೆಟ್ ವೃತ್ತಿಯ ಸವಾಲುಗಳನ್ನು ಸಹ ಅರ್ಥಮಾಡಿಕೊಳ್ಳುವ 'ಒಳ್ಳೆಯ ಹುಡುಗ'ನನ್ನು ಹುಡುಕುತ್ತಿದ್ದೇನೆ ಎಂದು ಭಾರತೀಯ ಮಹಿಳಾ ತಂಡದ ಉಪನಾಯಕಿ ಹೇಳಿದಳು.

"ನೀವು ಈ ಪ್ರಶ್ನೆ ಕೇಳ್ತೀರಾ ಅಂತಾ ಅಂದುಕೊಂಡಿರಲಿಲ್ಲ, ಒಳ್ಳೆಯ ಹುಡುಗನಾಗಿರಬೇಕು, ಕಾಳಜಿ ವಹಿಸಬೇಕು ಮತ್ತು ನನ್ನ ವೃತ್ತಿಜೀವನವನ್ನು ಅರ್ಥಮಾಡಿಕೊಳ್ಳುವವನಾಗಿರಬೇಕು".

"ನಾನು ಮಹಿಳಾ ಕ್ರೀಡಾಪಟು ಆಗಿರುವ ಕಾರಣ, ಬಹುಶಃ ನಾನು ಹೆಚ್ಚಿನ ಸಮಯವನ್ನು ಅವರಿಗೆ ನೀಡಲು ಸಾಧ್ಯವಾಗುವುದಿಲ್ಲ. ನಾನು ಆಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇನೆ, ಇದನ್ನು ಅರ್ಥಮಾಡಿಕೊಳ್ಳುವ ಹುಡುಗನಾಗಿರಬೇಕು," ಎಂದು ಸ್ಮೃತಿ ಮಂಧಾನ ಉತ್ತರಿಸಿದಳು.

ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಅದ್ಭುತ ಗೆಲುವಿನಲ್ಲಿ ಸ್ಮೃತಿ ಮಂಧಾನ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು ಮೊದಲ ಇನ್ನಿಂಗ್ಸ್‌ನಲ್ಲಿ 74 ರನ್ ಗಳಿಸಿದರೆ, ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 38 ರನ್ ಗಳಿಸಿ ಭಾರತ ತಂಡವನ್ನು ಗೆಲುವಿನ ಗಡಿ ಮುಟ್ಟಿಸಿದರು.

27 ವರ್ಷದ ಮಹಿಳಾ ಕ್ರಿಕೆಟರ್ ಡಿಸೆಂಬರ್ 28ರಂದು ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.

ಸ್ಮೃತಿ ಮಂಧಾನ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ನಾಯಕಿಯೂ ಆಗಿದ್ದಾರೆ.

ಕಳೆದ ಬಾರಿ ಸ್ಮೃತಿ ಮಂಧಾನ ನಾಯಕಿಯಾಗಿ ಕಳಪೆ ಪಂದ್ಯಾವಳಿಯನ್ನು ಹೊಂದಿದ್ದರು. ಏಕೆಂದರೆ ಆರ್‌ಸಿಬಿ ಆಡಿದ 8 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಯಿತು. ಈ ವರ್ಷ ಸ್ಮೃತಿ ಮಂಧಾನಾ ತನ್ನ ತಂಡವನ್ನು ಮೊದಲ ಡಬ್ಲ್ಯುಪಿಎಲ್ ಪ್ರಶಸ್ತಿಗೆ ಮುನ್ನಡೆಸಲು ಎದುರು ನೋಡುತ್ತಿದ್ದಾರೆ.

Story first published: Wednesday, December 27, 2023, 11:52 [IST]
Other articles published on Dec 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+