ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತೀಯ ಅಥ್ಲೀಟ್‌ಗಳ ಅಮೋಘ ಪ್ರದರ್ಶನ ಮುಂದುವರೆದಿದೆ. ಶನಿವಾರವೂ ಭಾರತಕ್ಕೆ ಮತ್ತೊಂದು ಕಂಚಿನ ಪದಕದ ಹಾರವನ್ನು ಶೂಟರ್ ರೂಬಿನ್ ತೊಡಿಸಿದ್ದಾರೆ. ಈಗ ಪ್ಯಾರಿಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಪಕ್ಕಾ ಆಗಿದೆ.
ಈಗಾಗಗಲೇ ಈ ಟೂರ್ನಿಯಲ್ಲಿ ಭಾರತೀಯ ಅಥ್ಲೀಟ್‌ಗಳು ಐದು ಪದಕವನ್ನು ಬಾಚಿಕೊಂಡಿದ್ದಾರೆ. ಇದೇ ವೇಳೆ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಪದಕ ಖಚಿತವಾಗಿದೆ. ಪುರುಷರ ಸಿಂಗಲ್ಸ್ ಎಸ್‌ಎಲ್ 4 ವಿಭಾಗದಲ್ಲಿ ಸುಕಾಂತ್ ಕದಮ್ ಥಾಯ್ಲೆಂಡ್‌ನ ತಿಮರೊಮ್ ಸಿರಿಪೊಂಗ್ ಅವರನ್ನು 21-12, 21-12 ಸೆಟ್‌ಗಳಿಂದ ಸೋಲಿಸಿ ಉಪಾಂತ್ಯವನ್ನು ಪ್ರವೇಶಿಸಿದ್ದಾರೆ. ಇವರು ಬಿ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದರು. ಭಾರತದ ಸುಹಾಸ್ ಯತಿರಾಜ್ ಅವರೊಂದಿಗೆ ಸೆಮಿಫೈನಲ್ ಪ್ರವೇಶಿಸಿದರು.

ಸುಕಾಂತ್ ಮೂರು ಆಟಗಾರರ ಗುಂಪಿನಲ್ಲಿ ಅವರ ಸತತ ಎರಡನೇ ಗೆಲುವು. ಸುಕಾಂತ್ ಕಳೆದ ವರ್ಷ ಚೀನಾದಲ್ಲಿ ನಡೆದಿದ್ದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕಕ್ಕೆ ಕೊರಳು ಒಡ್ಡಿದ್ದರು. ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಸುಕಾಂತ್ ಅಮೋಘ ಪ್ರದರ್ಶನ ನೀಡಿ, ಕ್ವಾರ್ಟರ್ ಫೈನಲ್ ಪಂದ್ಯವನ್ನು ನೇರ ಸೆಟ್‌ಗಳಿಂದ ಗೆದ್ದರು.
ಪ್ರತಿ ಗುಂಪಿನಲ್ಲೂ ಟಾಪ್ ಸ್ಥಾನ ಪಡೆದ ಅಥ್ಲೀಟ್‌ಗಳು ಸೆಮಿಫೈನಲ್ ಹಂತ ಪ್ರವೇಶಿಸುತ್ತಾರೆ. ಎಸ್‌ಎಲ್4 ವಿಭಾಗದಲ್ಲಿ ಟೋಕಿಯೊದಲ್ಲಿ ಬೆಳ್ಳಿ ಸಾಧನೆ ಮಾಡಿರುವ ಅಥ್ಲೀಟ್ ಸುಹಾಸ್ ಯತೀರಾಜ್ ಸಹ ಈ ವಿಭಾಗದಲ್ಲಿ ಉಪಾಂತ್ಯವನ್ನು ತಲುಪಿದ್ದಾರೆ. ಈ ಪಂದ್ಯದ ಬಳಿಕ ಮಾತನಾಡಿರುವ ಸುಕಾಂತ್ ಕದಮ್, ಸೆಮಿಫೈನಲ್‌ಗೆ ಅರ್ಹತೆ ಪಡೆದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇಂದಿನ ಪಂದ್ಯಕ್ಕೆ ನಾನು ಸಾಕಷ್ಟು ತಯಾರಿ ನಡೆಸಿದ್ದೇನೆ ಎಂದಿದ್ದಾರೆ.
ಸುಹಾಸ್ ಯತಿರಾಜ್ ಎ ಗುಂಪಿನಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ಈ ಕಾರಣಕ್ಕಾಗಿ ಅವರು ಸೆಮಿಫೈನಲ್‌ಗೂ ತಲುಪಿದ್ದಾರೆ. ಸುಹಾಸ್ ತಮ್ಮ ಎ ಗುಂಪಿನ ಪಂದ್ಯದಲ್ಲಿ ಇಂಡೋನೇಷ್ಯಾದ ಹಿಕ್ಮತ್ ರಾಮ್ದಿನಿ ಮತ್ತು ಕೊರಿಯಾದ ಕ್ಯುಂಗ್ ಶಿನ್ ಅವರನ್ನು ಸೋಲಿಸುವ ಮೂಲಕ ಸೆಮಿಫೈನಲ್ ತಲುಪಿದರು. ಎರಡೂ ಸೆಮಿಫೈನಲ್‌ಗಳು ಸೆಪ್ಟೆಂಬರ್ 1 ರಂದು ನಡೆಯಲಿವೆ.
ಸೆಮಿಫೈನಲ್‌ನಲ್ಲಿ ಸುಹಾಸ್ ಯತಿರಾಜ್ ಮತ್ತು ಸುಕಾಂತ್ ಕದಮ್ ಮುಖಾಮುಖಿಯಾಗುತ್ತಾರೆಯೇ ಅಥವಾ ಬೇರೆ ಪಂದ್ಯಗಳಲ್ಲಿ ಕಾದಾಟ ನಡೆಸುತ್ತಾರೋ ಎಂಬುದು ಕಾದ ನೋಡಬೇಕಿದೆ. ಒಂದು ವೇಳೆ ಇಬ್ಬರೂ ಆಟಗಾರರು ಪ್ರತ್ಯೇಕವಾಗಿ ಆಡಿ ಸೆಮಿಫೈನಲ್ ಪಂದ್ಯದಲ್ಲಿ ಸೋತರೆ, ನಂತರ ಅವರು ಕಂಚಿನ ಪದಕಕ್ಕಾಗಿ ಪರಸ್ಪರ ಕಾದಾಟ ನಡೆಸಲಿದ್ದಾರೆ. ಆಗಲೂ ಭಾರತಕ್ಕೆ ಒಂದು ಪದಕ ಫಿಕ್ಸ್.
ಭಾರತ ಇದುವರೆಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಐದು ಪದಕಗಳನ್ನು ಬೇಟೆ ನಡೆಸಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್ 1 ರಲ್ಲಿ ಅವನಿ ಲೆಖರಾ ಬಂಗಾರ ಮತ್ತು ಮೋನಾ ಅಗರ್ವಾಲ್ ಕಂಚಿನ ಸಾಧನೆ ಮಾಡಿದ್ದರು. ಇನ್ನು ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್‌ಎಚ್ 1 ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಬೆಳ್ಳಿ, ಪ್ರೀತಿ ಪಾಲ್ 100 ಮೀಟರ್ ಟಿ35 ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದರು. ಶನಿವಾರ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಎಸ್‌ಎಚ್1 ಸ್ಪರ್ಧೆಯ ಫೈನಲ್‌ನಲ್ಲಿ ರುಬಿನಾ ಫ್ರಾನ್ಸಿಸ್ ಕಂಚಿನ ಪದಕ ಗೆದ್ದು ಬೀಗಿದ್ದಾರೆ.