Paralympics: ಪ್ಯಾರಿಸ್‌ನಲ್ಲಿ ಚಿನ್ನದ ಕನಸು ಕಾಣುತ್ತಿರುವ ಭಾರತದ ಜಾವೆಲಿನ್ ಅಥ್ಲೀಟ್
ಬುಧವಾರದಿಂದ ಪ್ಯಾರಿಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾಗವಹಿಸಲು 185 ದೇಶಗಳ 4400ಕ್ಕೂ ಹೆಚ್ಚು ಕ್ರೀಡಾ ಪಟುಗಳು ಸಿದ್ಧರಾಗಿದ್ದಾರೆ. ಭಾರತ ಸಹ ಈ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅಥ್ಲೀಟ್ ಕಳುಹಿಸಿಕೊಟ್ಟಿದೆ. ಭಾರತ ಈ ಕ್ರೀಡಾ ಕೂಟದಲ್ಲಿ ಅಮೋಘ ಸಾಧನೆ ಮಾಡುವ ಕನಸು ಕಾಣುತ್ತಿದೆ.
ಜಪಾನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಪಡೆದ ಪದಕಕ್ಕಿಂತ ಹೆಚ್ಚಿನ ಪದಕವನ್ನು ಗೆಲ್ಲುವ ಗುರಿಯನ್ನು ಭಾರತದ ಅಥ್ಲೀಟ್‌ಗಳು ಹಾಕಿಕೊಂಡಿದ್ದಾರೆ. ಈಗಾಗಲೇ ಭರವಸೆ ಮೂಡಿಸಿರುವ ಅಥ್ಲೀಟ್‌ಗಳು ಪ್ಯಾರಿಸ್‌ನಲ್ಲಿ ಅಭ್ಯಾಸ ನಡೆಸಿದ್ದಾರೆ. ಈ ಕೂಟದಲ್ಲಿ ಎಲ್ಲರ ಚಿತ್ತ ಹಲವು ಕ್ರೀಡಾ ಪಟುಗಳ ಮೇಲೆ ಇರುತ್ತದೆ. ಅದ್ರಲ್ಲೂ ಆ ಒಬ್ಬ ಜಾವೆಲಿನ್ ಥ್ರೋ ಕ್ರೀಡಾ ಪಟು ತನ್ನನ್ನು ಪದೆ ಪದೇ ಅಭಿಮಾನಿಗಳು ನೋಡುವಂತೆ ಮಾಡಿದ್ದಾರೆ.

ಭಾರತದ ಪ್ಯಾರಾ ಅಥ್ಲೀಟ್‌ಗಳು ಪಟ್ಟಿಯಲ್ಲಿ ಎದ್ದು ಕಾಣುವ ಹೆಸರು, ಸುಮಿತ್ ಆಂಟಿಲ್.
ಇವರು ದೇಶವನ್ನು ಪುರುಷರ ಎಫ್64 ವಿಭಾಗದಲ್ಲಿ ಪ್ರತಿನಿಧಿಸಲಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸುಮಿತ್ ಚಿನ್ನದ ಪದಕ ಗೆದ್ದು, ಇತಿಹಾಸ ನಿರ್ಮಿಸಿದ್ದರು. ಪ್ಯಾರಿಸ್‌ನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಸುಮಿತ್ ಅವರಿಗೆ ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದ್ದು, ಇವರು ಭಾರತದ ಧ್ವಜಧಾರಿಯಾಗಿರಲಿದ್ದಾರೆ.
ಟೊಕೊಯೋದಲ್ಲಿ ಅಮೋಘ ಸಾಧನೆ
ಹರಿಯಾಣದ ಸೋನಿಪತ್‌ನ ಖೇವ್ರಾ ಗ್ರಾಮದಲ್ಲಿ ಜೂನ್ 7, 1988ರಂದು ಸುಮಿತ್ ಜನಿಸಿದ್ದಾರೆ. ತಮ್ಮ 17ನೇ ವಯಸ್ಸಿನಲ್ಲೇ ಸುಮಿತ್ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡು ನೋವು ಅನುಭವಿಸಿದ್ದಾರೆ. ಈ ನೋವಿನ ಘಟನೆಯನ್ನು ಮರೆಯಲು ಇವರು ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆರಂಭದಿಂದಲೂ ಜಾವೆಲಿನ್ ಮೇಲೆ ಸುಮಿತ್‌ಗೆ ಪ್ರೀತಿ. ಈಗ ಅವರು ಪ್ಯಾರಾ ಅಥ್ಲೀಟ್ ಆಗಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸುಮಿತ್ ಆಂಟಿಲ್ 69.50 ಮೀಟರ್ ಜಾವೆಲಿನ್ ಎಸೆದು ಸಾಧನೆ ಮಾಡಿದ್ದಾರೆ.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸುಮಿತ್ ಆಂಟಿಲ್ ವಿಶ್ವದಾಖಲೆ ನಿರ್ಮಿಸಿದ್ದರು. ಇವರು 68.55 ಮೀಟರ್ ದೂರ ಕ್ರಮಿಸಿ ಚಿನ್ನಕ್ಕೆ ಕೊರಳು ಒಡ್ಡಿದ್ದರು. ಇದರ ನಂತರ ಅವರು 2023 ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈ ದಾಖಲೆಯನ್ನು ಮುರಿದರು. ನಂತರ 70.83 ಮೀಟರ್ ದೂರ ಎಸೆದು ಚಿನ್ನ ಗೆದ್ದಿದ್ದರು.
F64 ಎಂದರೆ ಏನು?
ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅಥ್ಲೀಟ್ ಕೈ ಹಾಗೂ ಕಾಲಿಗೆ ಪೆಟ್ಟಾಗಿದ್ದು, ಅಸ್ವಸ್ಥತೆಯಿಂದ ಕೂಡಿದಂತ ಕ್ರೀಡಾಪಟುಗಳು ಭಾಗವಹಿಸಬಹುದು. ಒಲಿಂಪಿಕ್ ಸಮಿತಿಯಲ್ಲಿ ಇದಕ್ಕಾಗಿ ವಿವಿಧ ವಿಭಾಗಗಳನ್ನು ಮಾಡಿದೆ. ಅಂದಹಾಗೆ ಎಫ್ 64 ಅಂದರೆ, ಕಾಲಿನ ಕೆಳಭಾಗದಲ್ಲಿ ಸಮಸ್ಯೆ ಇದ್ದು, ಕೃತಕ ಕಾಲಿನ ಸಹಾಯದಿಂದ ಸ್ಪರ್ಧೆಯಲ್ಲಿ ಭಾಗವಹಿಸುವ ಅಥ್ಲೀಟ್..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications