ಮಿಲ್ಖಾ ಸಿಂಗ್ ನಿಧನಕ್ಕೆ ಅಥ್ಲೀಟ್‌ಗಳು, ನಟರು, ರಾಜಕಾರಣಿಗಳು ಸಂತಾಪ

ನವದೆಹಲಿ: ಭಾರತದ ಖ್ಯಾತ ಅಥ್ಲೀಟ್, ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದ ಮಿಲ್ಖಾ ಸಿಂಗ್ ನಿಧನರಾಗಿದ್ದಾರೆ. ಕೋವಿಡ್-19 ಸೋಂಕಿಗೀಡಾಗಿದ್ದ ಮಿಲ್ಖಾ ಶುಕ್ರವಾರ (ಜೂನ್ 18) ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಸಿಂಗ್ ಸಾವಿಗೆ ಸ್ಟಾರ್ ನಟರು, ಅಥ್ಲೀಟ್‌ಗಳು, ಕ್ರೀಡಾಪಟುಗಳು, ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.
91 ವರ್ಷ ವಯಸ್ಸಾಗಿದ್ದ ಮಿಲ್ಖಾ ಸಿಂಗ್ ಕಳೆದ ತಿಂಗಳು ಕೋವಿಡ್-19 ಸೋಂಕಿಗೆ ತುತ್ತಾಗಿದ್ದರು. ಅವರನ್ನು ಚಂಡೀಗಢದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶುಕ್ರವಾರದ ವೇಳೆ ಮಿಲ್ಖಾ ದೇಹದಲ್ಲಿನ ಆಮ್ಲಜನಕದ ಪ್ರಮಾಣ ತೀವ್ರ ಕುಸಿದಿತ್ತು. ತಡರಾತ್ರಿ ವೇಳೆ ಸಿಂಗ್ ಸಾವನ್ನಪ್ಪಿದ್ದಾರೆ.
ಮಿಲ್ಖಾ ನಿಧನಕ್ಕೆ ಭಾರತದ ಸ್ಟಾರ್‌ಗಳು ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ, ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಸನ್ನಿ ಡಿಯೋಲ್, ಕ್ರಿಕೆಟಿಗರಾದ ಸುರೇಶ್ ರೈನಾ, ಸಚಿನ್ ತೆಂಡೂಲ್ಕರ್, ರಾಜಕಾರಣಿಗಳಾದ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಶಶಿ ತರೂರ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ 4 ಬಾರಿ ಚಿನ್ನದ ಪದಕ ಗೆದ್ದಿದ್ದ ಮಿಲ್ಖಾ ಅವರ ಪತ್ನಿ ನಿರ್ಮಲ್ ಕೌರ್ ಕೂಡ ಕೋವಿಡ್‌ನಿಂದಾಗಿ ಇದೇ ತಿಂಗಳು ಸಾವನ್ನಪ್ಪಿದ್ದರು. ಸಿಂಗ್ ಜೀವನಾಧರಿಸಿ ಬಾಲಿವುಡ್‌ನಲ್ಲಿ 'ಭಾಗ್ ಮಿಲ್ಖಾ ಭಾಗ್' ಚಿತ್ರ ಭರ್ಜರಿ ಯಶಸ್ವಿ ಕಂಡಿತ್ತು. ಫರ್ಹಾನ್ ಅಖ್ತರ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications