ಧ್ಯಾನ್‌ಚಂದ್‌ಗೆ ಭಾರತರತ್ನ: ಪ್ರಧಾನಿಗೆ ಸಚಿವ ಗೋಯೆಲ್ ಮನವಿ
ನವದೆಹಲಿ, ಜೂನ್ 08 : ಭಾರತ ಸರಕಾರ ನೀಡುವ ಪರಮೋಚ್ಚ ನಾಗರಿಕ ಪ್ರಶಸ್ತಿ ಭಾರತರತ್ನವನ್ನು ಹಾಕಿ ದಿಗ್ಗಜ ಧ್ಯಾನ್ ಚಂದ್ ಅವರಿಗೆ ನೀಡುವಂತೆ ಕೋರಿ ಕ್ರೀಡಾ ಸಚಿವಾಲಯ ಪ್ರಧಾನಿ ಕಚೇರಿಗೆ ಪತ್ರ ಬರೆದಿದೆ.
ಕ್ರೀಡಾ ಸಚಿವ ವಿಜಯ್ ಗೋಯೆಲ್ ಅವರು ಈ ವಿಷಯ ತಿಳಿಸಿದ್ದಾರೆ. 'ಧ್ಯಾನ್‌ಚಂದ್ ದೇಶಕ್ಕೆ ನೀಡಿದ ಕಾಣಿಕೆ ಅಪಾರ. ಹೀಗಾಗಿ ಅವರಿಗೆ ಭಾರತರತ್ನ ನೀಡುವಂತೆ ಕೋರಲಾಗಿದೆ' ಎಂದು ಗೋಯೆಲ್ ಹೇಳಿದ್ದಾರೆ. []

ಭಾರತ ಕಂಡ ಅಪ್ರತಿಮ ಹಾಕಿ ಆಟಗಾರರಾದ ಧ್ಯಾನ್‌ಚಂದ್ 1928, 1932 ಮತ್ತು 1936ರ ಒಲಿಂಪಿಕ್ಸ್ ಗಳಲ್ಲಿ ಭಾರತ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಅವರು 1979ರಲ್ಲಿ ಮೃತಪಟ್ಟಿರುವ ಧ್ಯಾನ್‌ಚಂದ್ ಅವರಿಗೆ ಭಾರತರತ್ನ ನೀಡುವಂತೆ ಈ ಹಿಂದೆಯೂ ಕ್ರೀಡಾ ಸಚಿವಾಲಯ ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದಿತ್ತು.
2013ರಲ್ಲಿ ಧ್ಯಾನ್ ಚಂದ್ ಅವರಿಗೆ ಭಾರತರತ್ನ ನೀಡಲು ಯುಪಿಎ ಸರ್ಕಾರ ನಿರ್ಧರಿಸಿತ್ತು. ಆದರೆ, ಏಕಾಏಕಿ ನಿರ್ಣಯ ಬದಲಿಸಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ನೀಡಲಾಗಿತ್ತು.
Story first published: Wednesday, January 3, 2018, 10:16 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications