ಪತಿ ಕೋಬ್ ಬ್ರ್ಯಾಂಟ್ ನೆನೆದು ಕಣ್ಣೀರಿಟ್ಟ ಕೋಬ್ ಪತ್ನಿ ವನೆಸ್ಸಾ ಬ್ರ್ಯಾಂಟ್

ವಾಷಿಂಗ್ಟನ್, ಫೆಬ್ರವರಿ 25: ಜನವರಿ 26ರಂದು ಅಕಾಲಿಕ ಸಾವನ್ನಪ್ಪಿದ ಬಾಸ್ಕೆಟ್ ಬಾಲ್ ದಂತಕತೆ ಕೋಬ್ ಬ್ರ್ಯಾಂಟ್ ಮತ್ತು ಅವರ ಪುತ್ರಿ ಗಿಯಾನ್ನಾ ಮಾರಿಯಾ ಒನೋರ್ ಬ್ರ್ಯಾಂಟ್ ಅವರಿಗೆ ಕ್ಯಾಲಿಫೋರ್ನಿಯಾದ ಲಾಸ್ ಏಂಜಲ್ಸ್‌ನಲ್ಲಿರುವ ಸ್ಟೇಪಲ್ಸ್ ಸೆಂಟರ್‌ನಲ್ಲಿ ಸಂತಾಪ ಸೂಚಿಸಲಾಯಿತು.
ಬಾಸ್ಕೆಟ್ ಬಾಲ್ ಕ್ಷೇತ್ರದಲ್ಲಿ ಕೋಬ್ ಬ್ರ್ಯಾಂಟ್ ಮತ್ತು ಗಿಯಾನ್ನಾ ಮಾರಿಯಾ ಅವರ ಸಾಧನೆ, ಸೇವೆಯ ಸ್ಮರಣಾರ್ಥವಾಗಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೋಬ್ ಪತ್ನಿ ವನೆಸ್ಸಾ ಬ್ರ್ಯಾಂಟ್, ಅಗಲಿದ ಪತಿ ಮತ್ತು ಪುತ್ರಿಯನ್ನು ಸ್ಮರಿಸಿ ಭಾವುಕರಾದರು. ಕೋಬ್ ಮತ್ತು ಗಿಯಾನ್ನ ಅವರನ್ನು ಸ್ಮರಿಸಿ, ಕಣ್ಣು ಪಾಸೆಯಾಗಿಸಿಕೊಂಡು ವನೆಸ್ಸಾ ಆಡಿರುವ ಮಾತುಗಳ ವೀಡಿಯೋ ವೈರಲ್ ಆಗಿದೆ.
ಅಪ್ಪನಂತೆ ಮಗಳು ಗಿಯಾನ್ನಾ ಕೂಡ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿದ್ದರಿಂದ ಕಳೆದ ಜನವರಿ 26ರ ಭಾನುವಾರ ತೌಂಸಾಂಡ್ ಓಕಾಸ್‌ನ ಮಂಬಾ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಬೇಕಿದ್ದ ಬಾಸ್ಕೆಟ್‌ಬಾಲ್ ಪಂದ್ಯವೊಂದರಲ್ಲಿ ಪಾಲ್ಗೊಳ್ಳಲು ಬ್ರ್ಯಾಂಟ್ ಮತ್ತು ಗಿಯಾನ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದರು. ಮಗಳಿದ್ದ ತಂಡಕ್ಕೆ ಕೋಚ್ ಆಗಿದ್ದರಿಂದ ಬ್ರ್ಯಾಂಟ್ ಕೂಡ ಹೆಲಿಕಾಪ್ಟರ್‌ನಲ್ಲಿದ್ದರು.
ಬ್ರ್ಯಾಂಟ್, ಗಿಯಾನ್ನಾ ಅವರಿದ್ದ ಹೆಲಿಕಾಪ್ಟರ್, ಕ್ಯಾಲಿಫೋರ್ನಿಯಾದ ಕಾಲಬಾಸಾಸ್ ಎಂಬ ಬೆಟ್ಟದ ಬಳಿ ಅಪಘಾತಕ್ಕೀಡಾಗಿ, 41ರ ಹರೆಯದ ಕೋಬ್ ಬ್ರ್ಯಾಂಟ್ ಮತ್ತು 13ರ ಹರೆಯದ ಗಿಯಾನ್ನ ಇಬ್ಬರೂ ಕೊನೆಯುಸಿರೆಳೆದಿದ್ದರು. ಕ್ರೀಡಾತಾರೆ ಕೋಬ್ ಮತ್ತು ಪುತ್ರಿ ಗಿಯಾನ್ನಾರ ನಿಧನಕ್ಕೆ ಭಾರತವೂ ಸೇರಿ ವಿಶ್ವದ ಕ್ರೀಡಾ ಅಭಿಮಾನಿಗಳು ಸಂತಾಪ ಸೂಚಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications