ರಾಹುಲ್- ಅಥಿಯಾ ಮದುವೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸುನಿಲ್ ಶೆಟ್ಟಿ

ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಪ್ರೀತಿಯಲ್ಲಿರುವ ವಿಚಾರ ಹಳೇಯ ಸುದ್ದಿ. ಸದ್ಯಕ್ಕೆ ಈ ಜೋಡಿ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದೆ ಎಂಬ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಇಬ್ಬರ ಕುಟುಂಬದಿಂದಲೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಈ ಮಧ್ಯೆ ಅಥಿಯಾ ಶೆಟ್ಟಿ ತಂದೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ನೀಡಿರುವ ಹೇಳಿಕೆ ಈ ಸುದ್ದಿಯ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಕಳೆದ ಹಲವು ತಿಂಗಳಿನಿಂದ ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಮದುವೆ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇದೆ. ವಿಶ್ವಕಪ್‌ನ ಬಳಿಕ ಈ ಜೋಡಿ ಮದುವೆಯಾಗಲಿದ್ದಾರೆ ಎನ್ನಲಾಗಿತ್ತು. ಸದ್ಯ ಮುಂದಿನ ಜನವರಿ ತಿಂಗಳಿನಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು ಸುನಿಲ್ ಶೆಟ್ಟಿ ಅವರ ಮುಂಬೈನ ನಿವಾಸದಲ್ಲಿ ಜನವರಿಯಲ್ಲಿ ಮದುವೆ ನಡೆಯಲಿದೆ ಎಂದು ವದಂತಿ ಹರಿದಾಡುತ್ತಿದೆ.

ಸುನಿಲ್ ಶೆಟ್ಟಿ ವ್ಯಂಗ್ಯ ಪ್ರತಿಕ್ರಿಯೆ
ಆದರೆ ಈ ಮಧ್ಯೆ ಪುತ್ರಿ ಅಥಿಯಾ ಶೆಟ್ಟಿ ಮದುವೆ ವಿಚಾರವಾಗಿ ಸುನಿಲ್ ಶೆಟ್ಟಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. "ನಿಮಗೆ ಮದುವೆಯ ದಿನಾಂಕ ಖಚಿತವಾಗಿ ತಿಳಿದಾಗ ನನಗೂ ತಿಳಿಸಿ. ನಾನು ಕೂಡ ಮದುವೆಯಲ್ಲಿ ಭಾಗಿಯಾಗಬಹುದು" ಎಂದು ತಮಾಷೆಯಾಗಿ ಸುನಿಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಮದುವೆಯ ದಿನಾಂಕಗಳ ಬಗ್ಗೆ ಹರಿದಾಡುತ್ತಿರುವ ಸುದ್ದಿಯನ್ನು ಬಾಲಿವುಡ್ ಹಿರಿಯ ನಟ ನಿರಾಕರಿಸಿದ್ದಾರೆ.

ಮದುವೆಯ ಬಗ್ಗೆ ಮಾತನಾಡಿದ್ದ ಸುನಿಲ್ ಶೆಟ್ಟಿ
ಗಮನಾರ್ಹ ಸಂಗತಿಯೆಂದರೆ ಸ್ವತಃ ಸುನಿಲ್ ಶೆಟ್ಟಿಯವರು ಕೆಲ ಸಮಯಗಳ ಹಿಂದೆ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುವುದನ್ನು ಖಚಿತಪಡಿಸಿದ್ದರು. ಆಗಸ್ಟ್ ತಿಂಗಳಿನಲ್ಲಿ ಸುನಿಲ್ ಶೆಟ್ಟಿ ಮಾತನಾಡುತ್ತಾ ಕೆಎಲ್ ರಾಹುಲ್ ಅವರ ಬ್ಯುಸಿ ಶೆಡ್ಯೂಲ್ ಬಗ್ಗೆ ಉಲ್ಲೇಖಿಸಿದ್ದರು. ಏಷ್ಯಾಕಪ್, ವಿಶ್ವಕಪ್, ಆಸ್ಟ್ರೇಲಿಯಾ ಪ್ರವಾಸ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರಾಹುಲ್ ಭಾಗವಹಿಸುವುರಿಂದ ಮಕ್ಕಳ ಮದುವೆ ಒಳ್ಳೆಯ ವಿಶ್ರಾಂತಿ ಸಿಕ್ಕಾಗ ಮಾತ್ರ ನಡೆಯಲಿದೆ ಹಾಗೂ ಕೇವಲ ಒಂದು ದಿನದ ವಿಶ್ರಾಂತಿ ಸಿಗುವ ದಿನದಂದು ಮದುವೆ ಮಾಡಲು ಆಗುವುದಿಲ್ಲ ಎಂದು ಸುನಿಲ್ ಶೆಟ್ಟಿ ಹೇಳಿಕೆ ನೀಡಿದ್ದರು.

ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ ಈ ಜೋಡಿ
ಕೆಎಲ್ ರಾಹುಲ್ ಹಾಗು ಆಥಿಯಾ ಶೆಟ್ಟಿ ಕಳದ ಮೂರು ವರ್ಷಗಳಿಗೂ ಅಧಿಕ ಕಾಲದಿಂದ ಪ್ರೀತಿಯಲ್ಲಿದ್ದು ಜೊತೆಯಾಗಿ ಸುತ್ತಾಡುತ್ತಿದ್ದಾರೆ. ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ಈ ಜೋಡಿ ನಿರ್ಧರಿಸಿದೆ. ಆದರೆ ಮದುವೆ ದಿನಾಂಕಗಳ ಬಗ್ಗೆ ಮಾತ್ರ ಇಬ್ಬರ ಕುಟಂಬಸ್ಥರಿಂದಲೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications