Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನೆಟ್ಟಕಲ್ಲಪ್ಪ ಈಜು ಸ್ಪರ್ಧೆ: ಶ್ರೀಹರಿ ನಟರಾಜ್ ಮಿಂಚು

ಸ್ಟಾರ್ ಈಜು ಪಟು ಶ್ರೀಹರಿ ನಟರಾಜ್ ಅವರು ಬೆಂಗಳೂರಿನ ಪದ್ಮನಾಭನಗರದ ನೆಟ್ಟಕಲ್ಲಪ್ಪ ಅಕ್ವಾಟಿಕ್‌ ಕೇಂದ್ರದಲ್ಲಿ ನಡೆದ ನೆಟ್ಟಕಲ್ಲಪ್ಪ ಈಜು ಸ್ಪರ್ಧೆಯ 50 ಮೀಟರ್ ಬ್ಯಾಕ್‌ಸ್ಟ್ರೋಕ್‌ ಹಾಗೂ 100 ಮೀಟರ್ ಮೆಡ್ಲಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಶನಿವಾರದಿಂದ ಆರಂಭವಾದ ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್ ಯುವಕರ 18 ವರ್ಷದ ಮೇಲ್ಪಟ್ಟ ಸ್ಪರ್ಧೆಯಲ್ಲಿ ನಿಗದಿತ ದೂರವನ್ನು 26.26 ಸೆ. ಕ್ರಮಿಸಿ ಪ್ರಥಮ ಸ್ಥಾನ ಪಡೆದರು. ಇನ್ನು ಆಕಾಶ್ ಮಾನಿ 26.28 ಸೆ. ದ್ವಿತೀಯ ಸ್ಥಾನ, ಸ್ವರೂಪ್‌ ಡಿ 26.89 ಸೆ. ಕ್ರಮಿಸಿ ಮೂರನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಇನ್ನು ಶ್ರೀಹರಿ ನಟರಾಜ್‌ 100 ಮೀಟರ್‌ ಮೆಡ್ಲಿ ಸ್ಪರ್ಧೆಯಲ್ಲಿ ಮೊದಲ, ವಿದಿತ್ ಎಸ್‌.ಶಂಕರ್ ದ್ವಿತೀಯ, ಸೂರ್ಯ ಜೆ. ತೃತೀಯ ಸ್ಥಾನವನ್ನು ಪಡೆದರು. 15 ವರ್ಷದ ಮೇಲಿನ ಪುರುಷರ ಬಟರ್‌ಫ್ಲೈ ವಿಭಾಗದಲ್ಲೂ ಶ್ರೀಹರಿ ನಟರಾಜ ಮಿಂಚಿನ ಪ್ರದರ್ಶನ ನೀಡಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು. ಈ ವಿಭಾಗದಲ್ಲಿ ಚಿಂತನ್ ಎಸ್ ಶೆಟ್ಟಿ (2), ಪ್ರಥಮ್ ಶರ್ಮಾ (3) ಸಹ ಪದಕಕ್ಕೆ ಕೊರಳೊಡ್ಡಿದರು.

Srihari Nataraj Shines with Multiple Golds at Nettakallappa Swimming Competition

15 ವರ್ಷದ ಮೇಲಿನ ಬಾಲಕಿಯರ 50 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ನಿನಾ ವೆಂಕಟೇಶ್‌ ಪ್ರಥಮ, ವಿಹಿತಾ ನಯನಾ ದ್ವಿತಿಯ, ರುಜುತಾ ಆರ್‌ ತೃತೀಯ ಸ್ಥಾನವನ್ನು ಪಡೆದರು. 18 ವರ್ಷದ 100 ಮೀಟರ್‌ ಮೆಡ್ಲಿಯಲ್ಲಿ ನೀನಾ ವೆಂಕಟೇಶ್‌ (1), ಶೃಂಗಿ ರಾಜೇಶ್‌ (2), ಲಕ್ಷ್ಯ ಶಿವಾನಂದ್ (3) ಸ್ಥಾನ ಪಡೆದರು. ಇನ್ನು ಬಾಲಕರ 11 ರಿಂದ 12 ವರ್ಷದೊಳಗಿನ 100 ಮೀಟರ್ ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ರಕ್ಷಿತ್‌ ಎ ಕೊರೆ (1), ಲೋಹಿತಾಶ್ವ್ ಎಸ್ ನಾಗೇಶ್ (2), ಮಯಾಂಕ್‌ ಲಲಿತ್ (3) ಪದಕ ತಮ್ಮದಾಗಿಸಿಕೊಂಡರು. ಬಾಲಕಿಯರ 11 ರಿಂದ 12 ವರ್ಷದೊಳಗಿನ 100 ಮೀಟರ್ ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಶ್ರೇಯಾ ಸುರೇಶ್‌ ಪೂಜಾರ್‌ (1), ಜರನಾ ಸಿಸೋಡಿಯಾ (2), ಸ್ತುತಿ ಸಿಂಗ್ (3) ಕೊರಳಿಗೆ ಪದಕ ಸೇರಿತು.

13 ರಿಂದ 14 ವರ್ಷದ ಬಾಲಕಿಯರ ಬ್ಯಾಕ್‌ಸ್ಟ್ರೋಕ್‌ನಲ್ಲಿ ತ್ರಿಶಾ ಎಸ್‌ ಸಿಂಧು (1), ಸುಮೇಧಾ ವಿ (2), ಅವನಿ ಬಿ, (3) ಪೋಡಿಯಮ್ ಏರಿದರು. 13 ರಿಂದ 14 ವರ್ಷದ ಬಾಲಕರ ಬ್ಯಾಕ್‌ಸ್ಟ್ರೋಕ್‌ನಲ್ಲಿ ಅದ್ವೈತ್‌ ವಿ.ಎಂ (1), ವಿಹಾನ್‌ ಎಸ್‌.ಸಿ (2), ಗರಪತಿ ಭರದ್ವಾಜ್ (3) ಪದಕ ಪಡೆದರು. 15 ರಿಂ 17 ವರ್ಷದೊಳಗಿನ ಮಹಿಳೆಯರ ವಿಭಾಗ 100 ಮೀಟರ್ ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ನೈಶಾ (1), ಪ್ರಿಯಾಂಶಿ ಮಿಶ್ರಾ (2), ವಿಹಿತಾ ನಯನಾ (3), ಪದಕದ ಸಾಧನೆ ಮಾಡಿದರು. 15 ರಿಂ 17 ವರ್ಷದೊಳಗಿನ ಮಹಿಳೆಯರ ವಿಭಾಗ 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಸಮರ್ಥ್ ಗೌಡ (1), ಅಮನ್ ಅಭಿಜಿತ್ ಸುಣಗಾರ (2), ಕುಶಾಲ್‌ ಕೆ (3) ಸ್ಪರ್ಧೆ ಪದಕ ತಮ್ಮದಾಗಿಸಿಕೊಂಡರು.

Story first published: Saturday, November 8, 2025, 23:10 [IST]
Other articles published on Nov 8, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+