ಕನ್ನಡಿಗ ಸುಹಾಸ್ ಪದಕ ಬೇಟೆಯ ಅಭಿಯಾನ ಶುರು
ಪ್ಯಾರೀಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟಗಳು ಆರಂಭವಾಗಿದ್ದು, ಮೊದಲ ದಿನವಾದ ಗುರುವಾರ ಕನ್ನಡಿಗ ಸುಹಾಸ್ ಯತಿರಾಜ್ ಅಮೋಘ ಪ್ರದರ್ಶನ ಪದಕದ ಅಭಿಯಾನವನ್ನು ಆರಂಭಿಸಿದ್ದಾರೆ.
ಗುರುವಾರ ನಡೆದ ಪುರುಷರ ಸಿಂಗಲ್ಸ್ SL4 ವಿಭಾಗದಲ್ಲಿ ಸುಹಾಸ್ ಯತಿರಾಜ್ ಏಕಪಕ್ಷೀಯ ಗೆಲುವು ಸಾಧಿಸಿದರು. ಸುಹಾಸ್ 21-7, 21-5 ರಿಂದ ಇಂಡೋನೇಷ್ಯಾದ ರಾಮದಾನಿ ಹಿಕ್ಮತ್ ಅವರನ್ನು ಮಣಿಸಿ ಮುನ್ನಡೆ ಸಾಧಿಸಿದರು. ಸುಹಾಸ್ ಎರಡನೇ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಹೊಂದಿದ್ದಾರೆ.

ಟೋಕಿಯೊದಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸುಹಾಸ್ SL4 ವಿಭಾಗದಲ್ಲಿ ಫೈನಲ್‌ಗೆ ಏರಿ ಸೋಲು ಕಂಡಿದ್ದರು. ಪರಿಣಾಮ ಬೆಳ್ಳಿ ಪದಕವನ್ನು ಗೆದ್ದಿದ್ದರು. ಈ ಬಾರಿ ಪದಕದ ಬಣ್ಣವನ್ನು ಬದಲಿಸುವ ಇರಾದೆಯೊಂದಿಗೆ ಸುಹಾಸ್ ಅಂಗಳ ಪ್ರವೇಶಿಸಲಿದ್ದಾರೆ.
ಇನ್ನೊಂದು ಪುರುಷರ ಸಿಂಗಲ್ಸ್ ಇದೇ ವಿಭಾಗದ ಪಂದ್ಯದಲ್ಲಿ ಭಾರತದ ತರುಣ ಸಹ ಎರಡು ನೇರ ಸೆಟ್‌ಗಳಿಂದ ಜಯ ಸಾಧಿಸಿದರು. ಇವರು 21-17, 21-19 ರಿಂದ ಬ್ರೇಜಿಲ್‌ನ ರೊಜೆರಿಯೊ ಜೂನಿಯರ್ ಕ್ಸೇವಿಯರ್ ಡಿ ಒಲಿವೇರಾ ಅವರನ್ನು ಮಣಿಸಿದರು.
SL4 ವಿಭಾಗದಲ್ಲಿ ಭಾರತದ ಸುಕಾಂತ್ ಕದಂ ಅವರು ಸಹ ತಮ್ಮ ಜಯದ ಓಟವನ್ನು ಮುಂದುವರೆಸಿದ್ದಾರೆ. ಸುಕಾಂತ್ 17-21, 21-15, 22-20 ರಿಂದ ಮಲೇಷ್ಯಾದ ಮೊಹಮ್ಮದ್ ಅಮೀನ್ ಅವರನ್ನು ಸೋಲಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications