For Quick Alerts
ALLOW NOTIFICATIONS  
For Daily Alerts

'ಸ್ಪೆಶಲ್ ಒಲಿಂಪಿಕ್ಸ್‌'ನಲ್ಲಿ ಭಾರತದ ಅಮೋಘ ಸಾಧನೆ: ಭಾರತದ ಕೊರಳಿಗೆ 202 ಪದಕಗಳು!

ಸ್ಪೆಶಲ್ ಒಲಿಂಪಿಕ್ಸ್ ವರ್ಲ್ಡ್ ಗೇಮ್ಸ್ 2023ರಲ್ಲಿ ಭಾರತೀಯ ಕ್ರೀಡಾಪಟುಗಳು ಅಮೋಘ ಸಾಧನೆ ಮಾಡಿದ್ದಾರೆ. ಈ ಕ್ರೀಡಾಕೂಟದ ಅಂತ್ಯದಲ್ಲಿ ಭಾರತೀಯ ಕ್ರೀಡಾಪಟುಗಳು ಒಟ್ಟು 202 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ದ್ವಿಶತಕದ ಸಾಧನೆ ಮಾಡಿ ಬೀಗಿದೆ. ರೋಲರ್ ಸ್ಕೇಟಿಂಗ್, ಗಾಲ್ಫ್, ಬಾಸ್ಕೆಟ್‌ಬಾಲ್, ಟೆನಿಸ್, ಹ್ಯಾಂಡ್‌ಬಾಲ್ ಮತ್ತು ವಾಲಿಬಾಲ್ ಸೇರಿದಂತೆ ಸಾಕಷ್ಟು ಕ್ರೀಡೆಗಳಲ್ಲಿ ಭಾರತದ ಸ್ಪರ್ಧಿಗಳು ಪದಕವನ್ನು ಗೆದ್ದಿದ್ದಾರೆ.

ಕ್ರೀಡಾಕೂಟದ ಕೊನೆಯ ದಿನ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳು ಆರು ಪದಕಗಳನ್ನು (2 ಚಿನ್ನ, 3 ಬೆಳ್ಳಿ ಮತ್ತು ಒಂದು ಕಂಚು) ಗೆದ್ದುಕೊಂಡಿದ್ದು ಪದಕಪಟ್ಟಿಯಲ್ಲಿ ದ್ವಿಶತಕದ ಸಾಧನೆ ಮೀರಲು ಕಾರಣವಾಯಿತು. ಆಂಚಲ್ ಗೋಯಲ್ (400 ಮೀ, ಲೆವೆಲ್ ಬಿ, ಮಹಿಳೆ) ಮತ್ತು ರವಿಮತಿ ಅರುಮುಗಂ (400 ಮೀ, ಲೆವೆಲ್ ಸಿ, ಮಹಿಳೆ) ಚಿನ್ನದ ಪದಕ ಗೆದ್ದು ಗಮನಸೆಳೆದಿದ್ದಾರೆ.

Special Olympics 2023: Team India won 202 medals in Special Olympics world Games

ಅಂತಿಮವಾಗಿ ಈ ಕ್ರೀಡಾಕೂಟದಲ್ಲಿ ಭಾರತ 76 ಚಿನ್ನ, 75 ಬೆಳ್ಳಿ ಮತ್ತು 51 ಕಂಚಿನ ಪದಕಗಳನ್ನು ಗೆದ್ದ ಸಾಧನೆ ಮಾಡಿದೆ. ಇನ್ನು ಈ ಪೈಕಿ ಸಾಕೇತ್ ಕುಂದು ಅವರು ಮಿನಿ ಜಾವೆಲಿನ್ ಲೆವೆಲ್ ಬಿ ನಲ್ಲಿ ಬೆಳ್ಳಿ ಗೆದ್ದ ನಂತರ ಲೆವೆಲ್ ಬಿ 400 ಮೀಟರ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದು ಈ ಮೂಲಕ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.

ಇದು ಪ್ರತಿ ವರ್ಷ ನಡೆಯುವ ವಿಶೇಷ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಅತ್ಯಂತ ಯಶಸ್ವಿ ಆವೃತ್ತಿಯಾಗಿದೆ. 1968ರಿಂದ ಈ ವಿಶೇಷ ಒಲಿಂಪಿಕ್ಸ್ ಆಯೋಜಿಸಿಕೊಂಡು ಬರಲಾಗುತ್ತಿದ್ದು ಕ್ರೀಡೆಗಳಲ್ಲಿ ಕೌಶಲ್ಯಗಳನ್ನು ಹೊಂದಿರುವ ಬೌದ್ಧಿಕ ಅಸಾಮರ್ಥ್ಯ ಬೆಳವಣಿಗೆಯ ಅಸಾಮರ್ಥ್ಯ ಹೊಂದಿರುವವರಿಗಾಗಿ ಈ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ

ವಿಶೇಷ ಒಲಿಂಪಿಕ್ಸ್ ಮುಖ್ಯಸ್ಥೆ ಡಾ. ಮಲ್ಲಿಕಾ ನಡ್ಡಾ ಈ ಅವರು ಭಾರತೀಯ ಅಥ್ಲೀಟ್‌ಗಳ ಪ್ರದರ್ಶನದ ಕುರಿತು ಮಾತನಾಡಿದ್ದಾರೆ. ಈ ಕ್ರೀಡಾಪಟುಗಳು ಹಲವಾರು ವಿಚಾರಗಳಲ್ಲಿ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಇಂಥಾ ವಿಶೇಷ ಸಾಮರ್ಥ್ಯ ಹೊಂದಿರುವವರನ್ನು ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳುವುದು ಮತ್ತು ಅವರನ್ನು ಒಪ್ಪಿಕೊಳ್ಳುವುದು ಈ ಸಮಯದ ಅಗತ್ಯವಾಗಿದೆ ಎಂದಿದ್ದಾರೆ.

"ಬೇರೆ ಬೇರೆ ವಿಚಾರಗಳಲ್ಲಿ ನಮ್ಮ ಕ್ರೀಡಾಪಟುಗಳು ಸಾಕಷ್ಟು ಸಾಮಾಜಿಕ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ ಸಮಾಜದಲ್ಲಿ ಚಟುವಟಿಕೆಯಿಂದ ಇಲ್ಲದ ಸದಸ್ಯರು ಎಂದು ಅವರನ್ನು ಪರಿಗಣಿಸಲಾಗಿದೆ. ಅದು ನಿಜಕ್ಕೂ ಸರಿಯಾದ ಆಲೋಚನೆಯಲ್ಲ. ಕ್ರೀಡಾಕೂಟದ ಅಂಗಳದಲ್ಲಿ ಅವರು ನೀಡಿರುವ ಪ್ರದರ್ಶನ ಅವರು ದೊಡ್ಡ ಸಾಧನೆ ಮಾಡಲು ಸಾಧ್ಯ ಎಂಬುದನ್ನು ತೋರಿಸಿದ್ದಲ್ಲದೆ ಅವರಲ್ಲಿ ಸಾಮರ್ಥ್ಯ, ವೇಗ, ಏಕಾಗ್ರಥೆ ಮತ್ತು ಶಿಸ್ತು ಒದೆ ಎಂಬುದನ್ನು ವ್ಯಕ್ತಪಡಿಸಿದ್ದಾರೆ" ಎಂದು ಮಲ್ಲಿಕಾ ನಡ್ಡಾ ಹೇಳಿದ್ದಾರೆ.

Story first published: Monday, June 26, 2023, 15:32 [IST]
Other articles published on Jun 26, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+