For Quick Alerts
ALLOW NOTIFICATIONS  
For Daily Alerts

ಗ್ಯಾಂಗ್‌ಸ್ಟರ್ ನಂಟಿನಿಂದ ಸುಶೀಲ್ ಕುಮಾರ್ ಅಪರಾಧ ಕ್ಷೇತ್ರಕ್ಕೆ ಪ್ರವೇಶ?!

Sushil Kumar entered crime world through toll business, had formed partnership with Greater Noida gangster

ನವದೆಹಲಿ: ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ರಸ್ಲರ್ ಸುಶೀಲ್ ಕುಮಾರ್‌ಗೆ ಗ್ಯಾಂಗ್‌ಸ್ಟರ್‌ ನಂಟಿತ್ತು. ಇದೇ ಸುಶೀಲ್ ಅಪರಾಧ ಕ್ಷೇತ್ರಕ್ಕೆ ಪ್ರವೇಶಿಸಲು ಕಾರಣ ಎಂದು ದೆಹಲಿ ಪೊಲೀಸರು ಮತ್ತು ಉತ್ತರಪ್ರದೇಶದ ಸ್ಪೆಷಲ್ ಟಾಸ್ಕ್‌ ಫೋರ್ಸ್ (ಎಸ್‌ಟಿಎಫ್‌) ಅನುಮಾನ ವ್ಯಕ್ತ ಪಡಿಸಿದೆ.

ಟೋಲ್ ಬೂತ್‌ ಅನ್ನು ನಡೆಸಬೇಕಾದ ಜವಾಬ್ದಾರಿ ಸಿಕ್ಕಿದಾಗ ಸುಶೀಲ್ ಕುಮಾರ್‌ಗೆ ರೌಡಿಗಳ ನಂಟು ಬೆಳೆಯಿತು. ಟೋಲ್ ಬ್ಯುಸಿನೆಸ್ ನಡೆಸಲು ತೋಳ್ಬಲ ಬೇಕಾಗುತ್ತದೆ ಎಂದು 37ರ ಹರೆಯದ ಸುಶೀಲ್ ಮನಗಂಡರು. ಇದೇ ಕಾರಣಕ್ಕೆ ಸುಶೀಲ್, ರೌಡಿ ಸುಂದರ್ ಭಾಟಿ ಸೋದರಳಿಯ ಅನಿಲ್ ಭಾಟಿ ಸ್ನೇಹ ಬೆಳೆಸಿದ. ಅನಿಲ್ ಹೆಸರಲ್ಲಿ ಈಗಾಗಲೇ ಕೊಲೆ ಮತ್ತು ಇತರ ಕೇಸ್‌ಗಳಿವೆ ಎಂದು ಪೊಲೀಸರು ಹೇಳಿದ್ದಾರೆ.

ಯುಪಿ ಎಸ್‌ಟಿಎಫ್‌ ಹೇಳುವ ಪ್ರಕಾರ, ಶಿವ ಕುಮಾರ್ ಎನ್ನುವ ಬಿಜೆಪಿ ನಾಯಕನನ್ನು ಗ್ರೇಟರ್ ನೋಯ್ಡಾದಲ್ಲಿ ಕೊಲ್ಲಲಾಗಿತ್ತು. ತನಿಖೆ ವೇಳೆ ಟೋಲ್ ವ್ಯವಹಾರ ನಡೆಸುತ್ತಿದ್ದ ಮೂವರನ್ನು ಬಂಧಿಸಲಾಗಿತ್ತು. ಇದೇ ತನಿಖೆಯ ವೇಳೆ ಸುಶೀಲ್‌ಗೂ ಅನಿಲ್‌ ಭಾಟಿಗೂ ಸಂಬಂಧವಿರುವುದು ತಿಳಿದುಬಂದಿತ್ತು.

ದೆಹಲಿ ಸ್ಟೇಡಿಯಂನಲ್ಲಿ ಸಾಗರ್ ರಾಣಾ ಎನ್ನುವ ರಸ್ಲರ್ ಒಬ್ಬರ ಕೊಲೆಯಾಗಿತ್ತು. ಇದಾಗಿ ಸುಶೀಲ್ ಕುಮಾರ್ ಸ್ವಲ್ಪ ದಿನ ತಲೆ ಮರೆಸಿಕೊಂಡಿದ್ದರು. ಬಳಿಕ ಸುಶೀಲ್‌ನನ್ನು ಬಂಧಿಸಿ 10 ದಿನಗಳ ಕಾಲ ಪೊಲೀಸ್ ಸುರ್ಪದಿಯಲ್ಲಿ ಇರಿಸಿಕೊಳ್ಳಲಾಗಿತ್ತು. ರೋಹಿಣಿ ಕೋರ್ಟ್ ಪೊಲೀಸ್ ಸುಪರ್ದಿಯನ್ನು ಮತ್ತೂ 4 ದಿನಗಳ ಕಾಲ ಹೆಚ್ಚಿದೆ.

Story first published: Tuesday, June 1, 2021, 16:07 [IST]
Other articles published on Jun 1, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+