ಭಾರತದ ಸಾಯಿ ಪ್ರಣೀತ್ ಮುಡಿಗೆ ಥಾಯ್ಲೆಂಡ್ ಓಪನ್
ಬ್ಯಾಂಕಾಕ್, ಜೂನ್ 04 : ಭಾರತದ ಸ್ಟಾರ್ ಶೆಟ್ಲರ್ ಸಾಯಿ ಪ್ರಣೀತ್ ಅವರು ಇಲ್ಲಿ ನಡೆದ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಭಾನುವಾರ ಬರೋಬ್ಬರಿ ಒಂದು ತಾಸು 11 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಇಂಡೊನೇಷ್ಯಾದ 19ನೇ ಶ್ರೇಯಾಂಕದ ಜೋನಾಥನ್ ಕ್ರಿಸ್ಟಿ ಅವರ ಎದುರು ಸಾಯಿ ಪ್ರಣೀತ್ 17-21, 21-18, 21-19 ಅಂತರದಿಂದ ಜಯಿಸಿ 1,20,000 ಡಾಲರ್ ಮೊತ್ತವನ್ನು ತಮ್ಮದಾಗಿಸಿಕೊಂಡರು.[ಶ್ರೀಕಾಂತ್ ಸೋಲಿಸಿ ಸಿಂಗಪುರ ಓಪನ್ ಗೆದ್ದ ಪ್ರಣೀತ್]

ಆರಂಭಿಕ ಹಿನ್ನಡೆಯಿಂದ ಎದೆ ಗುಂದದೆ ಕೆಚ್ಚೆದೆಯಿಂದ ಹೋರಾಡಿದ ಭಾರತದ ಸಾಯಿ ಪ್ರಣೀತ್ ಕೊನೆಯ ಎರಡು ಸುತ್ತಿನಲ್ಲಿ ಜಯಗಳಿಸಿದರು.
ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಆಟಗಾರ 21-11,21-15ರಿಂದ ಸ್ಥಳೀಯ ಆಟಗಾರ ಪೊನ್ನವಿತ್ ತೊಂಗ್ ನುವಮ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು.
Story first published: Wednesday, January 3, 2018, 10:16 [IST]
Other articles published on Jan 3, 2018
Read in English: Sai Praneeth win Thailand Open
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications