Paris Olympics 2024: ಭಾರತಕ್ಕೆ ಮೂರನೇ ಪದಕ ತಂದು ಕೊಟ್ಟ ಸ್ವಪ್ನಿಲ್ ಕುಸಾಲೆ
ಆಗಸ್ಟ್ 1 ಗುರುವಾರ, ಭಾರತವು ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಮೂರನೇ ಪದಕವನ್ನು ಗೆದ್ದಿದೆ. ಪುರುಷರ 50 ಮೀಟರ್ ರೈಫಲ್ 3ಪಿ ಫೈನಲ್‌ನಲ್ಲಿ ಭಾರತದ ಸ್ಟಾರ್ ಶೂಟರ್ ಸ್ವಪ್ನಿಲ್ ಕುಸಾಲೆ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಸ್ವಪ್ನಿಲ್ ಕುಸಾಲೆ 451.4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನ 6ನೇ ದಿನವಾದ ಇಂದು ಭಾರತದ ಸ್ವಪ್ನಿಲ್ ಕುಸಾಲೆ ಅವರ ಮೇಲೆ ಭರವಸೆ ಇಟ್ಟಿದ್ದು, ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದಕ್ಕೂ ಮುನ್ನ ಭಾರತ ಶೂಟಿಂಗ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿತ್ತು. ಸ್ಟಾರ್ ಶೂಟರ್ ಮನು ಭಾಕರ್ ಅವರು 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಪ್ಯಾರಿಸ್ ಒಲಿಂಪಿಕ್ಸ್‌ನ ಮೊದಲ ಪದಕವನ್ನು ನೀಡಿದ್ದರು.
ಇದಾದ ಬಳಿಕ ಭಾರತದ ಸ್ಟಾರ್ ಶೂಟರ್‌ಗಳಾದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ಗೆದ್ದಿದ್ದರು.
ಇತಿಹಾಸ ಬರೆದ ಸ್ವಪ್ನಿಲ್
ಪ್ಯಾರಿಸ್‌ನಲ್ಲಿ ತ್ರಿವರ್ಣ ಹಾರಿಸಿದ ಕೊಲ್ಲಾಪುರದ 29 ವರ್ಷದ ಶೂಟರ್‌ಗೆ ಇದು ಚೊಚ್ಚಲ ಒಲಿಂಪಿಕ್ಸ್ ಆಗಿದ್ದು, ಸಿಕ್ಕ ಮೊದಲ ಅವಕಾಶದಲ್ಲೇ ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಕಳೆದ 12 ವರ್ಷಗಳಿಂದ ಒಲಿಂಪಿಕ್ಸ್‌ಗೆ ಆರ್ಹತೆ ಪಡೆಯಲು ಪಯತ್ನ ನಡೆಸುತ್ತಿದ್ದರು.
ಇದೀಗ ಸ್ವಪ್ನಿಲ್ ಕುಸಾಲೆ 451.4 ಅಂಕಗಳಿಸುವ ಮೂಲಕ ಕಂಚಿನ ಪದಕ ಪಡೆದಿದ್ದಾರೆ. ಜೊತೆಗೆ ವಿಶ್ವದ ನಂಬರ್ 1 ಶೂಟರ್ ಅನ್ನು ಸೋಲಿಸಿದ ಸ್ವಪ್ನಿಲ್ ಕುಸಾಲೆ ಭಾರತಕ್ಕೆ ಒಲಿಂಪಿಕ್ ಪದಕ ಗೆದ್ದ 7ನೇ ಶೂಟರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇದೀಗ ಸ್ವಪ್ನಿಲ್ 50 ಮೀಟರ್ ರೈಫಲ್ ಮೂರು ಸ್ಥಾನಗಳಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದ ಶೂಟರ್‌ಗಳು
1) ಅಥೆನ್ಸ್ ಒಲಿಂಪಿಕ್ಸ್ 2004- ರಾಜ್ಯವರ್ಧನ್ ಸಿಂಗ್ ರಾಥೋಡ್- ಬೆಳ್ಳಿ ಪದಕ
2) ಬೀಜಿಂಗ್ ಒಲಿಂಪಿಕ್ಸ್ 2008- ಅಭಿನವ್ ಬಿಂದ್ರಾ- ಚಿನ್ನ ಪದಕ
3) ಲಂಡನ್ ಒಲಿಂಪಿಕ್ಸ್ 2012- ವಿಜಯ್ ಕುಮಾರ್- ಬೆಳ್ಳಿ ಪದಕ
ಗಗನ್ ನಾರಂಗ್- ಕಂಚಿನ ಪದಕ
4) ಪ್ಯಾರಿಸ್ ಒಲಿಂಪಿಕ್ಸ್ 2024- ಮನು ಭಾಕರ್- ಕಂಚಿನ ಪದಕ, ಮಿಶ್ರ ಶೂಟಿಂಗ್ ವಿಭಾಗದಲ್ಲಿ ಸರಬ್ಜೋತ್ ಸಿಂಗ್ ಜೊತೆ ಮನು ಭಾಕರ್- ಕಂಚಿನ ಪದಕ, ಸ್ವಪ್ನಿಲ್ ಕುಸಾಲೆ- ಕಂಚಿನ ಪದಕ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications