Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಟಾರ್ಕ್ ಬೌಲಿಂಗ್, ಫಿಂಚ್ ಬ್ಯಾಟಿಂಗ್ ಗೆ ಶರಣಾದ ಭಾರತ

ಮೆಲ್ಬೋರ್ನ್, ಜ, 18: ತ್ರಿಕೋನ ಸರಣಿಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 4 ವಿಕೆಟ್ ಗಳ ಜಯ ದಾಖಲಿಸಿದೆ. ಭಾರತ ನೀಡಿದ್ದ 268 ರನ್ ಗಳ ಗುರಿಯನ್ನು ಇನ್ನು ಒಂದು ಓವರ್ ಬಾಕಿ ಇರುವಂತೆ ಮುಟ್ಟಿದೆ.

96 ರನ್ ಗಳಿಸಿದ ಫಿಂಚ್ , 6 ವಿಕೆಟ್ ಗಳಿಸಿದ ಸ್ಟಾರ್ಕ್ ಆಸ್ಟ್ರೇಲಿಯಾ ಪರ ಹೀರೋ ಆಗಿ ಮಿಂಚಿದರು, ವ್ಯಾಟ್ಸನ್ ಮತ್ತು ನಾಯಕ ಸ್ಮಿತ್ ಅರ್ಧ ಶತಕದ ಸಮೀಪ ಎಡವಿದರೂ ತಂಡಕ್ಕೆ ಜಯ ತಂದುಕೊಡುವಲ್ಲಿ ನೆರವಾದರು.[ಆಸ್ಟ್ರೇಲಿಯಾಕ್ಕೆ 268 ರನ್ ಗುರಿ ನೀಡಿದ ಧೋನಿ ಪಡೆ]

rohit

ಕೊನೆಯ ಹಂತದ ವರೆಗೂ ಕುತೂಹಲ ಕಾಯ್ದುಕೊಂಡಿದ್ದ ಪಂದ್ಯದಲ್ಲಿ ಬಾಲ್ ಟು ಬಾಲ್ ರನ್ ಬೇಕಿತ್ತು. ಕೊನೆಯ ಎರಡು ಓವರ್ ಗಳಲ್ಲಿ ಆಸೀಸ್ ಗೆ 15 ರನ್ ಗಳ ಅಗತ್ಯವಿತ್ತು. ಆದರೆ 49 ನೇ ಓವರ್ ಎಸೆಯಲು ಬಂದ ಭುವನೇಶ್ವರ್ ಕುಮಾರ್ ಅಷ್ಟೂ ರನ್ ಬಿಟ್ಟುಕೊಟ್ಟರು. ಭಾರತದ ಯಾವ ಬೌಲರ್ ಗಳು ಆಸೀಸ್ ಆಟಗಾರರನ್ನು ತಡೆಯುವಲ್ಲಿ ಸಫಲರಾಗಲಿಲ್ಲ. ಎರಡು ವಿಕೆಟ್ ಪಡೆದ ಉಮೇಶ್ ಯಾದವ್ ಯಶಸ್ವಿ ಬೌಲರ್ ಎನಿಸಿದರು.[ತ್ರಿಕೋನ ಸರಣಿ: ರೋಹಿತ್ ಶರ್ಮಾ ಭರ್ಜರಿ ಶತಕ]

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 268 ರನ್ ಗಳ ಕಲೆಹಾಕಿತ್ತು. ಆರಂಭಿಕ ರೋಹಿತ್ ಶರ್ಮಾ ಶತಕ, ಸುರೇಶ್ ರೈನಾ ಅರ್ಧಶತಕದ ಗೌರವಾರ್ಹ ಮೊತ್ತ ಕಲೆಹಾಕಲು ಕಾರಣವಾಗಿತ್ತು.

ಸುರೇಶ್ ರೈನಾ(51) ಬಿಟ್ಟರೆ ಭಾರತದ ಮಧ್ಯಮ ಕ್ರಮಾಂಕದ ಯಾವ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಧವನ್ (2), ರಹಾನೆ )12), ಕೊಹ್ಲಿ (9) ಮತ್ತು ನಾಯಕ ಎಂಸ್ ಧೋನಿ ಕೇವಲ (19) ರನ್ ಗಳಿಸಿ ಪೆವಿಲಿಯನ್ ಗೆ ಸೇರಿಕೊಂಡಿದ್ದರು.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+