For Quick Alerts
ALLOW NOTIFICATIONS  
For Daily Alerts

'ನಮಸ್ಕಾರ್ ಮೋದಿ ಜೀ'; ಭಾರತದ ಪ್ರಧಾನಿಯನ್ನು ವಿಶಿಷ್ಟವಾಗಿ ಸ್ವಾಗತಿಸಿದ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗರು

15ನೇ ಬ್ರಿಕ್ಸ್ (BRICS) ಶೃಂಗ ಸಭೆಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ, ಆಗಸ್ಟ್ 22ರಂದು ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಲಿದ್ದಾರೆ.

ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆಗಳಾದ ಗ್ಯಾರಿ ಕರ್ಸ್ಟನ್ ಮತ್ತು ಜಾಂಟಿ ರೋಡ್ಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶಕ್ಕೆ ಸ್ವಾಗತಿಸುವ ವಿಡಿಯೋ ಸಂದೇಶಗಳನ್ನು ಬಿಡುಗಡೆ ಮಾಡಿದ್ದಾರೆ.

South African Former Cricketers Welcomes To The Indian Prime Minister Narendra Modi

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಮಟಮೆಲಾ ಸಿರಿಲ್ ರಮಾಫೋಸಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಆಗಸ್ಟ್ 22ರಿಂದ ಆಗಸ್ಟ್ 24ರವರೆಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ಗೆ ಭೇಟಿ ನೀಡಲಿದ್ದಾರೆ.

ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ತನ್ನ ಕುಟುಂಬದೊಂದಿಗೆ 'ಇನ್‌ಕ್ರೆಡಿಬಲ್ ಇಂಡಿಯಾ'ದಲ್ಲಿ ಎರಡು ಅದ್ಭುತ ವಾರಗಳನ್ನು ಕಳೆದಿದ್ದನ್ನು ಸ್ಮರಿಸಿಕೊಂಡರು.

South African Former Cricketers Welcomes To The Indian Prime Minister Narendra Modi

"ನಮಸ್ಕಾರ್ ಮೋದಿ ಜೀ. ಬ್ರಿಕ್ಸ್ ಸಮ್ಮೇಳನಕ್ಕೆ ಸುಸ್ವಾಗತ. ಅಂತಾರಾಷ್ಟ್ರೀಯ ರಾಜಕೀಯ ಮತ್ತು ಆರ್ಥಿಕ ರಂಗದಲ್ಲಿ ನೀವು ಬೃಹತ್ ಪಾತ್ರವನ್ನು ಹೊಂದಿದ್ದೀರಿ ಎಂದು ದಕ್ಷಿಣ ಆಫ್ರಿಕನ್ನರಾದ ನಮಗೆ ತಿಳಿದಿದೆ. ನಿಮ್ಮ ಸಂದೇಶಗಳಿಗೆ ನಮ್ಮ ಧನ್ಯವಾದಗಳು," ಎಂದು ಜಾಂಟಿ ರೋಡ್ಸ್ ವಿಡಿಯೋ ಮೂಲಕ ತಿಳಿಸಿದ್ದಾರೆ.

ಇನ್ನು 2011ರ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಅವರು, "ನಿಮ್ಮನ್ನು ಮತ್ತು ನಿಮ್ಮ ನಿಯೋಗವನ್ನು ದಕ್ಷಿಣ ಆಫ್ರಿಕಾಕ್ಕೆ ಸ್ವಾಗತಿಸಲು ಖುಷಿಯಾಗುತ್ತಿದೆ. ನನ್ನ ಆಟದ ಮತ್ತು ಕೋಚಿಂಗ್ ವೃತ್ತಿಜೀವನದಲ್ಲಿ ಭಾರತದಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ," ಎಂದಿದ್ದಾರೆ.

"ನಾನು ಭಾರತ ತಂಡಕ್ಕೆ ಕೋಚ್ ಆಗಿದ್ದ ಸಮಯದಲ್ಲಿ ನಾನು ಅನೇಕ ಸಂತೋಷದ ನೆನಪುಗಳನ್ನು ಹೊಂದಿದ್ದೇನೆ ಮತ್ತು ಭಾರತೀಯ ಜನರ ಬೆಂಬಲಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ವರ್ಷ ವಿಶ್ವಕಪ್ ಭಾರತಕ್ಕೆ ಮರಳಿದಾಗ ಜಾಗತಿಕ ಕ್ರಿಕೆಟ್‌ಗೆ ತುಂಬಾ ವಿಶೇಷವಾಗಿರುತ್ತದೆ. ಮುಂಬರುವ ಬ್ರಿಕ್ಸ್ ಶೃಂಗಸಭೆಗೆ ನಿಮಗೆ ಮತ್ತು ಎಲ್ಲಾ ಜಾಗತಿಕ ನಾಯಕರಿಗೆ ಹಾರೈಸುತ್ತೇನೆ," ಎಂದು ಗ್ಯಾರಿ ಕರ್ಸ್ಟನ್ ಹೇಳಿದ್ದಾರೆ.

ಗ್ಯಾರಿ ಕರ್ಸ್ಟನ್ ಮತ್ತು ಜಾಂಟಿ ರೋಡ್ಸ್ ಭಾರತ ದೇಶದೊಂದಿಗೆ ಕ್ರಿಕೆಟ್‌ಗೆ ಮೀರಿದ ಸಂಬಂಧವನ್ನು ಹೊಂದಿದ್ದಾರೆ. ಇಬ್ಬರೂ ದಕ್ಷಿಣ ಆಫ್ರಿಕಾದ ಲೆಜೆಂಡ್ ಆಟಗಾರರು. ವಿಭಿನ್ನ ಪಾತ್ರಗಳಲ್ಲಿದ್ದರೂ, ಭಾರತೀಯ ಕ್ರಿಕೆಟ್‌ಗೆ ಗಣನೀಯ ಕೊಡುಗೆ ನೀಡಿದ್ದಾರೆ.

2008ರಿಂದ 2011ರವರೆಗೆ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಗ್ಯಾರಿ ಕರ್ಸ್ಟನ್ ಅವರು ಶಿಸ್ತು, ಗಮನ ಮತ್ತು ಯುದ್ಧತಂತ್ರದ ಸಾಮರ್ಥ್ಯವನ್ನು ಹೇಳಿಕೊಡುವ ಮೂಲಕ ಭಾರತ ತಂಡದ ಐತಿಹಾಸಿಕ 2011ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.

ಮತ್ತೊಂದೆಡೆ, ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಒಬ್ಬರಾಗಿರುವ ಜಾಂಟಿ ರೋಡ್ಸ್, ತಮ್ಮ ಅದ್ಭುತ ಉತ್ಸಾಹ ಮತ್ತು ಫೀಲ್ಡಿಂಗ್ ಪರಿಣತಿಯನ್ನು ಭಾರತದ ಕ್ರಿಕೆಟ್‌ಗೂ ಹೇಳಿಕೊಟ್ಟಿದ್ದಾರೆ.

ಐಪಿಎಲ್ ತಂಡಗಳಾದ ಮುಂಬೈ ಇಂಡಿಯನ್ಸ್, ಕಿಂಗ್ಸ್ XI ಪಂಜಾಬ್ ಮತ್ತು ಸದ್ಯ ಲಕ್ನೋ ಸೂಪರ್ ಜೈಂಟ್‌ಗಳಿಗೆ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.

ವಿಶೇಷವಾಗಿ, ಜಾಂಟಿ ರೋಡ್ಸ್ ಅವರು ಭಾರತದಲ್ಲಿದ್ದಾಗ ಅವರ ಪತ್ನಿ ಹೆಣ್ಣುಮಗುವಿಗೆ ಜನ್ಮ ನೀಡಿದರು. ಹೀಗಾಗಿ ತಮ್ಮ ಮಗಳಿಗೆ 'ಇಂಡಿಯಾ' ಎಂದು ನಾಮಕರಣ ಮಾಡಿದ್ದಾರೆ ಎಂಬುದು ಗಮನಾರ್ಹ ಸಂಗತಿ.

Story first published: Monday, August 21, 2023, 19:56 [IST]
Other articles published on Aug 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+