For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಕ್ರೀಡಾ ಸಚಿವರಿಂದ ಭಾರತದ ಅಧಿಕೃತ ಸ್ಪೂರ್ತಿ ಗೀತೆ ಬಿಡುಗಡೆ

Sports Minister Anurag Thakur released official song on Indian contingent at Tokyo Olympics

ನವದೆಹಲಿ, ಜುಲೈ 14: ಟೋಕಿಯೋ ಒಲಿಂಪಿಕ್ಸ್‌ನ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರೀಡಾಪಟುಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಅಧಿಕೃತ ಗೀತೆಯನ್ನು ಬುಧವಾರ ನೂತನ ಕ್ರೀಡಾಸಚಿವ ಅನುರಾಗ್ ಠಾಕೂರ್ ಬಿಡುಗಡೆಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಒಲಿಂಪಿಕ್ಸ್ ಕ್ರೀಡಾಕೂಟದ ಅವಧಿಯಲ್ಲಿ ಭಾರತೀಯ ಕ್ರೀಡಾಪಟುಗಳನ್ನು ಎಲ್ಲಾ ನಾಗರೀಕರು ತುಂಬುಹೃದಯದಿಂದ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಹಾಡನ್ನು ಭಾರತದ ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಮತ್ತು ಯುವ ಗಾಯಕಿ ಅನನ್ಯಾ ಬಿರ್ಲಾ ಸೇರಿಕೊಂಡು ರಚಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಆಟಗಾರರಿಗೆ ಸ್ಪೂರ್ತಿ ನೀಡುವ ಹಾಡು ಇದಾಗಿದ್ದು 'ಚಿಯರ್ ಫೊರ್ ಇಂಡಿಯಾ- ಹಿಂದೂಸ್ತಾನಿ ವೇ" ಶೀರ್ಷಿಕೆಯಲ್ಲಿ ಪ್ರಸ್ತುತಪಡಿಸಿಲಾಗಿದೆ.

ಈ ಹಾಡನ್ನು ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಕ್ರೀಡಾ ಸಚಿವ ಅನುರಾಗ್ ಠಾಕೂರ್ "ದೇಶದ ಎಲ್ಲಾ ಜನರು ಕೂಡ ಈ ಹಾಡನ್ನು ಕೇಳಬೇಕೆಂದು ನಾನು ಭಾವಿಸುತ್ತೇನೆ. ನೀವು ಕೇಳುವ ಜೊತೆಗೆ ಇತರರನ್ನು ಕೇಳುವಂತೆ ಮಾಡಲು ಹಂಚಿಕೊಳ್ಳಿ. ಇದರ ಜೊತೆಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಆಟಗಾರರಿಗೂ ಸ್ಪೂರ್ತಿಯನ್ನು ನೀಡಬೇಕು, ಅದುವೇ ನಾವು ಅವರಿಗೆ ನೀಡುವ ಬೆಂಬಲವಾಗಿದೆ" ಎಂದು ಅನುರಾಗ್ ಠಾಕೂರ್ ಮನವಿ ಮಾಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಅನುರಾಗ್ ಠಾಕೂರ್ ಈ ಹಾಡನ್ನು ರಚನೆ ಮಾಡಿದ ಎಆರ್ ರೆಹಮಾನ್ ಹಾಗೂ ಅನನ್ಯಾ ಬಿರ್ಲಾ ಕೋವಿಡ್ ಕಾಲದ ಕಠಿಣ ಸಂದರ್ಭದಲ್ಲಿ ಈ ಹಾಡನ್ನು ರಚನೆ ಮಾಡಿದ ಕಾರಣಕ್ಕೆ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.

ವರ್ಚುವಲ್ ವೇದಿಕೆಯಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ರಾಜ್ಯ ಸಚಿವರಾದ ನಿತೀಶ್ ಪ್ರಾಮಾಣಿಕ್, ಕ್ರೀಡಾ ಕಾರ್ಯದರ್ಶಿ ರವಿ ಮಿತ್ತಲ್, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ನಿರ್ದೇಶಕ ಸಂದೀಪ್ ಪ್ರಧಾನ್, ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಶನ್‌ನ ಕಾರ್ಯದರ್ಶಿ ರಾಜೀವ್ ಮೆಹ್ತಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Story first published: Thursday, July 15, 2021, 20:53 [IST]
Other articles published on Jul 15, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+