For Quick Alerts
ALLOW NOTIFICATIONS  
For Daily Alerts

Wanindu Hasaranga Marriage : ಬಹುಕಾಲದ ಗೆಳತಿ ಜೊತೆ ವನಿಂದು ಹಸರಂಗ ಮದುವೆ: ಶುಭಾಶಯ ತಿಳಿಸಿದ ಆರ್​​ಸಿಬಿ

Sri Lankan Cricketer And Star All-Rounder Wanindu Hasaranga Married, RCB Congratulates Him

ಶ್ರೀಲಂಕಾದ ಸ್ಟಾರ್ ಆಲ್‌ರೌಂಡರ್ ವನಿಂದು ಹಸರಂಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್ 9ರಂದು ಅವರು ತಮ್ಮ ಬಹುಕಾಲದ ಗೆಳತಿ ವಿಂದ್ಯಾ ಅವರ ಜೊತೆ ಮದುವೆಯಾಗಿದ್ದಾರೆ. ತಮ್ಮ ಮದುವೆ ಫೋಟೊವನ್ನು ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವನಿಂದು ಹಸರಂಗ ಮದುವೆಯಾಗಿರುವ ವಿಂದ್ಯಾ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮದುವೆಯ ವಿಚಾರವನ್ನು ಸ್ವತಃ ವನಿಂದು ಹಸರಂಗ ಅವರೇ ಬಹಿರಂಗಪಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಗೆ ಹಸರಂಗ ಆಯ್ಕೆಯಾಗಿಲ್ಲ. ಅವರು ಹೆಚ್ಚಿನ ಟೆಸ್ಟ್‌ ಪಂದ್ಯಗಳನ್ನು ಆಡುವುದಿಲ್ಲ.

ವನಿಂದು ಹಸರಂಗ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಶುಭಾಶಯಗಳನ್ನು ಕೋರಿದೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಟೊವನ್ನು ಹಂಚಿಕೊಂಡಿರುವ ಆರ್​​ಸಿಬಿ ಬದುಕಿನ ಎರಡನೇ ಇನ್ನಿಂಗ್ಸ್‌ಗೆ ಶುಭಾಶಯಗಳು ಎಂದು ಪೋಸ್ಟ್ ಮಾಡಿದೆ.

ಟಿ20 ಕ್ರಿಕೆಟ್‌ನಲ್ಲಿ ಸದ್ಯ ವಿಶ್ವದ ನಂಬರ್ 1 ಬೌಲರ್ ಆಗಿರುವ ವನಿಂದು ಹಸರಂಗ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್​​ಸಿಬಿ ಪರವಾಗಿ ಕಣಕ್ಕಿಳಿಯುತ್ತಾರೆ. 2021ರ ಮೆಗಾ ಹರಾಜಿನಲ್ಲಿ ಆರ್​​ಸಿಬಿ ಫ್ರಾಂಚೈಸಿ ಹಸರಂಗ ಅವರಿಗೆ 10.30 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತ್ತು. 2023ರ ಐಪಿಎಲ್‌ಗಾಗಿ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ.

Sri Lankan Cricketer And Star All-Rounder Wanindu Hasaranga Married, RCB Congratulates Him

ಉತ್ತಮ ಫಾರ್ಮ್‌ನಲ್ಲಿರುವ ಹಸರಂಗ

ವನಿಂದು ಹಸರಂಗ ಟಿ20 ಕ್ರಿಕೆಟ್‌ನಲ್ಲಿ ಶ್ರೀಲಂಕಾ ತಂಡದ ಪ್ರಮುಖ ಬೌಲರ್ ಆಗಿದ್ದಾರೆ. 2021ರಲ್ಲಿ ಭಾರತದ ವಿರುದ್ಧ ಸರಣಿ ಗೆಲ್ಲುವಲ್ಲಿ ವನಿಂದು ಹಸರಂಗ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅಲ್ಲದೆ ಹಲವು ಪಂದ್ಯಗಳಲ್ಲಿ ಶ್ರೀಲಂಕಾ ಗೆಲುವಿನಲ್ಲಿ ಹಸರಂಗ ಕೊಡುಗೆ ಮುಖ್ಯವಾದುದಾಗಿದೆ.

55 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಅವರು, 53 ಇನ್ನಿಂಗ್ಸ್‌ಗಳಿಂದ 15.11 ಸರಾಸರಿ ಮತ್ತು 6.8 ಎಕಾನಮಿಯಲ್ಲಿ 89 ವಿಕೆಟ್ ಪಡೆದುಕೊಂಡಿದ್ದಾರೆ. 18 ಐಪಿಎಲ್ ಪಂದ್ಯಗಳನ್ನಾಡಿರುವ ಅವರು 18.85 ಸರಾಸರಿಯಲ್ಲಿ 26 ವಿಕೆಟ್ ಪಡೆದಿದ್ದಾರೆ.

ಈ ಬಾರಿ ಐಪಿಎಲ್‌ ಸಾಂಪ್ರದಾಯಿಕ ಶೈಲಿಗೆ ಮರಳಿರುವುದರಿಂದ ಆರ್ ಸಿಬಿ ತಂಡ ಚಿನ್ನಸ್ವಾಮಿ ಅಂಗಳದಲ್ಲಿ ಪಂದ್ಯಗಳನ್ನಾಡಲಿದ್ದು, ವನಿಂದು ಹಸರಂಗ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. 2022ರ ಏಷ್ಯಾಕಪ್‌ನಲ್ಲಿ ಕೂಡ ವನಿಂದು ಹಸರಂಗ ಅತ್ಯುತ್ತಮ ಬೌಲಿಂಗ್ ಮಾಡಿದ್ದರು. 6 ಪಂದ್ಯಗಳಿಂದ 9 ವಿಕೆಟ್ ಪಡೆಯುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರು.

Story first published: Thursday, March 9, 2023, 13:46 [IST]
Other articles published on Mar 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+