Paris Olympics 2024 Table Tennis: ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ ಶ್ರೀಜಾ ಅಕುಲಾ
ಜುಲೈ 31 ಬುಧವಾರ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಟೇಬಲ್ ಟೆನಿಸ್ ತಾರೆ ಶ್ರೀಜಾ ಅಕುಲಾ ಅವರು ಸಿಂಗಾಪುರದ ಝೆಂಗ್ ಜಿಯಾನ್ ವಿರುದ್ಧ 4-2 ಅಂತರದ ಭರ್ಜರಿ ಜಯ ದಾಖಲಿಸಿದ್ದಾರೆ. ಈ ಮೂಲಕ ಶ್ರೀಜಾ ಅಕುಲಾ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಅಲ್ಲದೆ, ಈ ಗೆಲುವಿನೊಂದಿಗೆ ಅಕುಲಾ ತಮ್ಮ ದೇಶದ ಆಟಗಾರ್ತಿಯ ಸಾಧನೆಯನ್ನು ಸರಿಗಟ್ಟಿದ್ದಾರೆ. ಮಣಿಕಾ ಬಾತ್ರಾ ಟೇಬಲ್ ಟೆನಿಸ್‌ನ ಪ್ರಿ-ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದರು. ಈಗ ಶ್ರೀಜಾ ಅಕುಲಾ ಅವರು ಟೇಬಲ್ ಟೆನ್ನಿಸ್‌ನ ಪ್ರಿ-ಕಾರ್ಟರ್ ಫೈನಲ್‌ಗೆ ಪ್ರವೇಶಿಸಿದ ಭಾರತದ ಎರಡನೇ ಮಹಿಳಾ ಆಟಗಾರ್ತಿಯಾಗಿದ್ದಾರೆ.

ಮೊದಲ ಸೆಟ್ ಗೆದ್ದ ಜಿಯಾನ್, ನಂತರ ಎರಡನೇ (12-10), ಮೂರನೇ (11-4) ಮತ್ತು ನಾಲ್ಕನೇ ಸೆಟ್ (11-5) ಗೆದ್ದುಕೊಂಡರು. ಐದನೇ ಸೆಟ್ ನಲ್ಲಿ ಮತ್ತೊಮ್ಮೆ ಪ್ರತಿದಾಳಿ ನಡೆಸಿದ ಜಿಯಾನ್ 10-12ರಿಂದ ಸೆಟ್ ಗೆದ್ದುಕೊಂಡರು.
ಇದಾದ ಬಳಿಕ ಅಕುಲಾ ಆರನೇ ಸೆಟ್‌ನಲ್ಲಿ 12-10 ಅಂತರದಲ್ಲಿ ಗೆದ್ದು, 4-2 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಬಲ ಪುನರಾಗಮನ ಮಾಡಿದರು. ಇದರೊಂದಿಗೆ ಅವರು 32 ರ ಸುತ್ತಿನಲ್ಲಿ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಪ್ರಿ-ಕಾರ್ಟರ್ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಈ ಪಂದ್ಯದಲ್ಲಿ ಶ್ರೀಜಾ ಅಕುಲಾ ಅವರು ತಮ್ಮ ಎದುರಾಳಿ ಝೆಂಗ್ ಜಿಯಾನ್ ಅವರಿಂದಲೂ ಕಠಿಣ ಸವಾಲು ಎದುರಿಸಿದರು. ಮೊದಲ ಸೆಟ್‌ನಲ್ಲಿ ಸಾಕಷ್ಟು ಹಿಂದುಳಿದಿದ್ದರು. ಆದರೆ ಶ್ರೀಜಾ ಪುನರಾಗಮನ ಮಾಡಿದರು. ಇದಾದ ನಂತರವೂ ಅವರು ಮೊದಲ ಸೆಟ್ ಅನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ನಂತರ ಜೆಂಗ್ ಜಿಯಾನ್ ಅವರನ್ನು ಸೋಲಿಸಿದರು. ಈಗ ಪ್ರೀ ಕಾರ್ಟರ್ ಫೈನಲ್‌ನಲ್ಲಿ ತನ್ನ ಅತ್ಯುತ್ತಮ ಆಟ ಪ್ರದರ್ಶಿಸಲು ಸಜ್ಜಾಗಿದ್ದ, ವಿಶ್ವ ನಂ. 1 ಸನ್ ಯಿಂಗ್ಶಾ ವಿರುದ್ಧ ಸೆಣಸಾಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications