Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೊಣಕಾಲೂರಲಿದೆ 'ಟೀಮ್ ಜಿಬಿ' ತಂಡ

Team GB womens soccer team to take the knee at Tokyo Olympics

ಲಂಡನ್: ಜಪಾನ್‌ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟದ ವೇಳೆ ಬ್ರಿಟನ್‌ನ ಮಹಿಳಾ ಫುಟ್ಬಾಲ್ ತಂಡ 'ಟೀಮ್ ಜಿಬಿ' ಮೊಣಕಾಲೂರುವ ಮೂಲಕ ಜನಾಂಗೀಯ ನಿಂದನೆ ಮತ್ತು ಎಲ್ಲಾ ರೀತಿಯ ತಾರಮ್ಯಗಳ ವಿರುದ್ಧ ಜಾಗೃತಿ ಮೂಡಿಸಲಿದೆ.

ಫುಟ್ಬಾಲ್ ಪಂದ್ಯಗಳಿಗೂ ಮುನ್ನ ಟೀಮ್ ಜಿಬಿ ತಂಡ ಮೊಣಕಾಲೂರಿ ಜನಾಂಗೀಯ ನಿಂದನೆ ಮತ್ತು ತಾರತಮ್ಯಗಳ ವಿರುದ್ಧ ಸಂದೇಶ ಸಾರಲಿದೆ ಎಂದು ತಂಡದ ಕೋಚ್ ಹೆಗೆ ರೈಸ್ ಗುರುವಾರ (ಜುಲೈ 15) ಹೇಳಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಜುಲೈ 23ರಿಂದ ಆಗಸ್ಟ್ 8ರ ವರೆಗೆ ನಡೆಯಲಿದೆ.

ಇಂಟರ್ ನ್ಯಾಷನಲ್ ಒಲಿಂಪಿಕ್ಸ್ ಕಮಿಟಿಯ (ಐಒಸಿ) ನಿಯಮ 50ರ ಪ್ರಕಾರ, ಕ್ರೀಡಾ ಸ್ಪರ್ಧೆಗಳಿಗೆ ತೊಂದರೆಯಾಗದಂತೆ, ಕ್ರೀಡಾಕೂಟಕ್ಕೆ ಅಗೌರವ ತೋರದ ರೀತಿಯಲ್ಲಿ ಕ್ರೀಡಾಪಟುಗಳು ಒಳ್ಳೆ ಸಂದೇಶ ಸಾರಲು ಅವಕಾಶವಿದೆ. ಹೀಗಾಗಿ ಐಒಸಿ ಇದಕ್ಕೆ ಅನುಮತಿ ನೀಡಿದ ಬಳಿಕ ಟೀಮ್ ಜಿಬಿ, ಕ್ರೀಡಾಕೂಟದ ವೇಳೆ ಮೊಣಕಾಲೂರಲು ನಿರ್ಧರಿಸಿದೆ.

ಜನಾಂಗೀಯ ನಿಂದನೆ ವಿರುದ್ಧ ಮೊಣಕಾಲೂರಿ ಮೊದಲು ಪ್ರತಿಭಟಿಸಿದ ಕ್ರೀಡಾಪಟುವೆಂದರೆ ಅಮೆರಿಕಾದ ಮಾಜಿ ಫುಟ್ಬಾಲರ್ ಕಾಲಿನ್ ಕೈಪರ್ನಿಕ್. ಬ್ಯಾಕ್‌ ಲೈವ್ಸ್ ಮ್ಯಾಟರ್ (ಕರಿಯದ ಮೇಲಿನ ದೌರ್ಜನ್ಯ) ಭಾಗವಾಗಿ ಹೀಗೆ ಮೊಣಕಾಲೂರಿ ಜನಾಂಗೀಯ ತಾರತಮ್ಯದ ವಿರುದ್ಧ ಧ್ವನಿಯೆತ್ತಲಾಗುತ್ತಿದೆ.

Story first published: Thursday, July 15, 2021, 19:21 [IST]
Other articles published on Jul 15, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+