Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಯುಎಸ್‌ಎ vs ಐರ್ಲೆಂಡ್‌ ಪಂದ್ಯಕ್ಕೆ ಮಳೆ ಅಡ್ಡಿ; ಪಾಕಿಸ್ತಾನದ ವಿಶ್ವಕಪ್‌ ಕನಸು ನುಚ್ಚುನೂರು!

ಜೂನ್‌ 14 ಶುಕ್ರವಾರ, ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್ 2024ರ ಲೀಗ್ ಹಂತದ ಯುಎಸ್‌ಎ ಮತ್ತು ಐರ್ಲೆಂಡ್ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

ಟಾಸ್‌ ಆರಂಭಕ್ಕೂ ಮುನ್ನ ಶುರುವಾದ ಮಳೆ ನಿಗದಿತ ಸಮಯಕ್ಕೆ ನಿಲ್ಲದ ಕಾರಣ ಪಂದ್ಯವನ್ನು ರದ್ದುಗೊಳಿಸಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಹಂಚಲಾಗಿದೆ. ಯುಎಸ್‌ಎ 5 ಅಂಕಗಳೊಂದಿಗೆ 'ಎ' ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದ್ದು, ಸೂಪರ್-8 ಸುತ್ತಿಗೆ ಆರ್ಹತೆ ಪಡೆದಿದೆ. ಐರ್ಲೆಂಡ್‌ ಕೇವಲ 1 ಅಂಕ ಪಡೆದು ಟೂರ್ನಿಯಿಂದ ಔಟ್‌ ಆಗಿದೆ.

T20 World Cup 2024 USA vs Canada match canceled due to rain

ಇತ್ತ ಯುಎಸ್‌ಎ ವಿರುದ್ಧ ಐರ್ಲೆಂಡ್‌ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದ ಬಾಬರ್‌ ಅಜಮ್‌ ನಾಯಕತ್ವದ ಪಾಕಿಸ್ತಾನ ತಂಡ ಕೂಡ ಟಿ20 ವಿಶ್ವಕಪ್ 2024ರ ಟೂರ್ನಿಯಿಂದ ಹೊರ ಬಿದ್ದಿದೆ. ಇದೀಗ ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನು ಐರ್ಲೆಂಡ್‌ ವಿರುದ್ಧ ಪಾಕಿಸ್ತಾನ ಆಡಲಿದೆ.

ಈ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ಒಟ್ಟು 4 ಅಂಕಗಳನ್ನು ಗಳಿಸಲಿದೆ. ಈಗಾಗಲೇ ಯುಎಸ್‌ಎ 5 ಅಂಕಗಳನ್ನು ಪಡೆದಿರುವುದರಿಂದ ಸೂಪರ್-8ಗೆ ಎಂಟ್ರಿ ಕೊಟ್ಟಿದೆ. ಆರಂಭದಲ್ಲೇ ಯುಎಸ್‌ಎ ಮತ್ತು ಭಾರತದ ವಿರುದ್ಧ ಪಾಕಿಸ್ತಾನ ಸೋತಿರುವುದು ಟೂರ್ನಿಯಿಂದ ಹೊರಗುಳಿಯಲು ಮುಖ್ಯ ಕಾರಣವಾಗಿದೆ.

Story first published: Friday, June 14, 2024, 23:39 [IST]
Other articles published on Jun 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+