Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Sushil Kumar: ಸುಶೀಲ್‌ ಕುಮಾರ್ ಜಾಮೀನು ಅರ್ಜಿ ರದ್ದು ಗೊಳಿಸಿದ ಸುಪ್ರೀಂ ಕೋರ್ಟ್‌

ಜೂನಿಯರ್ ಕುಸ್ತಿ ಪಟು ಸಾಗರ್ ಧಂಖರ್ ಕೊಲೆ ಪ್ರಕರಣದಲ್ಲಿ ಆರೋಪಿ ಸುಶೀಲ್‌ ಕುಮಾರ್‌ ಅವರಿಗೆ ಭಾರೀ ಹಿನ್ನಡೆ ಆಗಿದೆ. ಸುಪ್ರೀಂ ಕೋರ್ಟ್‌ ಸ್ಟಾರ್ ಕುಸ್ತಿ ಪಟು ಸುಶೀಲ್ ಕುಮಾರ್ ಅವರ ಜಾಮೀನನ್ನು ರದ್ದುಗೊಳಿಸಿದೆ. ಅಲ್ಲದೆ ಒಂದು ವಾರದೊಳಗೆ ಶರಣಾಗುವಂತೆ ಸುಪ್ರೀಂ ಆದೇಶಿಸಿದೆ. ಇದೇ ಮಾರ್ಚ್‌ನಲ್ಲಿ ಸುಪ್ರೀಂ ಅವರಿಗೆ ದೆಹಲಿ ಹೈ ಕೋರ್ಟ್‌ ನಿಯಮಿತ ಜಾಮೀನು ನೀಡಿತ್ತು. ಈ ಜಾಮಿನನ್ನು ಸುಪ್ರೀಂ ರದ್ದುಗೊಳಿಸಿದೆ.

ಸುಶೀಲ್‌ ಕುಮಾರ್ ಅವರು ಮಧ್ಯಂತರ ಜಾಮೀನನ್ನು ಪಡೆದಾಗಲೆಲ್ಲಾ ಸಾಕ್ಷಿಯನ್ನು ತಿರುಚಿದ ಕಾರ್ಯವನ್ನು ಮಾಡಿದ್ದಾರೆ ಎಂದು ದೂರುದಾರರ ವಕೀಲರಾದ ಜೋಶಿನಿ ತಿಳಿಸಿದ್ದಾರೆ. ಹತ್ಯೆಗೊಳಗಾದ ಸಾಗರ ಅವರ ತಂದೆ ಅಶೋಕ್ ಧಂಖರ್ ಅವರ ಮೇಲ್ಮನವಿ ಸಲ್ಲಿಸಿದ್ದರು. ಹೈ ಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲು ಏರಲಾಗಿತ್ತು. ಇದು ಕಾನೂನು ಬದ್ಧವಾಗಿ ಸರಿಯಲ್ಲ. ಸುಶೀಲ್‌ ಜಾಮೀನು ಮೇಲೆ ಹೊರ ಬಂದಾಗಲೆಲ್ಲಾ ಗಾಯಾಳು ಸಾಕ್ಷಿಗಳನ್ನು ಹಾಗೂ ಇತರೆ ಸಾಕ್ಷಿಗಳನ್ನು ತಿರುಚಿದ್ದರು. ಹೀಗಾಗಿ ಇವರು ಕೆಳ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಂಡಿದ್ದರು. ಪ್ರಕರಣ ಇನ್ನು ನಡೆಯುತ್ತಿದೆ. ಇನ್ನು ಹಲವು ಸರ್ಕಾರಿ ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ ಎಂದು ದೂರದಾರರ ಪರ ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ.

Supreme Court Cancels Wrestler Sushil Kumar s Bail in Sagar Dhankhar Murder Case

ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠ ಬುಧವಾರ ಜಾಮೀನು ಅರ್ಜಿಯನ್ನು ರದ್ದುಗೊಳಿಸಿದೆ. ನ್ಯಾಯಮೂರ್ತಿ ಸಂಜಯ್ ಕರೋಲ್, ತೀರ್ಪಿನ ಮುಖ್ಯ ಭಾಗವನ್ನು ಓದುತ್ತಾ, ಜಾಮೀನು ಆದೇಶದ ವಿರುದ್ಧ ಸಾಗರ್ ಅವರ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಲಾಗಿದೆ. ಸುಶೀಲ್ ಕುಮಾರ್ ಒಂದು ವಾರದೊಳಗೆ ಶರಣಾಗಬೇಕಾಗುತ್ತದೆ ಎಂದು ನ್ಯಾಯಾಧೀಶರು ತಿಳಿಸಿದರು. ಮೃತರ ತಂದೆ ಅಶೋಕ್ ಧಂಖರ್ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಮೃದುಲ್, ಸುಶೀಲ್ ಕುಮಾರ್ ಪರವಾಗಿ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಹಾಜರಿದ್ದರು.

ಏನಿದು ಪ್ರಕರಣ?

ಈ ಪ್ರಕರಣ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ ಸಾಗರ್ ಧಂಕರ್‌ ಅವರ ಹತ್ಯೆಗೆ ಸಂಬಂಧಿಸಿದ್ದಾಗಿದೆ. ಸಾಗರ್‌ ಅವರನ್ನು ಮೇ 5 ರಂದು ಸುಶೀಲ್‌ ಕುಮಾರ್ ಹಾಗೂ ಅವರ ಸ್ನೇಹಿತರು ಥಳಿಸಿದ್ದರು. ದೆಹಲಿಯ ಛತ್ರಸಾಲ್ ಕ್ರೀಡಾಂಗಣದ ಪಾರ್ಕಿಂಗ್ ಸ್ಥಳದಲ್ಲಿ ಆಸ್ತಿ ವಿವಾದದ ಆರೋಪದ ಮೇಲೆ ಸಾಗರ್ ಧಂಕರ್ ಮತ್ತು ಅವರ ಇಬ್ಬರು ಸ್ನೇಹಿತರಾದ ಸೋನು ಮತ್ತು ಅಮಿತ್ ಕುಮಾರ್ ಮೇಲೆ ಸುಶೀಲ್ ಕುಮಾರ್ ಮತ್ತು ಇತರ ಹಲವರ ಮೇಲೆ ಹಲ್ಲೆ ನಡೆಸಿದ ಆರೋಪವಿದೆ.ಈ ಘಟನೆಯಲ್ಲಿ ಥಳಿತಕ್ಕೊಳಗಾದ ಸಾಗರ್ ಸಾವನ್ನಪ್ಪಿದರು. ಇನ್ನು ಹಲವರು ಗಾಯಕ್ಕೆ ತುತ್ತಾಗಿದ್ರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 13 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುಶೀಲ್ ಕುಮಾರ್‌ ಭಾರತದ ಸ್ಟಾರ್ ಕುಸ್ತಿ ಪಟು. ಇವರು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಹಾಗೂ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ. ಅಲ್ಲದೆ ಮೂರು ಬಾರಿ ಕಾಮನ್‌ ವೆಲ್ತ್ ಚಾಂಪಿಯನ್ ಎಂಬ ಹೆಗ್ಗಳಿಕೆ ಇವರದ್ದಾಗಿದೆ.

Story first published: Wednesday, August 13, 2025, 12:49 [IST]
Other articles published on Aug 13, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+