ಮೈಸೂರಿನಲ್ಲಿ ರಾಜ್ಯಮಟ್ಟದ ಫುಟ್ಬಾಲ್, ನಗರ ಮಟ್ಟದ ಕಬಡ್ಡಿ ಪಂದ್ಯಾವಳಿ

ಮೈಸೂರು, ಜನವರಿ 24 : ಬಿ.ಆರ್.ಅಂಬೇಡ್ಕರ್ ಫುಟ್‌ಬಾಲ್ ಕ್ಲಬ್ ವತಿಯಿಂದ ಅಂಬೇಡ್ಕರ್ ಅವರ 128ನೇ ಜಯಂತಿ ಅಂಗವಾಗಿ ಜನವರಿ 25ರಿಂದ 27ರವರೆಗೆ ರಾಜ್ಯಮಟ್ಟದ 5's ಫುಟ್‌ಬಾಲ್ ಟೂರ್ನಿ ಆಯೋಜಿಸಲಾಗಿದೆ ಎಂದು ಕ್ಲಬ್‌ನ ಗೌರವಾಧ್ಯಕ್ಷ ದಕ್ಷಿಣಾಮೂರ್ತಿ ತಿಳಿಸಿದರು (ಸಾಂದರ್ಭಿಕ ಚಿತ್ರ).
ಮೈಸೂರಿನಲ್ಲಿ ಕಬ್ಬಡ್ಡಿ ಆಡುವ ವೇಳೆ ಯುವಕ ಸಾವು
ಜನವರಿ 25ರಂದು ಬೆಳಿಗ್ಗೆ 10ಕ್ಕೆ ಗಾಂಧಿನಗರದ ಸಿದ್ಧಾರ್ಥ ಪ್ರೌಢಶಾಲೆ ಮೈದಾನದಲ್ಲಿ ಟೂರ್ನಿ ನಡೆಯಲಿದ್ದು, ಡಿಸಿಪಿ ಎನ್.ವಿಷ್ಣುವರ್ಧನ್ ಚಾಲನೆ ನೀಡುವರು. ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕೃಷ್ಣಯ್ಯ, ಪಾಲಿಕೆ ಸದಸ್ಯರಾದ ಅಶ್ವಿನಿ ಶರತ್, ಉದ್ಯಮಿ ಮಹಮದ್ ಭಾಗವಹಿಸುವರು.
ಮೈಸೂರು ಹಾಸನ, ಹುಬ್ಬಳ್ಳಿ, ಶಿವಮೊಗ್ಗ, ಚಾಮರಾಜನಗರ, ಬೆಂಗಳೂರಿನಿಂದ ಸುಮಾರು 36 ತಂಡಗಳು ಭಾಗವಹಿಸಲಿವೆ. ವಿಜೇತರಿಗೆ ಪ್ರಥಮ 30 ಸಾವಿರ, ದ್ವೀತಿಯ 20 ಸಾವಿರ ಹಾಗೂ ವೈಯುಕ್ತಿಕ ಆಕರ್ಷಕ ಪ್ರಶಸ್ತಿ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ದಕ್ಷಿಣಾಮೂರ್ತಿ ತಿಳಿಸಿದರು.
ಕಬಡ್ಡಿ ಆಟಗಾರ್ತಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ
ಜ.27ರಂದು ಸಮಾರೋಪ ನಡೆಯಲಿದ್ದು, ಶಾಸಕ ತನ್ವೀರ್ ಸೇಠ್, ಜ್ಞಾನಪ್ರಕಾಶ ಸ್ವಾಮೀಜಿ, ಸಂಸದ ಆರ್. ಧ್ರುವನಾರಾಯಣ ಭಾಗವಹಿಸುವರು. ಶಾಸಕ ಎಸ್.ಎ.ರಾಮದಾಸ್ ಬಹುಮಾನ ವಿತರಿಸುವರು ಎಂದರು.
ನಾಡಿದ್ದು ಕಬ್ಬಡಿ ಟೂರ್ನಿ ಆಯೋಜನೆ
ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ 40ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಜ.26, 27ರಂದು ಮೈಸೂರಿನಲ್ಲಿ ನಗರಮಟ್ಟದ ಪ್ರೊ ಕಬಡ್ಡಿ ಟೂರ್ನಿ ಏರ್ಪಡಿಸಲಾಗಿದೆ ಎಂದು ಕಾಲೇಜು ಪ್ರಾಂಶುಪಾಲ ಡಾ.ಎಸ್.ಮರಿಗೌಡ ತಿಳಿಸಿದರು.
ಅಂದು ಬೆಳಿಗ್ಗೆ 10.30ಕ್ಕೆ ಕಾಲೇಜು ಆವರಣದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡುವರು. ಸದಸ್ಯ ಮರಿತಿಬ್ಬೇಗೌಡ, ಜಿ.ಪಂ ಸದಸ್ಯ ದಿನೇಶ್, ಮೈಸೂರು ವಿ.ವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಸಿ. ವೆಂಕಟೇಶ್ ಭಾಗವಹಿಸಲಿದ್ದು, ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಟೂರ್ನಿಯಲ್ಲಿ ಎಸ್‌ಎಲ್‌ಡಿ ಬುಲ್ಸ್, ಮೈಸೂರು ವ್ಯಾಲಿಟರ್ಸ್, ಮೈಸೂರು ವಿಜಾರ್ಡ್ಸ್, ನಾಲ್ವಡಿ ಗ್ಲ್ಯಾಡಿಯೇಟರ್ಸ್, ಮೈಸೂರು ರಾಯಲ್ಸ್ ತಂಡಗಳು ಪಾಲ್ಗೊಳ್ಳಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications