ಬಹುಕಾಲದ ಗೆಳತಿ ಸೋನಂ ವರಿಸಿದ ಫುಟ್ಬಾಲ್ ತಾರೆ ಸುನಿಲ್
ಕೋಲ್ಕತಾ, ಡಿಸೆಂಬರ್ 05: ಭಾರತ ಫುಟ್ಬಾಲ್ ತಂಡ, ಬೆಂಗಳೂರು ಫುಟ್ಬಾಲ್ ಕ್ಲಬ್ ನ ನಾಯಕ ಸುನಿಲ್ ಛೆಟ್ರಿ ಅವರು ಮದುವೆಯಾಗಿದ್ದಾರೆ.
ತಮ್ಮ ಬಹುಕಾಲದ ಗೆಳತಿ ಸೋನಂ ಭಟ್ಟಾಚಾರ್ಯರನ್ನು ನೇಪಾಳಿ ಹಾಗೂ ಬೆಂಗಾಲಿ ಸಂಪ್ರದಾಯದಂತೆ ಮದುವೆ ಸಾಂಗವಾಗಿ ನೆರವೇರಿತು.

ಕೋಲ್ಕತ್ತಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕ್ರೀಡಾಪಟುಗಳು ಹಾಗೂ ರಾಜಕಾರಣಿಗಳು ಕೂಡ ಹಾಜರಾಗಿ, ದಂಪತಿಗಳಿಗೆ ಶುಭಕೋರಿದರು.
ಸಾಂಪ್ರದಾಯಿಕ ನೇಪಾಳಿ ದಿರಿಸಿನಲ್ಲಿ ಛೆಟ್ರಿ, ಕುದುರೆ ಏರಿ ಮದುವೆ ಮಂಟಪಕ್ಕೆ ಆಗಮಿಸಿದರು. ನಂತರ ಬಂಗಾಳದ ಸಾಂಪ್ರದಾಯಿಕ ಉಡುಪು ತೊಟ್ಟು, ತಲೆಗೆ ಕಿರೀಟದಂಥ ಪೇಟ ಇಟ್ಟುಕೊಂಡು ಸೋನಂ ಭಟ್ಟಾಚಾರ್ಯ ಜೊತೆ ಸಪ್ತಪದಿ ತುಳಿದಿದ್ದಾರೆ.
ಕೆಂಪು ಬಣ್ಣದ ಸೀರೆ ಉಟ್ಟಿದ್ದ ಸೋನಂ ಮಿಂಚುತ್ತಿದ್ದರು.ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಸಂಪುಟದ ಹಲವು ಸಚಿವರುಗಳು, ಹಲವಾರು ಕ್ರೀಡಾಪಟುಗಳು ಮದುವೆಗೆ ಆಗಮಿಸಿದರು.
ಬೆಂಗಳೂರು ಎಫ್ ಸಿ ತಂಡದ ಪರದ ನಾಯಕರಾಗಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಆಡುತ್ತಿದ್ದಾರೆ.
ಡಿಸೆಂಬರ್ 24ರಂದು ಬೆಂಗಳೂರಲ್ಲಿ ಸ್ಥಳೀಯ ಗೆಳೆಯರಿಗಾಗಿ ಔತಣಕೂಟ, ಆರತಕ್ಷತೆಯನ್ನು ಆಯೋಜಿಸಲಾಗಿದೆ.
Story first published: Wednesday, January 3, 2018, 10:16 [IST]
Other articles published on Jan 3, 2018
Read in English: Chhetri ties the knot
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications