13 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ಪ್ರಕಟಿಸಿದ ಕ್ರೀಡಾ ಇಲಾಖೆ

Posted By:
sports department announced Eklavya award

ಬೆಂಗಳೂರು, ಮಾರ್ಚ್‌ 05: ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2016ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟಿಸಿದೆ.

ರಾಜ್ಯದ 13 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲಾಗಿದೆ. ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಏಕಲವ್ಯ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಸಾಧಕರಿಗೆ 2 ಲಕ್ಷ ರೂಪಾಯಿ ನಗದು ಹಾಗೂ ಏಕಲವ್ಯ ಕಂಚಿನ ಪ್ರತಿಮೆ ನೀಡಲಾಗುವುದು.

ಏಕಲವ್ಯ ಪ್ರಶಸ್ತಿ ಪುರಸ್ಕೃತರು

ಪೂರ್ವಿಶ್‌ ಎಸ್‌ ರಾಮ್(ಬ್ಯಾಡ್ಮಿಂಟನ್‌), ರಾಜೇಶ್ ಪ್ರಕಾಶ್ ಉಪ್ಪಾರ್(ಬ್ಯಾಸ್ಕೇಟ್ ಬಾಲ್‌), ಹರ್ಷಿತ ಎಸ್‌(ಅಥ್ಲೆಟಿಕ್), ರೇಣುಕಾ ದಂಡಿನ್‌(ಸೈಕ್ಲಿಂಗ್‌), ಕಾರ್ತಿಕ್‌ ಎ(ವಾಲಿಬಾಲ್‌), ಮಾಳವಿಕ ವಿಶ್ವನಾಥ್(ಈಜು), ಮಯೂರ್ ಡಿ ಭಾನು(ಶೂಟಿಂಗ್‌), ಕೀರ್ತನಾ ಟಿ.ಕೆ(ರೋಯಿಂಗ್), ಅಯ್ಯಪ್ಪ ಎಂ.ಬಿ(ಹಾಕಿ), ಸುಕೇಶ್‌ ಹೆಗ್ಡೆ(ಕಬಡ್ಡಿ), ಗುರುರಾಜ(ಭಾರ ಎತ್ತುವುದು), ರೇವತಿ ನಾಯಕ ಎಂ (ಪ್ಯಾರಾ ಈಜುಪಟು), ಸಂದೀಪ್ ಬಿ ಕಾಟೆ(ಕುಸ್ತಿ).

Story first published: Monday, March 5, 2018, 17:46 [IST]
Other articles published on Mar 5, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ