Table tennis: ಟೇಬಲ್ ಟೆನ್ನಿಸ್ ಆಟದ ಮಹತ್ವ ತಿಳಿದ ಸೈನಿಕರು
ಬೆಂಗಳೂರು ಮೇ 3 ರಂದು, ವಿಶ್ವ ಟೇಬಲ್ ಟೆನ್ನಿಸ್ ದಿನಾಚರಣೆಯ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕ್ರೀಡೆಯ ಮಹತ್ವವನ್ನು ಭಾರತೀಯ ಸೈನಿಕರಿಗೆ ಮತ್ತು ಅವರ ಮಕ್ಕಳಿಗೆ ತಿಳಿಸಲಾಯಿತು.
ಸೈನಿಕರೊಂದಿಗಿನ ಟೇಬಲ್ ಟೆನ್ನಿಸ್ ಕಾರ್ಯಕ್ರಮವನ್ನು ಕೃಷ್ಣಾರ್ಜುನ್ ಸಿಎನ್ ಕಾರ್ಯಗತಗೊಳಿಸಿದ್ದಾರೆ. ಈ ಕಾರ್ಯಕ್ರಮವು ಸೈನಿಕರನ್ನು ಸೃಜನಾತ್ಮಕ ಮತ್ತು ಪ್ರಯೋಜನಕಾರಿ ರೀತಿಯಲ್ಲಿ ಕ್ರೀಡೆಗೆ ಪರಿಚಯಿಸುವ ಗುರಿಯನ್ನು ಹೊಂದಿರುವುದಾಗಿದೆ. ಜೊತೆಗೆ ಟೇಬಲ್ ಟೆನ್ನಿಸ್ ಆಡುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಹೇಳಲಾಯಿತು.

ಈ ಸಂದರ್ಭದಲ್ಲಿ 2024ರ ಟೇಬಲ್ ಟೆನಿಸ್ ಪ್ರವರ್ತಕರಾಗಿ ಕೃಷ್ಣಾರ್ಜುನ್ ಸಿಎನ್ ಅವರನ್ನು ಇಂಟರ್ನ್ಯಾಷನಲ್ ಟೇಬಲ್ ಟೆನ್ನಿಸ್ ಫೌಂಡೇಶನ್ ಅಧಿಕೃತವಾಗಿ ಆಯ್ಕೆ ಮಾಡಿದೆ. ಈ ಕ್ರೀಡೆಯಿಂದಾಗುವ ಅನುಕೂಲಗಳ ಬಗ್ಗೆ ರಾಷ್ಟೀಯ ಟೇಬಲ್ ಟೆನ್ನಿಸ್ ಆಟಗಾರ ನಾಗಾರ್ಜುನ ಸಿಎನ್ ಮತ್ತು ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ತೀರ್ಪುಗಾರ ದಿನೇಶ್ ಅವರು ಮಾಹಿತಿ ನೀಡಿದರು. ಟೇಬಲ್ ಟೆನಿಸ್‌ನಿಂದ ಒತ್ತಡ ಸಮಸ್ಯೆ ನಿವಾರಣೆ, ಏಕಾಗ್ರತೆ ಹೆಚ್ಚಿಸುವುದು, ದೇಹದಲ್ಲಿ ಆಗುವ ಆನೇಕ ಬದಲಾವಣೆಗಳ ಕುರಿತು ತಿಳಿಸಿದರು.
ಬಳಿಕ ನಡೆದ ಟೇಬಲ್ ಟೆನ್ನಿಸ್‌ನಲ್ಲಿ ಗೆದ್ದವರಿಗೆ ಬಹುಮಾನ ನೀಡಲಾಯಿತು. ಈ ಮೂಲಕ ಕ್ರೀಡೆಯಲ್ಲಿ ಭಾಗವಹಿಸುವರನ್ನು ಮತ್ತಷ್ಟು ಉತ್ತೇಜಿಸುವುದರ ಜೊತೆಗೆ ಸಾಧನೆಯ ಮಾಡುವ ಪ್ರಜ್ಞೆಯನ್ನು ಬೆಳೆಸಿತು. ಡಿಐಜಿ ಹೇಮಂತ್ ಝಾ ಮತ್ತು ಐಜಿ ಈಪೆನ್ ಅವರ ಬೆಂಬಲದೊಂದಿಗೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಿತು. ಅಲ್ಲದೆ ಟೆಬಲ್ ಟೆನ್ನಿಸ್ ಕ್ರೀಡೆಗೆ ಇವರು ತೋರಿದ ಪ್ರೋತ್ಸಾಹದಿಂದ ಸೈನಿಕರಲ್ಲಿ ಸೌಹಾರ್ದತೆಯನ್ನು ಬೆಳೆಸಲು ಸಾಧ್ಯವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications