Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಿನ್ನಿ ಆಯ್ಕೆ: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ

ಬೆಂಗಳೂರು, ಜ.6: ಐಸಿಸಿ ವಿಶ್ವಕಪ್ ಗೆ ಬಿಸಿಸಿಐ ಆಯ್ಕೆ ಮಾಡಿರುವ 15 ಜನ ತಂಡದಲ್ಲಿ ಕರ್ನಾಟಕದ ಸ್ಟುವರ್ಟ್ ಬಿನ್ನಿಗೂ ಸ್ಥಾನ ಸಿಕ್ಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿನ್ನಿ ಆಯ್ಕೆಗೆ ಆಕ್ರೋಶ ವ್ಯಕ್ತವಾಗಿದೆ.

ಬಿನ್ನಿ ಪತ್ನಿ, ಕ್ರಿಕೆಟ್ ವೀಕ್ಷಕ ವಿವರಣೆಗಾರ್ತಿ ಮಯಂತಿ ಅವರ ಚಿತ್ರಗಳನ್ನು ಬಳಸಿ ಟ್ವೀಟ್ ಮಾಡಲಾಗಿದೆ. ಯುವರಾಜ್ ಸಿಂಗ್ ಆಕ್ರೋಶಗೊಂಡ ಫೋಟೋ, ವಿನೋದ್ ಕಾಂಬ್ಳಿ ಅಳುತ್ತಿರುವ ಚಿತ್ರದ ಜತೆಗೆ ಸೆಹ್ವಾಗ್, ಗಂಭೀರ್ ನಗುತ್ತಿರುವ ಫೋಟೋ ಹಾಕಿ ಇದು ಬಿನ್ನಿ ಆಯ್ಕೆಗೆ ಹಿರಿಯ ಆಟಗಾರರ ಪ್ರತಿಕ್ರಿಯೆ ಎಂದು ಹೇಳಿದ್ದಾರೆ.[ರಾಹುಲ್ ದ್ರಾವಿಡ್ ಕನಸಿನ ತಂಡ ವಿಶ್ವಕಪ್ ಗೆಲ್ಲುವುದೇ?]

cricket

ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ನಾಗರಿಕರು ಬಿಸಿಸಿಐ ಮೇಲೆ ಹರಿಹಾಯ್ದಿದ್ದಾರೆ. ಬಿನ್ನಿಯ ಕೊನೆಯ ಹತ್ತು ಪಂದ್ಯಗಳ ದಾಖಲೆ ಇಟ್ಟು ವಿಶ್ವಕಪ್ ಆಡಲು ಯೋಗ್ಯನೇ? ಎಂದು ಪ್ರಶ್ನಿಸಿದ್ದಾರೆ. ಹಾಸ್ಯ, ವಿಡಂಬನೆ ಮತ್ತು ಟೀಕೆಗಳ ಮಿಶ್ರಿತ ಕೆಲವು ಟ್ವೀಟ್ ಗಳನ್ನು ಇಲ್ಲಿ ಕಲೆಹಾಕಿದ್ದೇವೆ. ಓದಿ ಏಂಜಾಯ್ ಮಾಡಿ[ವಿಶ್ವಕಪ್ ಗೆ 15 ಸದಸ್ಯರ ತಂಡ ಪ್ರಕಟ, ಸ್ಟುವರ್ಟ್ ಬಿನ್ನಿಗೆ ಸ್ಥಾನ]

* ಪೆರೆಂಟ್ಸ್ ಕೋಟಾದ ಅಡಿ ಬಿನ್ನಿ ಆಯ್ಕೆ ಮಾಡಲಾಗಿದೆ.
* ಸಾಕ್ಷಿ ಸಿಂಗ್ ಮತ್ತು ಅನುಷ್ಕಾ ಶರ್ಮಾರ ಶಾಪಿಂಗ್ ಬ್ಯಾಗ್ ಹಿಡಿದುಕೊಕೊಳ್ಳುವುದು ಬಿನ್ನಿ ಕೆಲಸ!
* ಸ್ಟುವರ್ಟ್ ಬಿನ್ನಿ ಮತ್ತು ರೋಜರ್ ಬಿನ್ನಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇದ್ದಂತೆ



* ಸ್ಟುವರ್ಟ್ ಬಿನ್ನಿ ಆಯ್ಕೆಯನ್ನು ಬಿಸಿಸಿಐ ಹೇಗೆ ಸಮರ್ಥಿಸಿಕೊಳ್ಳುತ್ತದೆ?
* ಸ್ಟುವರ್ಟ್ ಬಿನ್ನಿ ಅದೃಷ್ಟವಂತ ಬಿಡಿ, ಅಪ್ಪ ಬಿಸಿಸಿಐ ಸೆಲೆಕ್ಟರ್, ಹೆಂಡತಿ ಸುಂದರಿ ಮಯಂತಿ!
* ಬಿನ್ನಿ ಇನ್ನು ಮುಂದಾದರೂ ಕ್ರಿಕೆಟ್ ಕಲಿಯಬಹುದು!

* 2015ರ ದಿನೇಶ್ ಮೊಂಗಿಯಾ = ಸ್ಟುವರ್ಟ್ ಬಿನ್ನಿ
* ವಿಶ್ವಕಪ್ ತಂಡದಲ್ಲಿ ಸ್ಟುವರ್ಟ್ ಬಿನ್ನಿ ... ನಾನು ಇನ್ನು 5 ದಿನ ಕ್ರಿಕೆಟ್ ಬಗ್ಗೆ ಮಾತನಾಡಲ್ಲ!
* ತಂಡದಲ್ಲಿ ಸ್ಟುವರ್ಟ್ ಬಿನ್ನಿ ಸ್ಥಾನ ಪಡೆಯಲು ಮಯಂತಿಯೇ ಮುಖ್ಯ ಕಾರಣ!
* ಅಂತೂ ವಿಶ್ವಕಪ್ ನಲ್ಲಿ ಅತ್ಯಂತ ಕೆಟ್ಟ ಓವರ್ ಒಂದನ್ನು ಕಾಣಬಹುದು

* ಅಭಿಷೇಕ್ ಬಚ್ಚನ್ ಮತ್ತು ಸ್ಟುವರ್ಟ್ ಬಿನ್ನಿ ನಡುವೆ ಅಂಥ ಗಂಭೀರ ವ್ಯತ್ಯಾಸಗಳೇನಿಲ್ಲ.
* ಸ್ಟುವರ್ಟ್ ಬಿನ್ನಿ ಯಾರು ಎಂದು ಗೂಗಲ್ ಈಗ ಹುಡುಕುತ್ತಿದೆ.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+