ಬರಿಗಾಲ ಹುಡುಗಿ ಸ್ವಪ್ನಾ ಬರ್ಮನ್ ಬಂಗಾರದ ಓಟದ ಕನಸಿಗೆ ರೆಕ್ಕೆ-ಪುಕ್ಕ!

ನವದೆಹಲಿ, ನವೆಂಬರ್ 5: ಏಷ್ಯನ್ ಗೇಮ್ಸ್ ಮಹಿಳಾ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಭಾರತಕ್ಕೆ ಬಂಗಾರ ಗೆದ್ದಿದ್ದ ಸ್ವಪ್ನಾ ಬರ್ಮನ್ ಅವರಿನ್ನು ಯಾವ ಅಡೆತಡೆಯೂ ಇಲ್ಲದೆ ಬಂಗಾರದ ಓಟವನ್ನು ಮುಂದುವರೆಸಬಹುದು. ಒಂದೊಮ್ಮೆ ಬರಿಗಾಲಲ್ಲಿ ಓಡಿದ್ದ ಬರ್ಮನ್‌ಗೆ ಈ ಏಳು ಜೊತೆ ಶೂಗಳು ಲಭಿಸಿವೆ.
ಓಟಗಾರ್ತಿಯೊಬ್ಬಳು ಏಳುಜೊತೆ ಶೂ ಕೊಂಡುಕೊಳ್ಳೋದರಲ್ಲಿ ಅಂಥದ್ದೇನು ವಿಶೇಷ? ಅನ್ನಂಗಿಲ್ಲ. ಬರ್ಮನ್‌ಳದ್ದು ಆರಾರು ಬೆರಳುಗಳಿರುವ ಅಸಹಜ ಕಾಲು. ಬಡತನದಲ್ಲಿರುವ ಬರ್ಮನ್‌ಳಿಗೆ ಕಾಸು ಒಟ್ಟು ಮಾಡಿ ಶೂ ಕೊಳ್ಳಬೇಕೆಂದರೂ ಅವರ ಕಾಲಿಗೆ ಹೊಂದಿಕೆಯಾಗುವ ಶೂಗಳೇ ಸಿಗುತ್ತಿರಲಿಲ್ಲ. ಈಗ ಬರ್ಮನ್‌ಳಿಗಾಗಿಯೇ ಹೊಸ ಶೂಗಳನ್ನು ಶೂ ಕಂಪನಿಗಳ ದೈತ್ಯ ಅಡಿಡಾಸ್ ನೀಡಿದೆ.
(ಮೇಲಿನ ಟ್ವಿಟರ್ ನಲ್ಲಿ ವೋಗ್ ಇಂಡಿಯಾದಿಂದ ವರ್ಷದ ಮಹಿಳೆ ಗೌರವಕ್ಕೆ ಪಾತ್ರರಾಗಿದ್ದ ಸ್ವಪ್ನಾ)
ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಏಳು ವಿಭಿನ್ನ ಸ್ಪರ್ಧೆಗಳನ್ನೊಳಗೊಂಡ ಕ್ಲಿಷ್ಟಕರ ಹೆಪ್ಟಾಥ್ಲಾನ್ ನಲ್ಲಿ ಸ್ವಪ್ನಾ ಚಿನ್ನ ಜಯಿಸಿದ್ದರು. ಆದರೆ ಅಷ್ಟರಲ್ಲಾಗಲೇ ಬರ್ಮಾನ್‌ಳ ಕಾಲುಗಳಲ್ಲಿನ ಅಸಹಜ ಬೆರಳುಗಳು, ಅವಳ ಬಡ ಕುಟುಂಬ, ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಧರಿಸಲು ಸರಿಯಾದ ಶೂ ಇಲ್ಲದೆ ಈ ಪ್ರತಿಭಾನ್ವಿತೆ ಪಡುತ್ತಿದ್ದ ಪಾಡು-ಪಾಟಲಿಗಳನ್ನು ಮನಗಂಡ ಅಡಿಡಾಸ್ ಸಂಸ್ಥೆ, ಬರ್ಮನ್‌ಳಿಗೆ ಸಹಾಯ ನೀಡಲು ಮುಂದೆ ಬಂದಿತ್ತು.
ಕಳೆದ ಕೆಲ ತಿಂಗಳಿನಿಂದಲೂ ಅಡಿಡಾಸ್ ಈ ನೆಲೆಯಲ್ಲಿ ಕೆಲಸ ಮಾಡುತ್ತಿತ್ತು. ಕ್ರೀಡಾ ಪ್ರಾಧಿಕಾರ, ಅಥ್ಲೆಟಿಕ್ಸ್ ಸೇವೆಗಳಿಗೆ ಸಂಬಂಧಿಸಿದ ತನ್ನದೇ ಲ್ಯಾಬ್ ಗಳ ಸಹಕಾರ ಪಡೆದು, ಬಂಗಾರಕ್ಕಾಗಿ ಓಡುವ ಸ್ವಪ್ನಾಳ ಬಂಗಾರದಂತ ಕಾಲುಗಳಿಗೆ ಒಪ್ಪುವ ಶೂಗಳನ್ನು ತಯಾರಿಸಲು ಪ್ರಯತ್ನಿಸಿತ್ತು. ಈಗ (ನವೆಂಬರ್ 5) ಅಡಿಡಾಸ್, ಬರ್ಮಾನ್‌ಳ ಹೆಪ್ಟಾಥ್ಲಾನ್ ನ ವಿವಿಧ ಈವೆಂಟ್ ಗಳಿಗೆ ಅನುಕೂಲವಾಗುವಂತೆ ಏಳು ವಿಭಿನ್ನ ಶೂಗಳನ್ನು ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications