ಒಲಿಂಪಿಕ್ಸ್ ಪದಕ ಗೆಲ್ಲುವುದು ನನ್ನೊಳಗಿನ ಕದನ ಗೆದ್ದಂತೆ: ದೀಪಿಕಾ ಕುಮಾರಿ

ಟೋಕಿಯೋ, ಜುಲೈ 28: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಯಶಸ್ಸು ಗಳಿಸಿದರೆ ಅದು ನನ್ನೊಳಗೆ ನಾನೇ ಕದನವನ್ನು ಗೆದ್ದಂತೆ ಎಂದು ಭಾರತದ ಸ್ಟಾರ್ ಆರ್ಚರ್ ದೀಪಿಕಾ ಕುಮಾರಿ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ತನ್ನ ಮೇಲಿನ ಅತಿಯಾದ ನಿರೀಕ್ಷೆಯಿಂದಾಗಿ ತಾನು ನರ್ವಸ್ ಆಗಿರುವುದಾಗಿಯೂ ದೀಪಿಕಾ ಕುಮಾರಿ ಹೇಳಿಕೊಂಡಿದ್ದಾರೆ.
ಗಾಳಿಯಿಂದಾಗಿ ಕಠಿಣ ಪರಿಸ್ಥಿತಿಯಲ್ಲಿ ತೀವ್ರ ಹೋರಾಟದಲ್ಲಿ ಗೆಲುವು ಸಾಧಿಸಿರುವ ದೀಪಿಕಾ ಕುಮಾರಿ ಮತ್ತೊಂದು ಸುತ್ತಿಗೆ ಲಗ್ಗೆಯೊಟ್ಟಿದ್ದಾರೆ. ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಯುಎಸ್‌ಎಯ ಜೆನ್ನಿಫರ್ ಮುಸಿನೊ ಫರ್ನಾಂಡೀಸ್ ವಿರುದ್ಧ ಜಯ ಸಾಧಿಸಿದ್ದಾರೆ. ತೀವ್ರ ಪೈಪೋಟಿಯ ಸೆಣೆಸಾಟದಲ್ಲಿ ದೀಪಿಕಾ ಕುಮಾರಿ 6-4 ಅಂತರದಿಂದ ಗೆದ್ದು ಬೀಗಿದ್ದಾರೆ. ಈ ಗೆಲುವಿನ ಬಳಿಕ ದೀಪಿಕಾ ಕುಮಾರಿ ಪ್ರತಿಕ್ರಿಯಿಸಿದ್ದಾರೆ.
"ಸಹಜವಾಗಿಯೇ ನಾನು ಸರ್ವಸ್ ಆಗಿದ್ದೇನೆ. ಒಲಿಂಪಿಕ್ಸ್‌ನಲ್ಲಿ ಒತ್ತಡ ಅತಿಯಾಗಿರುತ್ತದೆ ಯಾಕೆಂದರೆ ಒಂದು ಪದಕವನ್ನು ಗೆಲ್ಲಬೇಕೆಂದು ನೀವು ಸಾಕಷ್ಟು ವರ್ಷಗಳಿಂದ ಶ್ರಮವಹಿಸಿರುತ್ತೀರಿ. ಇದು ನಿಮ್ಮೊಳಗಿನ ಕದನವಾಗಿರುತ್ತದೆ. ನಾನು ಇಲ್ಲಿ ನನ್ನ ಜೊತೆಗಿನ ಕಾದಾಟವನ್ನು ನಡೆಸುತ್ತಿದ್ದೇನೆ" ಎಂದಿದ್ದಾರೆ ದೀಪಿಕಾ ಕುಮಾರಿ.
ಆದರೆ ಆರ್ಚರಿಯಲ್ಲಿ ಗುರಿಯಿಟ್ಟು ಪ್ರದರ್ಶನ ನೀಡುವ ಸಂದರ್ಭದಲ್ಲಿ ದೇಶದ ಜನರ ಒತ್ತಡ ನಮ್ಮ ಮೇಲಿರುವುದಿಲ್ಲ ಎಂದಿದ್ದಾರೆ. ಆಗ ಇರುವ ಒತ್ತಡ ನಮ್ಮ ಸ್ವಂತದ್ದಾಗಿರುತ್ತದೆ. ಅಂತಾ ಒತ್ತಡವನ್ನು ನಾವು ಆಗಾಗ ಪಡೆಯುತ್ತಲೇ ಇರುತ್ತೇವೆ. ಅದನ್ನು ಜಯಿಸಲು ಯಾವಾಗಲೂ ನಮ್ಮ ಪ್ರಯತ್ನ ನಡೆಯುತ್ತಿರುತ್ತದೆ ಎಂದು ದೀಪಿಕಾ ಕುಮಾರಿ ಹೇಳಿಕೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications