ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಿದ ಕ್ರೀಡಾ ಸಚಿವಾಲಯ

ನವದೆಹಲಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗಾಗಿ ಕ್ರೀಡಾ ಸಚಿವಾಲಯವು ಕ್ರೀಡಾಪಟುಗಳು, ಕೋಚ್‌ಗಳು, ವಿಶ್ವ ವಿದ್ಯಾನಿಲಯಗಳು ಮತ್ತು ಇತರ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹರು ಸ್ವಯಂ ಅರ್ಜಿ ಸಲ್ಲಿಸಬಹುದು. ಸದ್ಯ ಕೋವಿಡ್-19 ಪಿಡುಗಿನ ಕಾರಣ ಆನ್‌ಲೈನ್‌ನಲ್ಲಿ ಆರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಅರ್ಜಿಗಳನ್ನು ಸಲ್ಲಿಸಲು ಜೂನ್ 21 ಕೊನೇ ದಿನವಾಗಿದೆ. 'ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಈ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ನಾಮಪತ್ರಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಲಾಗುತ್ತದೆ,' ಎಂದು ಕ್ರೀಡಾ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
'ಕಳೆದ ವರ್ಷ ಕೊರೊನಾವೈರಸ್ ಕಾರಣ ಅರ್ಹರಿಂದ ಸ್ವಯಂ ಅರ್ಜಿ ಸ್ವೀಕರಿಸಲಾಗಿತ್ತು. ಈ ವರ್ಷ ಕೂಡ ಸ್ವ ಅರ್ಜಿ ಸಲ್ಲಿಸಲು ಅವಕಾಶವಿದೆ. ಜೊತೆಗೆ ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳೂ ಕ್ರೀಡಾಪಟುಗಳನ್ನು ಶಿಫಾರಸು ಮಾಡಬಹುದಾಗಿದೆ,' ಎಂದು ಸಚಿವಾಲಯ ತಿಳಿಸಿದೆ.
ಕಳೆದ ವರ್ಷ ಒಟ್ಟು 74 ಸಾಧಕರಿಗೆ ಕ್ರೀಡಾಪ್ರಶಸ್ತಿಗಳನ್ನು ನೀಡಲಾಗಿತ್ತು.
Story first published: Thursday, May 20, 2021, 19:48 [IST]
Other articles published on May 20, 2021
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications