For Quick Alerts
ALLOW NOTIFICATIONS  
For Daily Alerts

ವಿಶ್ವಕಪ್‌ ಫೈನಲ್‌ನಲ್ಲಿ ಭಾರತಕ್ಕೆ ಸೋಲು; ಬಿಕ್ಕಿ ಬಿಕ್ಕಿ ಅತ್ತ 8 ವರ್ಷದ ಬಾಲಕ ಆಸ್ಪತ್ರೆಗೆ ದಾಖಲು!

By ನಾಗೇಶ್

2023ರ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ನಿರಾಸೆ ಅನುಭವಿಸಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿತು ಮತ್ತು ದಾಖಲೆಯ ಆರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.

ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿತ್ತು. ಆದರೆ ಮೂರನೇ ಬಾರಿಗೆ ವಿಶ್ವಕಪ್‌ ಟ್ರೋಫಿ ಎತ್ತುವ ಆಸೆ ಫಲಿಸಲಿಲ್ಲ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಆರಂಭದಿಂದ ಸೆಮಿಫೈನಲ್‌ವರೆಗಿನ ಎಲ್ಲಾ ಹತ್ತು ಪಂದ್ಯಗಳನ್ನು ಗೆದ್ದುಕೊಂಡಿತು.

Team India Defeat in World Cup 2023 Final; 8-year-old boy Jain Khan Admitted to the hospital!

ಆದರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನಿರೀಕ್ಷಿತ ಸೋಲು ಎದುರಿಸಬೇಕಾಯಿತು. ಈ ಸೋಲಿನಿಂದ ಭಾರತವು 2011ರ ನಂತರ ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಭಾರತದ ಈ ಸೋಲಿನ ನಂತರ, ಭಾರತೀಯ ಕ್ರಿಕೆಟ್ ಆಟಗಾರರಿಂದ ಹಿಡಿದು, ಭಾರತೀಯ ಕ್ರಿಕೆಟ್‌ನ ಕೋಟ್ಯಂತರ ಅಭಿಮಾನಿಗಳು ಸಹ ದುಃಖಿತರಾದ್ದಾರೆ. ಇದೇ ರೀತಿ ಭಾರತದ ಸೋಲನ್ನು ಅರಗಿಸಿಕೊಳ್ಳಲು ವಿಫಲವಾದ ಮಗುವೊಂದು ಬಿಕ್ಕಿ ಬಿಕ್ಕಿ ಅತ್ತಿದೆ.

ದೆಹಲಿ ಸಮೀಪದ ಗುರುಗ್ರಾಮ್‌ನಲ್ಲಿ ವಾಸಿಸುವ 8 ವರ್ಷದ ಮುಗ್ಧ ಮಗು ಬಿಕ್ಕಿ ಬಿಕ್ಕಿ ಅಳುತ್ತಿದ್ದಂತೆಯೇ ಉಸಿರಾಟದ ತೊಂದರೆಯಾಗಲು ಪ್ರಾರಂಭಿಸಿತು ಮತ್ತು ನಂತರ ಆ ಮಗುವನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಆದರೆ, ಈಗ ಮಗು ಚೇತರಿಸಿಕೊಂಡಿದ್ದು, ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ. ಅಳುತ್ತಿದ್ದರಿಂದ ಮಗುವಿಗೆ ಉಸಿರಾಟದ ತೊಂದರೆ ಶುರುವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾದ ಮಗುವಿನ ಹೆಸರು ಜೈನ್ ಖಾನ್. ಮೊದಲಿನಿಂದಲೂ ಈ ವಿಶ್ವಕಪ್‌ನಲ್ಲಿ ಭಾರತದ ಎಲ್ಲಾ ಪಂದ್ಯಗಳನ್ನು ಜೈನ್ ವೀಕ್ಷಿಸುತ್ತಿದ್ದರು ಎಂದು ಮಗುವಿನ ತಂದೆ ಹೇಳಿದ್ದಾರೆ. ಜೈನ್‌ಗೆ ಕ್ರಿಕೆಟ್‌ ಅಂದ್ರೆ ತುಂಬಾ ಇಷ್ಟ. ಹೀಗಾಗಿ ಮಗು ಗಮನ ಕೊಟ್ಟು ನೋಡುತ್ತಾ ಇತ್ತು.

ಫೈನಲ್‌ ಪಂದ್ಯದ ಸಮಯದಲ್ಲಿ ನೀರು ಕುಡಿಯಲು ಸಹ ಏಳುತ್ತಿರಲಿಲ್ಲ. ಆದರೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಹಿನ್ನಡೆ ಅನುಭವಿಸಿದಾಗ ಜೈನ್ ನಿರಾಶೆಗೊಳ್ಳಲು ಪ್ರಾರಂಭಿಸಿದ ಮತ್ತು ಅಂತಿಮವಾಗಿ ಭಾರತ ತಂಡವು ಸೋತಾಗ ಅವನು ಅಳಲು ಪ್ರಾರಂಭಿಸಿದ.

ಕುಟುಂಬಸ್ಥರು ಸಾಂತ್ವನ ಹೇಳಲು ಹರಸಾಹಸಪಟ್ಟರು, ಕೊನೆಗೆ ಉಸಿರಾಟಕ್ಕೆ ತೊಂದರೆಯಾದಾಗ ಆಸ್ಪತ್ರೆಗೆ ಕರೆದೊಯ್ದರು. ಜೈನ್ ಖಾನ್ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿಯಾಗಿದ್ದಾನೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ 50 ಓವರ್‌ಗಳಲ್ಲಿ 240 ರನ್ ಗಳಿಸಿತು. ಆದರೆ ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಆರನೇ ಬಾರಿಗೆ ಏಕದಿನ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಯಿತು.

Story first published: Saturday, November 25, 2023, 12:00 [IST]
Other articles published on Nov 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+